ಮೈಸೂರು(ಡಿ.21): ಮೈಸೂರು ಮೇಯರ್‌, ಉಪ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಅಬಾಧಿತ ಎಂದು ಮಾಜಿ ಸಚಿವ ಹಾಗೂ ಶಾಸಕ ಸಾ.ರಾ. ಮಹೇಶ್‌ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಸ್ಥಳೀಯವಾಗಿ ನಾವು ಬಿಜೆಪಿ ಹೋಗುವ ಇಷ್ಟವಿದ್ದರೂ ಹೈಕಮಾಂಡ್‌ ಕಾಂಗ್ರೆಸ್‌ ಜೊತೆ ಹೋಗುವಂತೆ ಸೂಚಿಸಿತ್ತು. ಅದರಂತೆ ಕಳೆದ ಬಾರಿ ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ಬಿಟ್ಟು, ನಾವು ಉಪ ಮೇಯರ್‌ ಸ್ಥಾನ ಪಡೆದಿದ್ದವು. ಆಗ ಆದ ಒಪ್ಪಂದದ ಪ್ರಕಾರ, ಈ ಬಾರಿಯ ಮೇಯರ್‌ ನಮಗೆ ಬರಬೇಕು. ಅಲ್ಲದೇ ಒಟ್ಟು ಎರಡು ಅವಧಿಗೆ ಕಾಂಗ್ರೆಸ್‌, ಮೂರು ಅವಧಿಗೆ ಜೆಡಿಎಸ್‌ ಮೇಯರ್‌. ಎಂಡಿಎ ಸದಸ್ಯತ್ವ ತಲಾ ಒಂದೂವರೆ ವರ್ಷಗಳ ಹಂಚಿಕೆಯ ಒಪ್ಪಂದವಾಗಿದೆ ಎಂದಿದ್ದಾರೆ.

ಆ್ಯಕ್ಷನ್‌ ಇದ್ರೆ ರಿಯಾಕ್ಷನ್‌: ವಿಶ್ವನಾಥ್‌ ಜೊತೆ ಸಾರಾ ಮಹೇಶ್‌ ಕದನ ವಿರಾಮ!

ಹಿಂದೆ ಸಂದೇಶ್‌ ಸ್ವಾಮಿ ಮೇಯರ್‌ ಆಯ್ಕೆಯಾದ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಕೈಕೊಟ್ಟಿದ್ದರಿಂದ ನಾವು ಕಾಂಗ್ರೆಸ್‌ ಜೊತೆ ಮೈತ್ರಿ ಕಡಿದುಕೊಂಡಿದ್ದವು. ಆದರೆ ಈ ಅವಧಿಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಇದ್ದು, ಅದು ಮುಂದುವರೆಯಲು ನಮ್ಮ ಕಡೆಯಿಂದ ಯಾವುದೇ ಆಭ್ಯಂತರವಿಲ್ಲ ಎಂದು ಹೇಳಿದ್ದಾರೆ.

ಮೀಸಲಾತಿ ವಿಳಂಬ ಸಲ್ಲದು:

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ತಮಗೆ ಎಲ್ಲಿ ಅಧಿಕಾರ ಸಿಗುತ್ತದೋ ಅಂಥ ಕಡೆ ಮಾತ್ರ ಗಮನ ಹರಿಸುತ್ತದೆ. ಮೈಸೂರು ಮೇಯರ್‌ ಅವಧಿ ಮುಗಿದು ಒಂದು ತಿಂಗಳಾದರೂ ಇನ್ನೂ ಮೀಸಲಾತಿ ನಿಗದಿ ಮಾಡದಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಬಹುಶಃ ಇಲ್ಲಿಯೂ ‘ಆಪರೇಷನ್‌ ಕಮಲ’ ನಡೆಸಲು ಯತ್ನಿಸುತ್ತಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಕಾಯ್ದೆ ನೆಪದಲ್ಲಿ ಗಲಭೆ, ಸರ್ಕಾರ ಅಸ್ಥಿರಗೊಳಿಸಲು ಕಾಂಗ್ರೆಸ್ ಹುನ್ನಾರ: ಪ್ರತಾಪ್ ಸಿಂಹ.

ನನಗರಸಭೆ, ಪುರಸಭೆಗೆ ಈ ಹಿಂದೆ ನಡೆದ ಚುನಾವಣೆಯಲ್ಲಿ ಗೆದ್ದವರಿಗೆ ಇನ್ನೂ ಅಧಿಕಾರ ಸಿಗದಿರುವುದಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ವಿವಾದ ನ್ಯಾಯಾಲಯದಲ್ಲಿರುವುದು ಕಾರಣವೇ ಹೊರತು ಹಿಂದಿನ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರವಲ್ಲ ಎಂದರು.