ಬೆಂಗಳೂರು (ಏ.09) ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಸಾರಿಗೆ ಮುಷ್ಕರ ನಡೆಯುತ್ತಿದ್ದು, ಇದು ಸಾಮಾನ್ಯ ಜನ ಜೀವನದ ಮೇಲೆ ಸಾಕಷ್ಟು ರೀತಿಯ ಪರಿಣಾಮವನ್ನುಂಟು ಮಾಡಿದೆ. 

ಇದೀಗ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿಂದು ಇದರ ನೇತೃತ್ವ ವಹಿಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ಗೆ ವಿದ್ಯಾರ್ಥಿನಿಯಿಂದ ಲೀಗಲ್ ನೋಟಿಸ್ ನೀಡಲಾಗಿದೆ.  

 ಬಿಎಂಟಿಸಿ ಸಂಚಾರ ಬಂದ್ ಹಿನ್ನಲೆ  ಪರಿಹಾರ ಕೇಳಿ  ವಿದ್ಯಾರ್ಥಿನಿ ಲೀಗಲ್ ನೋಟಿಸ್ ಕೊಟ್ಟಿದ್ದಾಳೆ.  ಹತ್ತು ಲಕ್ಷ ಪರಿಹಾರ ಕೇಳಿ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್  ಹಾಗೂ  ಮತ್ತು ಬಿಎಂಟಿಸಿ ಎಂಡಿಗೆ ಲೀಗಲ್ ನೋಟಿಸ್ ನೀಡಿದ್ದಾರೆ. 

ಕಳೆದ ಮೂರು ದಿನಗಳಿಂದ ಸಂಚಾರ ಬಂದ್ ಆಗಿದ್ದು, ಪಾಸ್ ಹೊಂದಿದ್ದರೂ ಪ್ರಯೋಜನವಿಲ್ಲ ಎಂದು ಕೆಂಗೇರಿ ಜೆಎಸ್ ಎಸ್ ಅಕಾಡೆಮಿ ಆಪ್ ಟೆಕ್ನಿಕಲ್ ಎಜುಕೇಷನ್  ಕಾಲೇಜಿನ ಬಿಇ ಮೊದಲ ಸೆಮಿಸ್ಟರ್ ವಿದ್ಯಾರ್ಥಿನಿ ತುಮಕೂರು ಮೂಲದ ಪಾವನ ಎಂಬ ವಿದ್ಯಾರ್ಥಿನಿ ವಕೀಲ ರಮೇಶ್ ನಾಯಕ್ ಮೂಲಕ ಲೀಗಲ್  ನೋಟಿಸ್ ಕಳಿಸಿದ್ದಾಳೆ.

"

ಬಿಎಂಟಿಸಿ ವಾರ್ಷಿಕ ಪಾಸ್ ಖರೀದಿಸಿದ್ದೇವೆ. ಪಾಸ್ ಇದ್ದರೂ ಎರಡು ದಿನಗಳಿಂದ ಬಸ್ ಸೇವೆ ಇಲ್ಲದೆ ಹೆಚ್ಚುವರಿ ಹಣ ಪಾವತಿಸಿ ಓಡಾಡುವಂತಾಗಿದೆ. ಪಾಸ್ ಹೊಂದಿರುವರಿಗೆ ಬಸ್ ಸೌಲಭ್ಯ ಒದಗಿಸದಿರುವುದು ಸೇವಾ ನ್ಯೂನ್ಯತೆ ಹಾಗೂ ಅನುಚಿತ ವ್ಯಾಪಾರ ಪದ್ದತಿ ಎಂದು ವಿದ್ಯಾರ್ಥಿನಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ.  ಅಲ್ಲದೇ ಈ ನಿಟ್ಟಿನಲ್ಲಿ ಪರಿಹಾರ ನೀಡಬೇಕೆಂದು ಕೇಳಿದ್ದಾರೆ. 

ಖಾಸಗಿ ಬಸ್‌ಗಳಿಗೆ ಕೆಂಪು ಬಸ್‌ನಷ್ಟೇ ಪ್ರಯಾಣ ದರ: ಸರ್ಕಾರ ಆದೇಶ ...

ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಸಾರಿಗೆ ಮುಷ್ಕರ ನಡೆಯುತ್ತಿದ್ದು, ಇದು ಸಾಮಾನ್ಯ ಜನ ಜೀವನದ ಮೇಲೆ ಸಾಕಷ್ಟು ರೀತಿಯ ಪರಿಣಾಮವನ್ನುಂಟು ಮಾಡಿದೆ. 