ಪಾಂಡವಪುರ (ನ.12):  ತಾಲೂಕಿನ ಕೆನ್ನಾಳು ಗ್ರಾಪಂ ವ್ಯಾಪ್ತಿಯ ಚಿಕ್ಕಮ್ಮ-ದೊಡ್ಡಮ್ಮ ದೇವಸ್ಥಾನದ ಬಳಿ ಇರುವ ಹುಲಿದುರ್ಗದ ಅಜ್ಜಮ್ಮ ತಾಯಿ ದೇವಸ್ಥಾನಕ್ಕೆ ವಿದ್ಯುತ್‌ ಸಂಪರ್ಕಕ್ಕೆ ಸಂಸದೆ ಸುಮಲತಾ ಅಂಬರೀಷ್ ಚಾಲನೆ ನೀಡಿದರು.

ಕಳೆದ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಷ್ ಗೆಲುವಿಗೆ ಪ್ರಾರ್ಥಿಸಿ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಅಂಬಿ ಸುಬ್ಬಣ್ಣ ಅವರು ದೇವಸ್ಥಾನಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದಾಗಿ ಹರಕೆ ಮಾಡಿಕೊಂಡಿದ್ದ ಹಿನ್ನೆಲೆ, ದೇವಸ್ಥಾನಕ್ಕೆ ಇದೀಗ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದರಿಂದ ಸಂಸದೆ ಸುಮಲತಾ ಅವರು ಸ್ವಿಚ್‌ ಅದುಮುವ ಮೂಲಕ ವಿದ್ಯುತ್‌ ಸಂಪರ್ಕಕ್ಕೆ ವಿಧ್ಯಕ್ತವಾಗಿ ಚಾಲನೆ ನೀಡಿ ಶುಭ ಹಾರೈಸಿದರು.

ರಾಜ​ಕೀಯ ಪಕ್ಷ ಸೇರ್ಪಡೆ ವಿಚಾರ : ಸಂಸದೆ ಸುಮಲತಾ ಸ್ಪಷ್ಟನೆ ..

ಸಾರ್ವಜನಿಕರಿಂದ ಅಹವಾಲು ಸಲ್ಲಿಕೆ : ಈ ವೇಳೆ ಪಾಲ್ಕನ್‌ ಕಾರ್ಖಾನೆ, ಪಿಎಸ್‌ಎಸ್‌ಕೆ ನಿವೃತ್ತ ನೌಕರರು, ಅಂಗವಿಕಲರು ಸೇರಿದಂತೆ ಹಲವರು ಸಾರ್ವಜನಿಕರು ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಅಹವಾಲು ಸಲ್ಲಿಸಿದರು. ಅಂಬರೀಶ್‌ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಅಂಬಿ ಸುಬ್ಬಣ್ಣ, ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್‌, ಮುಖಂಡ ಮದನ್‌, ವಿನಯ್‌, ಆಟೋ ಜಲೇಂದ್ರ, ರೂಪೇಶ್‌, ಕಾಂಗ್ರೆಸ್‌ ತಾಲೂಕು ಯುವ ಉಪಾಧ್ಯಕ್ಣ ಅಭಿಷೇಕ್‌, ತಹಸೀಲ್ದಾರ್‌ ಪ್ರಮೋದ್‌ ಎಲ್‌. ಪಾಟೀಲ್‌, ಇಒ ಮಹೇಶ್‌, ಸೆಸ್ಕ್‌ ಎಇಇ ವಿ.ಪುಟ್ಟಸ್ವಾಮಿ, ಪಿಡಿಒ ಶ್ರೀನಿವಾಸ್‌, ಅರ್ಚಕ ಕೆನ್ನಾಳು ಗೋಪಣ್ಣ ಇತರರಿದ್ದರು.