ಮೈಸೂರು(ಡಿ.21): ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಹೋರಾಟ ವಿದ್ಯಾರ್ಥಿಗಳ ಅಂಗಳಕ್ಕೆ ಬಂದಿದೆ. ವಿದ್ಯಾರ್ಥಿಗಳು ಅತ್ಯಂತ ಏಚ್ಚರಿಕೆ ಮತ್ತು ಹೊಣೆಗಾರಿಕೆಯಿಂದ ಹೋರಾಟವನ್ನು ಮುನ್ನಡೆಸಬೇಕಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹದೇವ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಗೆ  ವಿರೋಧ ವಿಚಾರ‌ವಾಗಿ ಮಾತನಾಡಿದ್ದಾರೆ. ಕತ್ತಿ ಬಂದು ಭಾರತದ ನೆತ್ತಿ ಮೇಲೆ ನಿಂತಿದೆ. ಮುಸ್ಲಿಂ ವೇಷ ತೊಟ್ಟು ರೈಲಿಗೆ ಕಲ್ಲು ಹೊಡೆಯುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅಂದರೆ ಹೋರಾಟವನ್ನು ದಿಕ್ಕು ತಪ್ಪಿಸುವಂತಹ ಸಾಧ್ಯತೆಗಳು ಹೆಚ್ಚಾಗಿವೆ‌. ಆದ್ದರಿಂದ ಅತ್ಯಂತ ಜಾಗ್ರತೆಯಿಂದ ಹೋರಾಟ ಮುನ್ನಡೆಸಬೇಕು ಎಂದು ಅವರು ಕಾಯ್ದೆಯ ಬಗ್ಗೆ ವ್ಯಾಖ್ಯಾನ ನೀಡಿದ್ದಾರೆ.

'ಮೇಯರ್‌ ಚುನಾವಣೆ: ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಗೆ ತೊಂದರೆ ಇಲ್ಲ'

ಎನ್‌ಆರ್‌ಸಿ ಬಂದರೆ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸುವಂತಹ ಅಪಾಯ ಇದೆ‌. ವಲಸಿಗರು ಬರುವುದಕ್ಕಿಂತ ಮುಂಚೆ ದೇಶದಲ್ಲಿದ್ದ ಮೂಲ ನಿವಾಸಿಗಳು, ಆದಿವಾಸಿಗಳು, ಹಕ್ಕಪಿಕ್ಕಿ ಜನರಿಗೆ ಯಾವ ದಾಖಲೆಗಳಿವೆ..? ಅವರೆಲ್ಲರನ್ನು ಕಾಡಿನಿಂದ‌ ಹೊರಗಟ್ಟಲು ಸರ್ಕಾರ ಹುನ್ನಾರ ನಡೆಡಿದೆ ಎಂದು ಅವರು ಆರೋಪಿಸಿದ್ದಾರೆ.

ಆದಿವಾಸಿಗಳು ಕಾಡಿನಿಂದ ಹೊರಬಂದರೆ ಅರಣ್ಯ ಸಂಪತ್ತು ಕಾರ್ಪೋರೇಟ್ ಕಂಪನಿಗೆ ಗಣಿಗಾರಿಕೆಗೆ ಒಪ್ಪಿಸಿ ಬಿಡಬಹುದು. ಆಗ ಬಿಜೆಪಿ ಸರ್ಕಾರವು ಇರೋದಿಲ್ಲ. ಕಂಪನಿ ಸರ್ಕಾರ ಅಧಿಕಾರದಲ್ಲಿ ಇರುತ್ತದೆ‌ ಎಂದು ಹಿರಿಯ ಸಾಹಿತಿ ದೇವನೂರು ಮಹದೇವ ಎಚ್ಚರಿಸಿದ್ದಾರೆ.

ಮೈಸೂರು: 'ಶ್ರೀನಿವಾಸಪ್ರಸಾದ್‌, ಸಿದ್ದರಾಮಯ್ಯ ವಿರೋಧಿಗಳಲ್ಲ'