- Home
- Karnataka Districts
- ತಂಗಿಗೆ ಕೇಳಿದೆಲ್ಲಾ ಕೊಡ್ತೀರಿ, ನನಗೆ ಏನೂ ಇಲ್ಲ: ಬೊಮ್ಮಾಯಿ ಆಪ್ತ ಕಾರ್ಯದರ್ಶಿ ಮಗನ ಸಾವಿಗೆ ಕಾರಣ ಏನು?
ತಂಗಿಗೆ ಕೇಳಿದೆಲ್ಲಾ ಕೊಡ್ತೀರಿ, ನನಗೆ ಏನೂ ಇಲ್ಲ: ಬೊಮ್ಮಾಯಿ ಆಪ್ತ ಕಾರ್ಯದರ್ಶಿ ಮಗನ ಸಾವಿಗೆ ಕಾರಣ ಏನು?
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಚಂದ್ರು ಅವರ ಪುತ್ರ ಹೇಮಂತ್ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ತಂಗಿಗೆ ಆಭರಣ ಕೊಡಿಸಿದ್ದಕ್ಕೆ ತಾಯಿಯೊಂದಿಗೆ ಜಗಳವಾಡಿದ್ದ ಹೇಮಂತ್, ತಿರುಪತಿಗೆ ತೆರಳುವ ಸಿದ್ಧತೆಯಲ್ಲಿದ್ದಾಗಲೇ ಈ ದುರಂತ ಘಟನೆ ನಡೆದಿದೆ.

ಆಪ್ತ ಕಾರ್ಯದರ್ಶಿ ಚಂದ್ರು ಪುತ್ರ
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಚಂದ್ರು ಪುತ್ರ ಹೇಮಂತ್ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಇಂದು ಬೆಳಗ್ಗೆ ಕೋಣೆಯ ಬಾಗಿಲು ತೆಗೆದಾಗ ಹೇಮಂತ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಕುಟುಂಬಸ್ಥರೆಲ್ಲರೂ ತಿರುಪತಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು.
ರಾತ್ರಿ ತಾಯಿ ಜೊತೆ ಜಗಳ
ಶುಕ್ರವಾರ ಹೇಮಂತ್‌ನ ತಂಗಿಗೆ ಆಭರಣ ಕೊಡಿಸಲಾಗಿತ್ತು. ಈ ಸಂಬಂಧ ತಾಯಿ ಜೊತೆ ಹೇಮಂತ್ ಜಗಳ ಮಾಡಿಕೊಂಡಿದ್ದನು. ತಂಗಿಗೆ ಕೇಳಿದ್ದೆಲ್ಲಾ ಕೊಡ್ತೀರಿ, ನನಗೇನೂ ಕೊಡಿಸಲ್ಲ ಎಂದು ಕೋಪದಲ್ಲಿ ಕೋಣೆಗೆ ಹೋಗಿದ್ದ ಹೇಮಂತ್ ಬಾಗಿಲು ಹಾಕಿಕೊಂಡಿದ್ದನು. ರಾತ್ರಿ ಊಟಕ್ಕೂ ಕರೆದ್ರೂ ಹೇಮಂತ್ ಕೋಣೆಯಿಂದ ಹೊರಗೆ ಬಂದಿರಲಿಲ್ಲ.
ಊಟಕ್ಕೂ ಬಂದಿರಲಿಲ್ಲ ಹೇಮಂತ್
ರಾತ್ರಿ ಸುಮಾರು 8 ಗಂಟೆವರೆಗೂ ಸ್ನೇಹಿತರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ. ನಂತರ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದಾನೆ. ರಾತ್ರಿ ಊಟಕ್ಕೆ ಎಷ್ಟೇ ಕರೆದ್ರೂ ಹೇಮಂತ್ ಕೋಣೆಯಿಂದ ಹೊರಗೆ ಬಂದಿರಲಿಲ್ಲ. ರಾತ್ರಿ ಸುಮಾರು 12 ಗಂಟೆಗೆ ಹೇಮಂತ್ ನೇಣುಬಿಗಿದುಕೊಂಡಿರುವ ಸಾಧ್ಯತೆಗಳಿವೆ.
ತಿರುಪತಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ರು
ತಿರುಪತಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ರೆ ಮನೆಗೆ ಸಂಬಂಧಿಕರು ಸಹ ಆಗಮಿಸಿದ್ದರು. ಘಟನಾ ಸ್ಥಳಕ್ಕೆ ಸಂಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶವವನ್ನು ಮರಣೋತ್ತರ ಶವಪರೀಕ್ಷೆಗಾಗಿ ರಾಮಯ್ಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: ನಂದಿನಿ ಉತ್ಪನ್ನ 'ವಿಷ' ಎಂದ ವೈದ್ಯೆಗೆ ಶಾಕ್: ಡಾ. ಶರಣ್ಯಾ ಪದ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ಕೆಎಂಎಫ್!
ಪೊಲೀಸರಿಂದ ಪರಿಶೀಲನೆ
ಮೃತ ಹೇಮಂತ್ ರಾಮಯ್ಯ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿದ್ದನು. ಡಿಪ್ಲೋಮಾ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಹೇಮಂತ್, ಕುಟುಂಬಸ್ಥರೊಂದಿಗೆ ಸಂಜಯನಗರ ಲೊಟ್ಟೆಗೊಲ್ಲಹಳ್ಳಿಯಲ್ಲಿ ವಾಸವಾಗಿದ್ದನು. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Bengaluru: ಇಸ್ರೋ ಮಾಜಿ ನೌಕರನಿಂದ ಪತ್ನಿಯ ಹ*ತ್ಯೆ, ತಾಯಿ ಚಿತೆಗೆ ಬೆಂಕಿಯಿಡಲೂ ಅಮೆರಿಕದಿಂದ ಬರದ ಒಬ್ಬಳೇ ಮಗಳು!

