ಮಂಡ್ಯ (ಜೂ.04): ಬಸ್‌ಗಳ ಸೇವೆಯ ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಕೇರಳ ರಾಜ್ಯದ ಪಾಲಾಗಿರುವ ಹಿನ್ನೆಲೆಯಲ್ಲಿ  ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ  ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್  ನೆನಪಿನಾರ್ಥ ಬಾಬಾಸಾಹೇಬ್ ಸಾರಿಗೆ ಎಂದು ಹೆಸರು ಇಡಬೇಕು ಎಂದು ರಾಜ್ಯ ಸರ್ಕಾರವನ್ನು ಸಂಸದೆ ಸುಮಲತಾ ಅಂಬರೀಶ್ ಕೋರಿದ್ದಾರೆ.

KSRTC ಕಳಕೊಂಡ ಕರ್ನಾಟಕ; ಲೋಗೋ, ಹೆಸರು ನಮ್ಮದಲ್ಲ! ...

 ರಾಜ್ಯದ ಮೂಲೆ ಮೂಲೆಗೂ ತಲುಪಿ ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತಲುಪಿಸುವ  ಬಸ್ಸುಗಳ ಸೇವೆಯು ಟ್ರೇಡ್ ಮಾರ್ಕ್ ಗಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಕಳೆದ 27 ವರ್ಷಗಳಿಂದ ಕಾನೂನು ಹೋರಾಟದ ಹಾದಿಯನ್ನು ಹಿಡಿದಿದ್ದವು.

ರಾಜಕೀಯಕ್ಕಾಗಿ ನನ್ನ ವಿರುದ್ಧ ಸುಳ್ಳು ಆರೋಪ : ಸುಮಲತಾ ಅಂಬರೀಶ್

 ಸತತ 27 ವರ್ಷಗಳ ಕಾನೂನು ಹೋರಾಟದ ನಂತರ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  ಬಸ್ಸುಗಳ ಸೇವೆಯ ಟ್ರೇಡ್ ಮಾರ್ಕ್ ಕೇರಳ ರಾಜ್ಯದ ಪಾಲಾಗಿದೆ.  

ಈ ಹಿನ್ನೆಲೆಯಲ್ಲಿ ರಾಜ್ಯದ ಸಾರಿಗೆ ನಿಗಮಕ್ಕೆ ಬಾಬಾ ಸಾಹೇಬ್ ಸಾರಿಗೆ ಎಂದು ಮರುನಾಮಕರಣ ಮಾಡುವಂತೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಿಗೆ ಪತ್ರ ಮೂಲಕ ಸುಮಲತಾ ಮನವಿ ಮಾಡಿದ್ದಾರೆ.