ಇಲ್ಲಿನ 100 ಅಡಿ ರಸ್ತೆಯಲ್ಲಿರುವ ನಿರ್ಮಲಾ ಆಸ್ಪತ್ರೆ ಸಮೀಪ ಫುಟ್‌ಪಾತ್‌ ಕೆಳಗೆ ವಿಚಿತ್ರ ಶಬ್ದ ಕೇಳಿಸಿದ್ದು, ಹೊಗೆ ಬಂದಿದೆ. ಇದನ್ನು ಕಂಡು ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ.

ಶಿವಮೊಗ್ಗ (ಅ.21) : ಇಲ್ಲಿನ 100 ಅಡಿ ರಸ್ತೆಯಲ್ಲಿರುವ ನಿರ್ಮಲಾ ಆಸ್ಪತ್ರೆ ಸಮೀಪ ಫುಟ್‌ಪಾತ್‌ ಕೆಳಗೆ ವಿಚಿತ್ರ ಶಬ್ದ ಕೇಳಿಸಿದ್ದು, ಹೊಗೆ ಬಂದಿದೆ. ಇದನ್ನು ಕಂಡು ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಅಂಗಡಿ ಬಾಗಿಲು ತೆಗೆಯುವಾಗ ಈ ಘಟನೆ ಸಂಭವಿಸಿದೆ. ಸ್ಮಾರ್ಟ್ ಸಿಟಿ ಫುಟ್‌ಪಾತ್‌ ಅಡಿಯಲ್ಲಿ ವಿಚಿತ್ರ ಶಬ್ದ ಕೇಳಿಸಿದೆ. ಕೆಲವೇ ಕ್ಷಣದಲ್ಲಿ ಸಣ್ಣ ಪ್ರಮಾಣದಲ್ಲಿ ಹೊಗೆ ಬರಲು ಶುರುವಾಗಿದೆ. ಮೊದಲು ಟ್ರ್ಯಾಕ್ಟರ್‌ ಚಲಿಸುತ್ತಿರುವಂತೆ ಶಬ್ದ ಕೇಳಿಸಿದ್ದು, ಹತ್ತಿರ ಹೋಗಿ ನೋಡಿದಾಗ ಹೊಗೆ ಬರುತ್ತಿತ್ತು. ಕೂಡಲೆ ಪಾಲಿಕೆ ಸದಸ್ಯರು ಮತ್ತು ಮೆಸ್ಕಾಂಗೆ ಕರೆ ಮಾಡಿ ಮಾಹಿತಿ ನೀಡಿ, ವಿಡಿಯೋ ಚಿತ್ರೀಕರಣ ಮಾಡಿ ಕಳುಹಿಸಿದೆವು ಅನ್ನುತ್ತಾರೆ ವ್ಯಾಪಾರಿ ರಿಷಬ್‌ ಜೈನ್‌.

Unusual Space Object: ನಿಗೂಢ ಶಬ್ದ, ನಿಗೂಢ ಸಂಕೇತ, ಏನಿದು ಏಲಿಯನ್‌ ಹಕೀಕತ್ತು?

ಫುಟ್‌ಪಾತ್‌ ಕೆಳಗೆ ಹೊಗೆ ಬರುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಸಿಬ್ಬಂದಿ ಕೂಡಲೆ ವಿದ್ಯುತ್‌ ಸ್ಥಗಿತಗೊಳಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದರು. ಇದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಸ್ಮಾರ್ಚ್‌ ಸಿಟಿ ಯೋಜನೆ ಅಡಿ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಸಲಾಗಿದೆ. ಇದೆ ಕೇಬಲ್‌ ಮೂಲಕ ಮನೆಗಳಿಗೆ ವಿದ್ಯುತ್‌ ಪೂರೈಕೆಯಾಗಲಿದೆ. ತಾಂತ್ರಿಕ ದೋಷ ಉಂಟಾಗಿದ್ದು, ಶಬ್ದ ಮತ್ತು ಹೊಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಸ್ಮಾರ್ಟ್ ಸಿಟಿ ಯೋಜನೆಯ ಭೂಗತ ವಿದ್ಯುತ್‌ ಕೇಬಲ…ನಿಂದಾಗಿ ಅಲ್ಲಲ್ಲಿ ಸಮಸ್ಯೆಯಾಗಿದೆ. ಈಚೆಗೆ ಹೊಸಮನೆ ಬಡಾವಣೆಯಲ್ಲಿ ರಾತ್ರಿ ಗ್ರೌಂಡಿಂಗ್‌ ಸಂಭವಿಸಿತ್ತು. ಕೆಲವು ಕಡೆ ವಿದ್ಯುತ್‌ ಶಾರ್ಚ್‌ ಆಗಿರುವ ವರದಿಯಾಗಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್‌ ಆಗಿತ್ತು.

