ನಾಗಮಂಗಲ (ನ.06):  ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್‌ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಿದೆ. ಅಧ್ಯಕ್ಷರಾಗಿ ಎನ್‌.ಜೆ.ಆಶಾ, ಉಪಾಧ್ಯಕ್ಷರಾಗಿ ಜಾಫರ್‌ ಷರೀಫ್‌ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ಪರವಾಗಿ ಸಂಸದೆ ಸುಮಲತಾ ಅಂಬರೀಷ್‌ ಮತ ಹಾಕಿದ್ದರೂ ಇದು ಫಲಿಸಲಿಲ್ಲ. ಒಂದು ಮತ ಅಧಿಕವಾಗಿದ್ದ ಜೆಡಿಎಸ್‌ ಪಕ್ಷ ಅಧಿಕಾರವನ್ನು ತನ್ನದಾಗಿಸಿಕೊಂಡು ಮೊದಲ ಪುರಸಭೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿ ಸಾಧಿಸಿತು.

ಲೋಕಸಭೆ ಚುನಾವಣೆಯಲ್ಲಿ ನನ್ನ ಪರ ದುಡಿದವರಿಗಾಗಿ ಪುರಸಭೆಯಲ್ಲಿ ಅವರ ಪರವಾಗಿ ಮತ ಹಾಕಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಷ್‌ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿದ್ದನ್ನು ಸಮರ್ಥಿಸಿಕೊಂಡರು.

ಫಲಿತಾಂಶಕ್ಕೂ ಮುನ್ನ ಸೋಲೊಪ್ಪಿಕೊಂಡ HDK : ಬದಲಾವಣೆ ಸೂಚನೆ ಕೊಟ್ರು ...

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪರವಾಗಿ ದುಡಿದವರಿಗೆ ನಾನು ಚುನಾವಣೆಯಲ್ಲಿ ಸಹಾಯ ಮಾಡುವುದು ಕರ್ತವ್ಯ. ಇಲ್ಲಿ ಯಾರೇ ಅಧ್ಯಕ್ಷ ಉಪಾಧ್ಯಕ್ಷರಾದರೂ ಜನ ಸಾಮಾನ್ಯರ ಕೆಲಸ ಮಾಡಬೇಕು. ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಸಲ್ಲದು ಎಂದರು.

 ಶ್ರೀರಂಗಪಟ್ಟಣ ಪುರಸಭಾ ಚುನಾವಣೆಯಲ್ಲಿಯೂ ಭಾಗವಹಿಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ನನಗೆ ಬೆಂಗಳೂರಿನಲ್ಲಿ ಒಂದು ಮುಖ್ಯವಾದ ಸಭೆ ಇರುವುದರಿಂದ ಅಲ್ಲಿಗೆ ಹೋಗಲ್ಲ ಎಂದರು. ನಂತರ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಸೌಮ್ಯಕೇಶವ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿ, ಹೊರಟರು.