ಬೆಂಗಳೂರು [ಜ.24] : ಸ್ನೇಹಿತನ ತಂಗಿಯನ್ನು ರೇಗಿಸುತ್ತಿದ್ದನ್ನು ಪ್ರಶ್ನಿಸಿದ ವಿದ್ಯಾರ್ಥಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿಟಿಎಂ ಲೇಔಟ್‌ನ ಸೋಮೇಶ್ವರ ನಿವಾಸಿ ಸಜೀತ್‌ (19) ಇರಿತಕ್ಕೊಳಗಾದ ವಿದ್ಯಾರ್ಥಿ. ಗಾಯಾಳು ಚೇತರಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿಗಳಾದ ಹರಿ, ಪಟ್ಟಾಭಿ ಸೇರಿ ನಾಲ್ವರು ವಿರುದ್ಧ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು: ಬೌನ್ಸ್‌ನಲ್ಲಿ ಬಂದಿದ್ದವರು 3 ಲಕ್ಷ ರೂ. ದೋಚಿದ್ರು, ಆಮೇಲೆ!...

ಸಜೀತ್‌, ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾನೆ. ಇದೇ ಕಾಲೇಜಿನಲ್ಲಿ ಸಜೀತ್‌ ಸ್ನೇಹಿತ ಹಾಗೂ ಆತನ ತಂಗಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಸ್ನೇಹಿತನ ತಂಗಿಯನ್ನು ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ನಿತ್ಯ ರೇಗಿಸುತ್ತಿರುವ ಬಗ್ಗೆ ಸ್ನೇಹಿತ ಹೇಳಿಕೊಂಡಿದ್ದ. ಜ.22ರಂದು ಸಜೀತ್‌ ಬಾಲಕಿಯನ್ನು ರೇಗಿಸುತ್ತಿದ್ದ ವಿದ್ಯಾರ್ಥಿಗೆ ಈ ರೀತಿ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದ.

ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು : ಕೊಂದೇ ಬಿಟ್ಟ ಪಾಪಿ !...

ಇಷ್ಟಕ್ಕೆ ಆ ವಿದ್ಯಾರ್ಥಿ ತನ್ನ ಸ್ನೇಹಿತರನ್ನು ಕರೆ ತಂದು ಏಕಾಏಕಿ ಜಗಳ ಸಜೀತ್‌ ಬಳಿ ಜಗಳ ತೆಗೆದಿದ್ದಾನೆ. ನಮ್ಮ ಎದುರು ಮಾತನಾಡುತ್ತೀಯಾ ಎಂದು ಹಲ್ಲೆ ನಡೆಸಿ, ಚಾಕುವಿನಿಂದ ಸಜೀತ್‌ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ. ಅದೃಷ್ಟವಶಾತ್‌ ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.