ಪತ್ರಕರ್ತನ ಮೇಲೆ ಹಲ್ಲೆ ಖಂಡನೆ

ಶಿವಮೊಗ್ಗ: ಕಲ್ಲು ಗಣಿಗಾರಿಕೆ ಮತ್ತು ಅದರ ದುಷ್ಪರಿಣಾಮಗಳ ಕುರಿತು ವರದಿ ಮಾಡಲು ಹೋಗಿದ್ದ ಆನಂದಪುರಂ ಪತ್ರಕರ್ತ ಬಿ.ಡಿ.ರವಿಕುಮಾರ್‌ ಅವರ ಮೇಲೆ ಹಲ್ಲೆ ಕ್ರಮವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಖಂಡಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿವೆ.

ಸಾಗರ ತಾಲೂಕು ಆನಂದಪುರಂ ಸಮೀಪದ ಹೊಸಕೊಪ್ಪದಲ್ಲಿ ಘಟನೆ ನಡೆದಿದೆ. ಆ ಭಾಗದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಸಾರ್ವಜನಿಕ ರಸ್ತೆಗಳು ಹಾಳಾಗಿದ್ದು, ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪತ್ರಿಕೆಯೊಂದರ ವರದಿಗಾರ ಬಿ.ಡಿ.ರವಿ ಸ್ಥಳಕ್ಕೆ ಹೋಗಿದ್ದರು. ಈ ಸಂದರ್ಭ ಕ್ವಾರಿ ಮಾಲೀಕ ಬಸವರಾಜ್‌ ಸಹಚರರೊಂದಿಗೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಕೋಲಾರದಲ್ಲಿ ಕೈ-ಕೈ ಮಿಲಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು: ಪತ್ರಕರ್ತರ ಮೇಲೆ ರಮೇಶ್ ಕುಮಾರ್ ಹಲ್ಲೆ

ಇದು ಮುಕ್ತ ಪತ್ರಿಕೋದ್ಯಮದ ಮೇಲೆ ನಡೆದಿರುವ ಹಲ್ಲೆ. ಈ ಘಟನೆಯನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌, ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಯಡಗೆರೆ, ಗೌರವ ಅಧ್ಯಕ್ಷ ಎಸ್‌.ಚಂದ್ರಕಾಂತ್‌, ಪದಾಧಿಕಾರಿಗಳಾದ ನಾಗರಾಜ್‌ ನೇರಿಗೆ, ಸಂತೋಷ್‌ ಕಾಚಿನಕಟ್ಟೆ, ಹುಲಿಮನೆ ತಿಮ್ಮಪ್ಪ, ಶಿವಮೊಗ್ಗ ನಂದನ್‌, ಜೇಸುದಾಸ್‌, ಶೃಂಗೇಶ್‌, ಸೂರ್ಯನಾರಾಯಣ್‌, ಹೊನ್ನಾಳಿ ಚಂದ್ರಶೇಖರ್‌, ಗಿರೀಶ್‌ ಉಮ್ರಾಯ…, ಗೋ.ವ.ಮೋಹನ್‌ ಮತ್ತಿತರರು ಒತ್ತಾಯಿಸಿದ್ದಾರೆ.