ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೇದಿಗೆರೆ ಗ್ರಾಮದಲ್ಲಿ 1 ತಲೆ, 8 ಕಾಲು, 2 ದೇಹವಿರುವ ವಿಚಿತ್ರ ಕರು ಜನನ  

ಚಿಕ್ಕಮಗಳೂರು(ಡಿ.18): 1 ತಲೆ, 8 ಕಾಲು, 2 ದೇಹವಿರುವ ವಿಚಿತ್ರ ಕರು ಜನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೇದಿಗೆರೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಒಂದು ದೇಹಕ್ಕೆ ತಲೆಯೇ ಇಲ್ಲ, ಒಂದು ದೇಹ ಮತ್ತೊಂದು ದೇಹದ ಜೊತೆ ಸೇರ್ಪಡೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೇದಿಗೆರೆ ಗ್ರಾಮದ ಈಶಣ್ಣ ಎಂಬುವರ ಮನೆಯಲ್ಲಿ ವಿಚಿತ್ರ ಕರು ಹುಟ್ಟಿದೆ. ಈಶಣ್ಣ 30 ಕುರಿಗಳನ್ನ ಸಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ವಿಚಿತ್ರ ಕರು ನೋಡಲು ಅಕ್ಕಪಕ್ಕದ ಹಳ್ಳಿಗಳಿಂದ ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಹುಟ್ಟಿದ ಒಂದೇ ಗಂಟೆಯಲ್ಲಿ ಕರು ಮೃತಪಟ್ಟಿದೆ. 

View post on Instagram

CHIKKAMAGALURU: ಸೋಮೇಶ್ವರ ಸ್ವಾಮಿ ದೇಗುಲದಲ್ಲಿ ರಥೋತ್ಸವಕ್ಕೂ ಮುನ್ನವೇ ಧರ್ಮ ದಂಗಲ್