ಅನೇಕ ರೀತಿಯ ಸಮಾಜಮುಖಿ ಸೇವೆಗಳಲ್ಲಿ ತೊಡಗಿರುವ ಸುಧಾಮೂರ್ತಿ  ಇದೀಗ ಮೈಸೂರು ಮೃಗಾಲಯಕ್ಕೆ ಲಕ್ಷಾಂತರ ರು. ದೇಣಿಗೆ ನೀಡಿ ನೆರವಾಗಿದ್ದಾರೆ

ಮೈಸೂರು (ಅ.02): ಇಸ್ಫೋಸಿಸ್‌ ಫೌಂಡೇಷನ್‌ನ ಡಾ.ಸುಧಾಮೂರ್ತಿ ಅವರು ಚಾಮರಾಜೇಂದ್ರ ಮೃಗಾಲಯಕ್ಕೆ 2ನೇ ಬಾರಿಗೆ . 20 ಲಕ್ಷ ದೇಣಿಗೆ ನೀಡಿದ್ದಾರೆ. ಲಾಕ್‌ಡೌನ್‌ ಸಂಕಷ್ಟದ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮನವಿಗೆ ಸ್ಪಂದಿಸಿ ಮೇ 11 ರಂದು .20 ಲಕ್ಷ ದೇಣಿಗೆಯನ್ನು ಸುಧಾಮೂರ್ತಿ ನೀಡಿದ್ದರು.

 ಈಗ ಮತ್ತೊಮ್ಮೆ ಮೃಗಾಲಯಕ್ಕೆ ದೇಣಿಗೆ ನೀಡುವ ಮೂಲಕ ಇಲ್ಲಿನ ಪ್ರಾಣಿಗಳ ಆರೋಗ್ಯ ಮತ್ತು ನಿರ್ವಹಣೆಗೆ ಮುಂದಾಗಿದ್ದಾರೆ. ಒಟ್ಟಾರೆ ಮೃಗಾಲಯದ ಪ್ರಾಣಿಗಳ ಕಲ್ಯಾಣಕ್ಕಾಗಿ .40 ಲಕ್ಷ ದೇಣಿಗೆಯನ್ನು ಕಳೆದ 4ತಿಂಗಳಲ್ಲಿ ಅವರು ನೀಡಿದ್ದಾರೆ.

ಇಂಟರ್ನೆಟ್‌ಗಾಗಿ ಗುಡ್ಡ ಏರಿದ್ದ ಮಕ್ಕಳಿಗೆ ನೆರವಾದ ಸುಧಾಮೂರ್ತಿ ...

ಈಗಾಗಲೇಹಲವು ರೀತಿಯ ಸಮಾಜ ಮುಖಿ ಸೇವೆಗಳಲ್ಲಿ ತೊಡಗಿರುವ ಸುಧಾಮೂರ್ತಿ ಇದೀಗ ಕೊರೋನಾ ಸಮಯದಲ್ಲಿ ಮೃಗಾಲಯಕ್ಕೆ ದೇಣಿಗೆ ಮೂಲಕ ನೆರವು ನೀಡಿದ್ದಾರೆ.