*  ಚಿಕನ್ ಖರೀದಿ : ಸನ್ನಿ ಅಭಿಮಾನಿಗಳಿಗೆ ಡಿಸ್ಕೌಂಟ್•  ಮಂಡ್ಯದಲ್ಲೊಬ್ಬ ಸನ್ನಿ ಲಿಯೋನ್ ವಿಶೇಷ ಅಭಿಮಾನಿ •  ಡಿಸ್ಕೌಂಟ್ ಪಡೆಯಲು 3 ಷರತ್ತುಗಳು ಅನ್ವಯ  

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ(ಏ.14): ಹಬ್ಬದ ಸಂದರ್ಭ, ವಿಶೇಷ ದಿನಗಳಲ್ಲಿ ವ್ಯಾಪಾರಸ್ಥರು ಗ್ರಾಹಕರನ್ನ ಆಕರ್ಷಿಸಲು ಭರ್ಜರಿ ರಿಯಾಯಿತಿ ನೀಡುವುದು ಸಾಮಾನ್ಯ. ಆದರೆ ಮಂಡ್ಯದ(Mandya) ಯುವಕನೊಬ್ಬ ಸನ್ನಿ ಲಿಯೋನ್ ಮೇಲಿನ ಅಭಿಮಾನದಿಂದ ಚಿಕನ್ ಖರೀದಿಗೆ ಬರುವ ಸನ್ನಿ ಅಭಿಮಾನಿಗಳಿಗೆ 10% ರಿಯಾಯಿತಿ ನೀಡುವ ಮೂಲಕ ಅಭಿಮಾನ ತೋರುತ್ತಿದ್ದಾನೆ. ಆದರೆ ರಿಯಾಯಿತಿ ಪಡೆಯಲು ಆತ 3 ಷರತ್ತುಗಳನ್ನು ವಿಧಿಸಿದ್ದು. ಸನ್ನಿ ಫ್ಯಾನ್ಸ್ ಡಿಸ್ಕೌಂಟ್ ಪಡೆಯಲು 3 ಷರತ್ತುಗಳನ್ನ ಪೂರೈಸಲೇಬೇಕಿದೆ. 

ಸನ್ನಿ ಲಿಯೋನ್ ಸಾಮಾಜಿಕ ಕಳಕಳಿಗೆ ಫಿದಾ

ಕಾರಸವಾಡಿ ಗ್ರಾಮದ ನಿವಾಸಿಯಾಗಿರುವ ಪ್ರಸಾದ್(Prasad) ನಟಿ ಸನ್ನಿ ಲಿಯೋನ್‌ರ(Sunny Leone) ಅಪ್ಪಟ ಅಭಿಮಾನಿಯಾಗಿದ್ದಾರೆ. ಮಾಜಿ ನೀಲಿಚಿತ್ರ ತಾರೆಯಾಗಿದ್ದರು ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ(Indian Film Indurstry) ಹೆಸರಾಂತ ನಟಿ ಎನಿಸಿಕೊಂಡಿರುವ ಸನ್ನಿ ಲಿಯೋನ್ ತಮ್ಮ ಸಾಮಾಜಿಕ ಕೆಲಸಗಳ(Social Work) ಮೂಲಕ ಇತರರಿಗೂ ಪ್ರೇರಣೆಯಾಗಿದ್ದಾರೆ. ಪ್ರಸಾದ್ ಕೂಡ ಸನ್ನಿಯ ಸಾಮಾಜಿಕ ಸೇವೆಗೆ ಮನಸೋತಿದ್ದು. ಹಲವು ವರ್ಷಗಳಿಂದ ಅಪ್ಪಟ ಅಭಿಮಾನಿಯಾಗಿದ್ದಾರೆ‌(Fan). ಕಳೆದ 2 ವರ್ಷಗಳ ಹಿಂದೆ ಮಂಡ್ಯದ ನೂರಡಿ ರಸ್ತೆಯಲ್ಲಿ ಚಿಕನ್ ಅಂಗಡಿ(Chicken Shop) ಆರಂಭಿಸಿರುವ ಪ್ರಸಾದ್. ಸನ್ನಿ ಮೇಲಿನ ಅಭಿಮಾನಿಕ್ಕೆ ಇತರೆ ಅಭಿಮಾನಿಗಳಿಗೂ ತನ್ನ ವ್ಯಾಪಾರದಲ್ಲಿ ವರ್ಷಪೂರ್ತಿ ಡಿಸ್ಕೌಂಟ್(Discount) ನೀಡುವ ಮೂಲಕ ಗಮನಸೆಳೆದಿದ್ದಾನೆ.

