ಮಂಡ್ಯ [ಜ.13]: ಮಂಡ್ಯದಲ್ಲಿ ಸ್ವಾಭಿಮಾನದ ಹೆಸರಲ್ಲಿ ಗೆದ್ದ ನೀವು ಈಗ ವಿಶ್ವವಿದ್ಯಾಲಯ ಉಳಿಸಲು ಬನ್ನಿ ಎಂದು ಸಂಸದೆ ಸುಮಲತಾಗೆ ವಿದ್ಯಾರ್ಥಿಗಳು ಕರೆ ನೀಡಿದ್ದಾರೆ. 

ಸುಮಲತಾ ಮೇಡಂ ಎಲ್ಲಿದ್ದೀರಾ..। ಇಲ್ಲಿನ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಸ್ವಾಭಿಮಾನದಿಂದ ಬಂದು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿ ಮಂಡ್ಯ ವಿಶ್ವವಿದ್ಯಾಲಯ ಉಳಿಸಿ ಎಂದಿದ್ದಾರೆ. 

ಯಶ್-ದರ್ಶನ್ ಜೋಡೆತ್ತುಗಳು ಎಂದು ಸಮಲತಾ ಅವರನ್ನು ಗೆಲ್ಲಿಸಿದ್ದೀರಾ. ಈಗ ವಿದ್ಯಾರ್ಥಿಗಳ ಪರವಾಗಿ ನಿಂತು ಮಂಡ್ಯ ವಿಶ್ವವಿದ್ಯಾಲಯ ಉಳಿಸಿ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. 

SSLC, PUC ವಿದ್ಯಾರ್ಥಿಗಳಿಗೆ 10 ಗ್ರಾಂ ಚಿನ್ನದ ಸರ

ಅಲ್ಲದೇ ಮಂಡ್ಯ ಶಾಸಕ ಎಂ ಶ್ರೀನಿವಾಸ್ ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಮಂಡ್ಯ ವಿವಿಧ ಉಳಿಸಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. 

ಮಂಡ್ಯ : ವಾಹನ ಸವಾರರೇ ಗಮನಿಸಿ - ಇನ್ಮುಂದೆ ಕಡ್ಡಾಯ ನಿಯಮ...

ಸ್ವಾಯತ್ತ ನಿಯಮದ ಅಡಿಯಲ್ಲಿ ಪರೀಕ್ಷೆ ನೀಡುವಂತೆ ಸರ್ಕಾರ ಆದೇಶ ನೀಡಿದ್ದು, ಇದು ವಿಶ್ವವಿದ್ಯಾಲಯ ಎಂದು ನಾವು ದಾಖಲಾತಿ ಪಡೆದಿದ್ದೇವೆ. ಅದರಂತೆ ಈಗಾಗಲೇ ಎರಡು ಪರೀಕ್ಷೆಗಳನ್ನು ವಿವಿ ನಿಯಮದ ಅಡಿಯಲ್ಲಿಯೇ ಬರೆದಿದ್ದೇವೆ. ಆದರೆ ಈಗ ಸ್ವಾಯತ್ತ ನಿಯಮದ ಅಡಿಯಲ್ಲಿ ಪರೀಕ್ಷೆ ನೀಡುವಂತೆ ಸರ್ಕಾರ ಆದೇಶಿಸಿದೆ. ಆದರೆ ವಿವಿದ ನಿಯಮದ ಅಡಿಯಲ್ಲೇ ಪರೀಕ್ಷೆ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.