Asianet Suvarna News Asianet Suvarna News

ಖಾಸಗಿ ಬಸ್‌ಗಳಿಗೆ ಕೆಂಪು ಬಸ್‌ನಷ್ಟೇ ಪ್ರಯಾಣ ದರ: ಸರ್ಕಾರ ಆದೇಶ

ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ದುಬಾರಿ ಹಣ ವಸೂಲಿ| ಪ್ರಯಾಣಿಕರಿಂದ ಸರ್ಕಾರ ನಿಗದಿತ ಪ್ರಯಾಣ ದರ ಮಾತ್ರ ಪಡೆಯುವಂತೆ ಸೂಚನೆ| ದುಬಾರಿ ಪ್ರಯಾಣ ದರ ವಸೂಲಿ ಮಾಡಿದರೆ ಕ್ರಮ| ಖಾಸಗಿ ಬಸ್‌ಗಳಿಗೆ ದರ ನಿಗದಿಗೊಳಿಸಿದ ಸರ್ಕಾರ| 

Private Bus Fare about the same as Government Buses grg
Author
Bengaluru, First Published Apr 9, 2021, 10:28 AM IST

ಬೆಂಗಳೂರು(ಏ.09): ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ ಕಾರ್ಯಾಚರಣೆಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರ ಇದೀಗ ಬೆಂಗಳೂರು ನಗರದಿಂದ ಹೊರ ಜಿಲ್ಲೆಗಳಿಗೆ ತೆರಳುವ ಖಾಸಗಿ ಬಸ್‌ಗಳಿಗೆ ಪ್ರಯಾಣ ದರ ನಿಗದಿ ಮಾಡಿದೆ.

ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ದುಬಾರಿ ಹಣ ವಸೂಲಿಗೆ ಮುಂದಾಗಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬುಧವಾರ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಖಾಸಗಿ ಬಸ್‌ ಮಾಲೀಕರೊಂದಿಗೆ ಸಭೆ ನಡೆಸಿದರು. ಪ್ರಯಾಣ ದರ, ಬಸ್‌ಗಳ ಕಾರ್ಯಾಚರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು. ಪ್ರಯಾಣಿಕರಿಂದ ಸರ್ಕಾರ ನಿಗದಿತ ಪ್ರಯಾಣ ದರ ಮಾತ್ರ ಪಡೆಯುವಂತೆ ಸೂಚಿಸಿದರು. ದುಬಾರಿ ಪ್ರಯಾಣ ದರ ವಸೂಲಿ ಮಾಡಿದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆಯನ್ನೂ ನೀಡಿದರು.

ಕೆಎಸ್‌ಆರ್‌ಟಿಸಿ ಸ್ಟ್ರೈಕ್‌: ಕೈ ಮುಗಿದು ಕೇಳಿಕೊಳ್ತೇನೆ, ಬನ್ನಿ ಕೂತು ಮಾತಾಡೋಣ,ಸವದಿ

ಬೆಂಗಳೂರು ನಗರದಿಂದ ರಾಜ್ಯದ ಹೊರ ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿ ಕರ್ನಾಟಕ ಸಾರಿಗೆ (ಕೆಂಪು ಬಸ್‌) ಬಸ್‌ಗಳಿಗೆ ನಿಗದಿಗೊಳಿಸಿರುವ ದರವನ್ನೇ ಖಾಸಗಿ ಬಸ್‌ಗಳಿಗೂ ನಿಗದಿಗೊಳಿಸಲಾಗಿದೆ.

ಪ್ರಯಾಣ ದರದ ಮಾಹಿತಿ (ದರ ರು.)
ಪ್ರಯಾಣ ಮಾರ್ಗ ದರ

ಬೆಂಗಳೂರು-ಹಾಸನ 209
ಬೆಂಗಳೂರು-ಚಿಕ್ಕಮಗಳೂರು 280
ಬೆಂಗಳೂರು-ಶಿವಮೊಗ್ಗ 298
ಬೆಂಗಳೂರು-ದಾವಣಗೆರೆ 312
ಬೆಂಗಳೂರು-ಚಿತ್ರದುರ್ಗ 237
ಬೆಂಗಳೂರು-ಹೊಸದುರ್ಗ 173
ಬೆಂಗಳೂರು-ಪಾವಗಡ 164
ಬೆಂಗಳೂರು-ಮಧುಗಿರಿ 111
ಬೆಂಗಳೂರು-ಕೊರಟಗೆರೆ 96
ಬೆಂಗಳೂರು-ಗೌರಿಬಿದನೂರು 88
ಬೆಂಗಳೂರು-ಚಿಕ್ಕಬಳ್ಳಾಪುರ 69
ಬೆಂಗಳೂರು-ಬಾಗೇಪಲ್ಲಿ 117
ಬೆಂಗಳೂರು-ಕೋಲಾರ 76
ಬೆಂಗಳೂರು-ಮುಳಬಾಗಿಲು 105
ಬೆಂಗಳೂರು-ಚಿಂತಾಮಣಿ 86
ಬೆಂಗಳೂರು-ತುಮಕೂರು 80
ಬೆಂಗಳೂರು-ಕೆಜಿಎಫ್‌ 110
ಬೆಂಗಳೂರು-ಚಳ್ಳಕೆರೆ 230
ಬೆಂಗಳೂರು-ಬಳ್ಳಾರಿ 360
ಬೆಂಗಳೂರು-ಸಿರಾ 145
ಬೆಂಗಳೂರು-ಹಿರಿಯೂರು 195
ಬೆಂಗಳೂರು-ಧರ್ಮಸ್ಥಳ 343
ಬೆಂಗಳೂರು-ಉಡುಪಿ 470
ಬೆಂಗಳೂರು-ಕುಂದಾಪುರ 519
ಬೆಂಗಳೂರು-ಪುತ್ತೂರು 470
ಬೆಂಗಳೂರು-ಮಡಿಕೇರಿ 326
ಬೆಂಗಳೂರು-ವಿಜಯಪುರ 678
ಬೆಂಗಳೂರು-ಮಂಗಳೂರು 401
ಬೆಂಗಳೂರು-ಕೊಪ್ಪಳ 462
ಬೆಂಗಳೂರು-ಹೊಸಪೇಟೆ 399
ಬೆಂಗಳೂರು-ಕಲಬುರಗಿ 691
ಬೆಂಗಳೂರು-ಹುಬ್ಬಳ್ಳಿ 489
 

Follow Us:
Download App:
  • android
  • ios