ಮಂಡ್ಯದಲ್ಲಿ KGF 2 ಹವಾ: ಈಡುಗಾಯಿ ಒಡೆದು ಅಭಿಮಾನಿಗಳ ಸಂಭ್ರಮ

ಫೇಸ್‌ಬುಕ್‌, ಇನ್ಸ್ಟಾದಲ್ಲಿ ಸನ್ನಿ ಫಾಲೋ, ಕನಿಷ್ಠ 10 ಫೋಟೋ, ಲೈಕ್ಸ್ ಕಮೆಂಟ್ಸ್ ಕಡ್ಡಾಯ

ಅಂದಹಾಗೆ ಪ್ರಸಾದ್ ಸುಖಾ ಸುಮ್ಮನೆ ಡಿಸ್ಕೌಂಟ್ ಘೋಷಣೆ ಮಾಡಿಲ್ಲ. ತನ್ನ ಅಂಗಡಿಯಲ್ಲಿ ಚಿಕನ್ ಖರೀದಿಸುವ ಸನ್ನಿ ಲಿಯೋನ್ ಅಭಿಮಾನಿಗಳು ಶೇ.10ರಷ್ಟು ಡಿಸ್ಕೌಂಟ್ ಪಡೆಯಲು 3 ವಿಧಿಸಿದ್ದಾನೆ. ಮೂರು ಪ್ರಮುಖ ಷರತ್ತುಗಳನ್ನ ಪೂರೈಸುವ ಅಭಿಮಾನಿಗೆ ಮಾತ್ರ ರಿಯಾಯಿತಿ ಲಾಭ ಸಿಗುತ್ತಿದೆ.

ಫೇಸ್ಬುಕ್(Facebook), ಇನ್‌ಸ್ಟಾಗ್ರಾಂನಲ್ಲಿ(Instagram) ಸನ್ನಿ ಲಿಯೋನ್‌ರನ್ನು ಫಾಲೋ ಮಾಡಬೇಕು ಅನ್ನೋದು ಮೊದಲ ಷರತ್ತು ಆದರೆ. ತಮ್ಮ ಮೊಬೈಲ್‌ಗಳಲ್ಲಿ ನಟಿಯ ಕನಿಷ್ಟ 10 ಫೋಟೋ ಇಟ್ಟುಕೊಂಡಿರಬೇಕು. ಸನ್ನಿಯ ಎಲ್ಲ ಚಿತ್ರಗಳಿಗೂ ಲೈಕ್, ಕಾಮೆಂಟ್ ಮಾಡಿರಬೇಕೆಂದು 3 ಷರತ್ತಗಳನ್ನು ಹಾಕಿದ್ದಾನೆ. ಡಿಸ್ಕೌಂಟ್ ಹಾಗೂ ಷರತ್ತುಗಳ ಬಗ್ಗೆ ಅಂಗಡಿ ಒಳಭಾಗದಲ್ಲಿ ನಾಮಫಲಕ ಅಳವಡಿಸಿರುವ ಪ್ರಸಾದ್ ಷರತ್ತುಗಳನ್ನು ಪರಿಶೀಲಿಸಿ ಖಚಿತವಾದ ನಂತರ ಡಿಸ್ಕೌಂಟ್ ನೀಡುತ್ತಿದ್ದಾನೆ. ಪ್ರತಿನಿತ್ಯ 2-3 ಮೂರು ಅಭಿಮಾನಿಗಳು ರಿಯಾಯಿತಿ ಲಾಭ ಪಡೆಯುತ್ತಿದ್ದಾರೆ.