Asianet Suvarna News Asianet Suvarna News

Shivamogga: ವಿಮಾನ ನಿಲ್ದಾಣ ಉದ್ಘಾಟನೆಗೆ ವಿದ್ಯಾರ್ಥಿಗಳು; ಬೇಳೂರು ಗೋಪಾಲಕೃಷ್ಣ ವ್ಯಂಗ್ಯ

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಹರಸಾಹಸ ಪಡುತ್ತಿದ್ದಾರೆ. ಶಾಲಾ-ಕಾಲೇಜುಗಳ ವಿದ್ಯಾ​ರ್ಥಿ​ಗ​ಳ​ನ್ನು ಕಾರ್ಯಕ್ರಮಕ್ಕೆ ಕಳುಹಿಸಿ ಎಂದು ಪ್ರಾಂಶುಪಾಲರಿಗೆ ಹೇಳುತ್ತಿದ್ದಾರೆ. ಈ ರೀತಿ ಪರಿಸ್ಥಿತಿ ಬಿಜೆಪಿಗೆ ಬರಬಾರದಿತ್ತು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದರು.

Students in shivamogga Airport Inauguration says belur gopalakrishna rav
Author
First Published Feb 26, 2023, 5:07 AM IST

ಶಿವಮೊಗ್ಗ (ಫೆ.26) : ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಹರಸಾಹಸ ಪಡುತ್ತಿದ್ದಾರೆ. ಶಾಲಾ-ಕಾಲೇಜುಗಳ ವಿದ್ಯಾ​ರ್ಥಿ​ಗ​ಳ​ನ್ನು ಕಾರ್ಯಕ್ರಮಕ್ಕೆ ಕಳುಹಿಸಿ ಎಂದು ಪ್ರಾಂಶುಪಾಲರಿಗೆ ಹೇಳುತ್ತಿದ್ದಾರೆ. ಈ ರೀತಿ ಪರಿಸ್ಥಿತಿ ಬಿಜೆಪಿಗೆ ಬರಬಾರದಿತ್ತು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ(Belur Gopalakrishna) ವ್ಯಂಗ್ಯವಾಡಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಏರ್‌​ಪೋ​ರ್ಟ್ ಉದ್ಘಾಟನಾ(Shivamogga Airport Inauguration) ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಎ​ಲ್ಲ ಕಾಲೇಜುಗಳಿಗೆ ಹೋಗಿ ಪ್ರಾಂಶುಪಾಲರ ಬಳಿ ಪ್ರಧಾನಿ ಬರುತ್ತಿದ್ದಾರೆ, ಶಾಲೆಯ ಬಾಗಿಲು ಮುಚ್ಚಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕಳುಹಿಸಿ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಫೆ.27ಕ್ಕೆ ದೆಹಲಿಯಿಂದ ಪ್ರಧಾನಿ ಮೋದಿ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್!

 

ಕೆ.ಎಸ್‌. ಈಶ್ವರಪ್ಪ(KS Eshwarappa) ಒಬ್ಬ ಮಹಿಷಾಸುರ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yadiyurappa) ಒಬ್ಬ ಉತ್ತಮ ಆಡಳಿತಗಾರ. ಬಿ.ಎಸ್‌. ಯಡಿಯೂರಪ್ಪ ಅಭಿವೃದ್ಧಿಯ ಹರಿಕಾರ ಎಂಬುದರಲ್ಲಿ ಎರಡು ಮಾತಿಲ್ಲ. ರಾಜಕಾರಣಕ್ಕೆ ಬಂದಾಗ ಪರಸ್ಪರ ಟೀಕೆಗಳು ಅನಿವಾರ್ಯ ಆಗಿರುತ್ತವೆ. ಅದನ್ನು ಹೊರತುಪಡಿಸಿದರೆ ಯಡಿಯೂರಪ್ಪ ಅವರ ಬಗ್ಗೆ ನನಗೆ ಪ್ರೀತಿ ಇದೆ. ಆದರೆ, ಬಿಜೆಪಿಯವರು ಇದೇ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿ ಕಣ್ಣೀರು ತರಿಸಿದ್ದಕ್ಕೆ ನೋವು ಇದೆ ಎಂದು ಹೇಳಿದರು.

ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುವ ಬಿಜೆಪಿಯ ತಂಡವೇ ಇದೆ. ಸಿ.ಟಿ.ರವಿ(CT Ravi), ಸಂತೋಷ್‌(SantoshJi) ಸೇರಿದಂತೆ ಹಲವರಿದ್ದಾರೆ. ಇದರಲ್ಲಿ ಕೆ.ಎಸ್‌. ಈಶ್ವರಪ್ಪ ಕೂಡ ಒಬ್ಬರು. ಇವರು ಅಮಿತ್‌ ಶಾ(Amit shah) ಅವರನ್ನು ಮೆಚ್ಚಿಸಲು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರಿಗೆ ಹೋಲಿಸುತ್ತಾರೆ. ಎಲ್ಲಿ ಹೋಲಿಕೆ ಇದೆ, ಈ ಈಶ್ವರಪ್ಪ ಒಬ್ಬ ಮಹಿಷಾಸುರ ಇದ್ದಂತೆ ಎಂದು ಹರಿಹಾಯ್ದರು.

Shivamogga airport: ಉದ್ಘಾಟನೆಗೆ ಕನ್ನಡದಲ್ಲೇ ಟ್ವೀಟ್ ಮಾಡಿ ಆಹ್ವಾನಿಸಿದ ಕೇಂದ್ರ ವಿಮಾನಯಾನ ಸಚಿವ

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ. ಶ್ರಿನಿವಾಸ ಕರಿಯಣ್ಣ, ಶಂಕರಘಟ್ಟರಮೇಶ್‌, ವೈ.ಹೆಚ್‌. ನಾಗರಾಜ್‌, ಜಿ.ಡಿ.ಮಂಜುನಾಥ್‌, ಬಾಲಾಜಿ, ಮಹೇಂದ್ರ ಸೇರಿದಂತೆ ಹಲವರಿದ್ದರು.

Follow Us:
Download App:
  • android
  • ios