ಮಂಗಳೂರು(ಜೂ.28): ಮಂಗಳೂರಿನ ತೋಟಬೆಂಗ್ರೆ ಮತ್ತು ಸುಲ್ತಾನ್‌ ಬತ್ತೇರಿಗಳಲ್ಲಿ ಬೋಟ್‌ ಮೂಲಕ ನಗರಕ್ಕೆ ಆಗಮಿಸಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾದ ಬಳಿಕ ಮೂರು ದಿನಗಳಿಂದ ವಿದ್ಯಾರ್ಥಿಗಳು ಇದೇ ಜಲಮಾಗÜರ್‍ ಮೂಲಕ ಆಗಮಿಸುತ್ತಿದ್ದಾರೆ. ತೋಟಬೆಂಗ್ರೆ ಹಾಗೂ ಸುಲ್ತಾನ್‌ಬತ್ತೇರಿಗೆ ಬೋಟ್‌ ಮೂಲಕ ಆಗಮಿಸಿ ಪರೀಕ್ಷಾ ಕೇಂದ್ರ ತಲುಪುತ್ತಿದ್ದಾರೆ. ಈ ರೀತಿ ಸುಮಾರು 25ಕ್ಕೂ ಅಧಿಕ ವಿದ್ಯಾರ್ಥಿಗಳು ಬೋಟ್‌ನ್ನು ಆಶ್ರಯಿಸಿದ್ದಾರೆ. ಬೆಳಗ್ಗೆ ಬೋಟ್‌ನಲ್ಲಿ ಆಗಮಿಸಿ, ಸಂಜೆ ವಾಪಸ್‌ ಬೋಟ್‌ನಲ್ಲಿ ಮರಳುತ್ತಿದ್ದಾರೆ.

ಉಳ್ಳಾ​ಲ: ಕುಟುಂಬದ ಎಲ್ಲ 17 ಮಂದಿಗೆ ಪಾಸಿ​ಟಿ​ವ್‌!

ಮಂಗಳೂರು ನಗರದ ಗುರುಪುರ ನದಿ ಮಧ್ಯೆ ತೋಟಬೆಂಗ್ರೆ ಎಂಬ ಪ್ರದೇಶವಿದೆ. ಅಲ್ಲಿಂದ ನಗರಕ್ಕೆ ಆಗಮಿಸಬೇಕಾದರೆ ತಣ್ಣೀರುಬಾವಿ ಮೂಲಕ ರಸ್ತೆ ಮಾರ್ಗದಲ್ಲಿ ಸುತ್ತುಬಳಸಿ ಬರಬೇಕು. ಇದಕ್ಕೆ ಸುಮಾರು ಮುಕ್ಕಾಲು ಗಂಟೆ ಬೇಕಾಗುತ್ತದೆ. ಆದರೆ ಬೋಟ್‌ ಮೂಲಕ ನೇರವಾಗಿ ಒಂದೂವರೆ ಕಿ.ಮೀ. ದೂರವನ್ನು 15 ನಿಮಿಷದಲ್ಲಿ ಕ್ರಮಿಸುವುದು ಸುಲಭ. ಈ ಕಾರಣಕ್ಕೆ ಎಲ್ಲರೂ ಬೋಟ್‌ ಮೂಲಕ ನಗರವನ್ನು ತಲುಪುತ್ತಾರೆ.

ಸೀಲ್ಡೌನ್‌ ಪ್ರದೇಶವೇ ದಾರಿ!

ಪರೀಕ್ಷೆ ಬರೆಯಲು ಬೋಟ್‌ನಲ್ಲಿ ಆಗಮಿಸುವ ವಿದ್ಯಾರ್ಥಿಗಳು ಸೀಲ್ಡೌನ್‌ ಆದ ಪ್ರದೇಶವನ್ನು ಹಾದು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮೀನುಗಾರರೊಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದರಿಂದ ಹಳೆ ಬಂದರು ಪ್ರದೇಶವನ್ನು ಒಂದು ವಾರದಿಂದ ಪೂರ್ತಿ ಸೀಲ್ಡೌನ್‌ ಮಾಡಲಾಗಿದೆ. ಆದರೂ ಅಪಾಯವನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಅದೇ ದಾರಿಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಬರಬೇಕಾಗಿದೆ. ಇದು ವಿದ್ಯಾರ್ಥಿಗಳ ಹಾಗೂ ಹೆತ್ತವರ ಆತಂಕಕ್ಕೆ ಕಾರಣವಾಗಿದೆ.