ಮಾರುಕಟ್ಟೆಯಲ್ಲಿ ಹೆಸರು ಕಾಳು ಬೆಲೆ ದಿಢೀರ್ ಕುಸಿತ: ಸಂಕಷ್ಟದಲ್ಲಿ ಬೆಳೆಗಾರ
ಅತಿಯಾದ ಮಳೆಯಿಂದಾಗಿ ಈ ಬಾರಿ ಹೆಸರು ಕಾಳು ಫಸಲು ಅಲ್ಪಸ್ವಲ್ಪ ಬಂದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 7 ಸಾವಿರದಿಂದ 7500 ವರೆಗೆ ಮಾರಾಟವಾಗುತ್ತಿದ್ದ ಹೆಸರು ಈಗ ದಿಢೀರನೇ . 5 ಸಾವಿರಕ್ಕೆ ಕುಸಿದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಅತಿಯಾದ ಮಳೆಯಿಂದಾಗಿ ಈ ಬಾರಿ ಹೆಸರು ಕಾಳು ಫಸಲು ಅಲ್ಪಸ್ವಲ್ಪ ಬಂದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 7 ಸಾವಿರದಿಂದ 7500 ವರೆಗೆ ಮಾರಾಟವಾಗುತ್ತಿದ್ದ ಹೆಸರು ಈಗ ದಿಢೀರನೇ . 5 ಸಾವಿರಕ್ಕೆ ಕುಸಿದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಈ ವರ್ಷ ಮುಂಗಾರು ಹಂಗಾಮಿನಲ್ಲಿ 17500 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ಆದರೆ ಅತಿವೃಷ್ಟಿಯಿಂದ ಸ್ವಲ್ಪ ಬೆಳೆ ಬಂದರೂ ಈ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ರೈತರಿಗೆ ಸಿಗದಾಗಿದೆ.
ರೈತರು ಪ್ರತಿ 1 ಎಕರೆಗೆ 10 ಸಾವಿರ ಖರ್ಚು ಮಾಡಿ ಉತ್ತಮ ಬೆಳೆ ಬೆಳೆಸಿದರು. ಆದರೆ ಈ ಬೆಳೆ ಬರುವ ಜುಲೈ ಕೊನೆ ವಾರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಈ ಭಾಗದಲ್ಲಿ ಸುರಿದಿದ್ದರಿಂದ ಕಟಾವಿಗೆ ಬಂದ ಬೆಳೆ ಜಮೀನಿನಲ್ಲಿ ನೀರು ನಿಂತು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮಾರುಕಟ್ಟೆಗೆ ಬೆಳೆ ಬಂದಾಗ ವ್ಯಾಪಾರಸ್ಥರು ಉದ್ದೇಶ ಪೂರ್ವಕವಾಗಿ ರೈತರು ತೊಂದರೆಗೆ ಒಳಗಾಗಿ ಬೆಳೆ ಮಾರಾಟ ಮಾಡುವರೆಂದು ತಿಳಿದುಕೊಂಡು ಕಡಿಮೆ ಬೆಲೆಗೆ ರೈತರ ಮಾಲು ತೆಗೆದುಕೊಂಡು ಮುಂದೆ ಸ್ವಲ್ಪ ದಿವಸ ಗತಿಸದ ನಂತರ ಹೆಚ್ಚಿನ ಬೆಲೆಗೆ ಹೆಸರು ಮಾರಾಟ ಮಾಡಿ ವ್ಯಾಪಾರಸ್ಥರು ಹೆಚ್ಚಿನ ಲಾಭ ಪಡೆದುಕೊಳ್ಳುವರೆಂದು ರೈತ ಮುಖಂಡ ಎಸ್.ಬಿ. ಜೋಗಣ್ಣವರ ಗಂಭೀರವಾದ ಆರೋಪ ಮಾಡಿದರು.
Kitchen Tips: ಹೆಸರು ಬೇಳೆ ಖರೀದಿಸುವಾಗ ಈ ವಿಚಾರ ಗಮನದಲ್ಲಿರಲಿ
ತಾಲೂಕಿನ ರೈತರು ಅತಿವೃಷ್ಟಿಯಿಂದ ತೊಂದರೆಯಲ್ಲಿ ಇದ್ದಾರೆ. ಆದ್ದರಿಂದ ಸರ್ಕಾರ ಬೇಗ ಹೆಸರು ಖರೀದಿ ಮಾಡಲು ಬೆಂಬಲ ಬೆಲೆ ಕೇಂದ್ರ ಪ್ರಾರಂಭ ಮಾಡಬೇಕೆಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಆಗ್ರಹಿಸಿದರು.ಅತಿವೃಷ್ಟಿಗೆ ಹಾನಿಯಾದ ಎಲ್ಲ ಬೆಳೆಗಳಿಗೆ ಒಂದು ವಾರದಲ್ಲಿ ಸರ್ಕಾರ 1 ಎಕರೆಗೆ . 50 ಸಾವಿರ ಪರಿಹಾರ ನೀಡದಿದ್ದರೆ ಸರ್ಕಾರದ ವಿರುದ್ಧ ತಾಲೂಕಿನ ರೈತರು ಪ್ರತಿಭಟನೆ ಮಾಡುತ್ತೆವೆ ಎಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನಾ ಅಧ್ಯಕ್ಷ ಬಸವರಾಜ ಸಾಬಳೆ ಎಚ್ಚರಿಸಿದ್ದಾರೆ.
ಉದ್ದು, ತೊಗರಿಬೇಳೆ ಬಲು ದುಬಾರಿ; ಆರು ವಾರಗಳಲ್ಲಿ ಶೇ.15ರಷ್ಟು ಬೆಲೆ ಹೆಚ್ಚಳ