Asianet Suvarna News Asianet Suvarna News

ಆತ್ಮಹತ್ಯೆಯೇ ಸಮಸ್ಯೆಗೆ ಪರಿಹಾರವಲ್ಲ: ಶಾಸಕ ಕಾಗೆ

ಸಾಲ ಮಾಡಿದ್ದಲ್ಲಿ ದುಡಿದು ತೀರಿಸಬೇಕು. ಇಲ್ಲವೇ ಸರ್ಕಾರದ ನೆರವು ಪಡೆಯಬೇಕು. ಸಂಕಷ್ಟದಲ್ಲಿನ ರೈತರು ವಿಷಯವನ್ನು ಸರ್ಕಾರದ ಗಮನಕ್ಕೆ ತಂದಲ್ಲಿ ಸರ್ಕಾರದಿಂದ ಸಹಕಾರ ಸಿಗುತ್ತದೆ ಎಂದು ಭರವಸೆ ನೀಡಿದ ಶಾಸಕ ರಾಜು ಕಾಗೆ 

Suicide is Not the Solution to the Problem Says MLA Raju Kage grg
Author
First Published Nov 17, 2023, 4:00 AM IST

ಕಾಗವಾಡ(ನ.17):  ಆತ್ಮಹತ್ಯೆ ಮಾಡಿಕೊಳ್ಳುವುದು ಸಮಸ್ಯೆಗೆ ಪರಿಹಾರವಲ್ಲ. ರೈತರು ಎಂಥಹ ಸಂದರ್ಭದಲ್ಲಿಯೂ ಗಟ್ಟಿಯಾಗಿ ನಿಂತು ಸಮಸ್ಯೆ ಎದುರಿಸಬೇಕು. ಈಚೆಗೆ ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದು ಶಾಸಕ ರಾಜು ಕಾಗೆ ಕಳವಳ ವ್ಯಕ್ತಪಡಿಸಿದರು.

ಉಗಾರ ಪಟ್ಟಣದಲ್ಲಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ಕೃಷ್ಣಾ-ಕಿತ್ತೂರ ಗ್ರಾಮದ ಕಾಡಪ್ಪ ಮಾಣಿಕ ಪಾಟೀಲ ರೈತನ ವಾರಸುದಾರರಿಗೆ ಕೃಷಿ ಇಲಾಖೆಯಿಂದ ಮಂಜೂರಾದ ₹5 ಲಕ್ಷ ಚೆಕ್‌ನ್ನು ಬುಧವಾರ ವಿತರಿಸಿ ಮಾತನಾಡಿದ ಅವರು, ಸಾಲ ಮಾಡಿದ್ದಲ್ಲಿ ದುಡಿದು ತೀರಿಸಬೇಕು. ಇಲ್ಲವೇ ಸರ್ಕಾರದ ನೆರವು ಪಡೆಯಬೇಕು. ಸಂಕಷ್ಟದಲ್ಲಿನ ರೈತರು ವಿಷಯವನ್ನು ಸರ್ಕಾರದ ಗಮನಕ್ಕೆ ತಂದಲ್ಲಿ ಸರ್ಕಾರದಿಂದ ಸಹಕಾರ ಸಿಗುತ್ತದೆ ಎಂದು ಭರವಸೆ ನೀಡಿದರು.

ಎಕರೆಗೆ 4 ಕೋಟಿ ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ವಿಶ್ವನಾಥ ಪಾಟೀಲ, ರಾಜು ಮದನೆ, ಅಪ್ಪು ಹುಲಗಬಾಳಿ, ಮುತ್ತಣ್ಣ ಪಾಟೀಲ, ಶಂಕರ ವಾಘಮೊಡೆ, ಡಾ.ಅರವಿಂದರಾವ್ ಕಾರ್ಚಿ, ವಸಂತ ಖೋತ, ಸಂಜಯ ಶಿಂಧೆ, ಸುರೇಶ ವಾಘಮೊಡೆ, ಅಣ್ಣಪ್ಪ ಖೋತ, ವೀರಭದ್ರ ಕಟಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Follow Us:
Download App:
  • android
  • ios