ಪಾಂಡವಪುರ (ನ.11): ನಾನು ರಾಜಕೀಯದಲ್ಲಿ ಮುಂದುವರಿಯಬೇಕು ಬೇಡ ಎನ್ನುವುದು ಜನ​ರಿಗೆ ಬಿಟ್ಟವಿಚಾರ. ಆದರೆ, ರಾಜ​ಕೀಯ ಪಕ್ಷ ಸೇರುವ ಉದ್ದೇಶ ನನ್ನ​ದಲ್ಲ ಎಂದು ಸಂಸದೆ ಸುಮ​ಲತಾ ಸ್ಪಷ್ಟ​ಪ​ಡಿ​ಸಿ​ದರು.

ತಾಲೂಕಿನ ಎರೇಗೌಡನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಶೀಲಾನ್ಯಾಸ ನೆರ​ವೇ​ರಿಸಿ ಮಾತನಾಡಿ, ಮಂಡ್ಯ ಜನರು ನನ್ನನ್ನು ಕರೆತಂದಿದ್ದಾರೆ. ಜನರ ಅಭಿಲಾಷೆಯಂತೆ ನಿರ್ಧಾರ ಕೈಗೊಳ್ಳುತ್ತೇನೆ ಎಂದರು. ಭಕ್ತಿ ಇರುವ ಕಡೆಗೆ ದೇವರು, ಪ್ರೀತಿ ಇರುವ ಕಡೆಗೆ ಜನರು ಕರೆಸಿಕೊಳ್ಳದೇ ಬಿಡಲಾರರು.

ನಿಮ್ಮ ಪ್ರೀತಿ, ವಿಶ್ವಾಸಕ್ಕೆ ತಲೆಬಾಗಿ ಈ ದಿನ ದೇವಸ್ಥಾನಕ್ಕೆ ಬಂದಿದ್ದೇನೆ. ಈ ಭಾಗದ ಜನರು ಶೇ.80ರಷ್ಟುಮಂದಿ ನನಗೆ ಮತ ನೀಡಿ ಆಶೀರ್ವಾದ ಮಾಡಿದ್ದಾರೆ. ಸೇವೆ ಮೂಲಕ ನಿಮ್ಮ ಆ ಋುಣ ತೀರಿಸುವೆ ಎಂದು ತಿಳಿಸಿದರು.

ಕಾಂಗ್ರೆಸ್ ಪರವಾಗಿ ನಿಂತ ಸುಮಲತಾ : ನನಗೆ ಬೆಂಬಲಿಸಿದ್ದಕ್ಕೆ ಸಪೋರ್ಟ್ ಎಂದ ಸಂಸದೆ ...

ಈ ವೇಳೆ ಬೆಲ್ಲದಾರತಿ ಬೆಳಗಿ ಸುಮಲತಾ ಅವರನ್ನು ಬಹಳ ಆತ್ಮೀಯತೆಯಿಂದ ಸ್ವಾಗತಿಸಿದರು. ಅಂಬರೀಶ್‌ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್‌, ಮುಖಂಡರಾದ ಮದನ್‌, ದೀಪು, ತಹಸೀಲ್ದಾರ್‌ ಪ್ರಮೋದ್‌ ಎಲ್ .ಪಾಟೀಲ್, ದೇವಸ್ಥಾನದ ಟ್ರಸ್ವ್‌ ಅಧ್ಯಕ್ಷ ಎನ್‌.ರವಿಕುಮಾರ್‌, ಕಾರ್ಯದರ್ಶಿ ಎಂ.ಗಂಗಾಧರ್‌, ನಿವೃತ್ತ ಶಿಕ್ಷಕರಾದ ಎಂ.ಗಂಗಾಧರ್‌, ಎ.ಸಿ.ಜವರೇಗೌಡ, ಗ್ರಾ.ಪಂ ಮಾಜಿ ಸದಸ್ಯರಾದ ಮಾಲೇಗೌಡ, ಲಕ್ಷ್ಮೀದೇವಮ್ಮ, ಎಂಪಿಸಿಎಸ್‌ ಅಧ್ಯಕ್ಷೆ ಮಮತಾ, ಕಾರ್ಯದರ್ಶಿ ಕನ್ಯಾಕುಮಾರಿ, ಗುಡ್ಡಪ್ಪ$ ವರದರಾಜು, ಅರ್ಚಕ ಪ್ರಸಾದ್‌, ಟ್ರಸ್ವ್‌ನ ಸದಸ್ಯರು, ಗ್ರಾಮದ ಮುಖಂಡರು ಭಾಗ​ವಹಿ​ಸಿ​ದ್ದರು. ಇದೇ ವೇಳೆ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರಿಗೆ ಮನವಿ ಸಲ್ಲಿಸಲಾಯಿತು.