Asianet Suvarna News Asianet Suvarna News

Chikkamagaluru: ಸೋಮೇಶ್ವರ ಸ್ವಾಮಿ ದೇಗುಲದಲ್ಲಿ ರಥೋತ್ಸವಕ್ಕೂ ಮುನ್ನವೇ ಧರ್ಮ ದಂಗಲ್

ಕೇಸರಿ ಕಲರವದೊಂದಿಗೆ ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಚಿಕ್ಕಮಗಳೂರಿನ ವಿವಾದಿತ ದತ್ತಪೀಠದಲ್ಲಿ ವಿಜೃಂಭಣೆಯಿಂದ ದತ್ತಜಯಂತಿ ಮುಗಿಯಿತು. ಅದರ ಬೆನ್ನಲ್ಲೇ ಈಗ ಮತ್ತೊಂದು ಸುತ್ತಿನ ಧರ್ಮ ದಂಗಲ್‍ಗೆ ಕಾಫಿನಾಡೇ ವೇದಿಕೆಯಾಗುತ್ತಾ ಎಂಬ ಪ್ರಶ್ನೆ ಮೂಡಿದೆ. 

chikkamagaluru dharma dangal started again muslim traders ban in someshwara swamy festival gvd
Author
First Published Dec 17, 2022, 11:40 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಡಿ.17): ಕೇಸರಿ ಕಲರವದೊಂದಿಗೆ ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಚಿಕ್ಕಮಗಳೂರಿನ ವಿವಾದಿತ ದತ್ತಪೀಠದಲ್ಲಿ ವಿಜೃಂಭಣೆಯಿಂದ ದತ್ತಜಯಂತಿ ಮುಗಿಯಿತು. ಅದರ ಬೆನ್ನಲ್ಲೇ ಈಗ ಮತ್ತೊಂದು ಸುತ್ತಿನ ಧರ್ಮ ದಂಗಲ್‍ಗೆ ಕಾಫಿನಾಡೇ ವೇದಿಕೆಯಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಅದು ಕೇಸರಿ ಧ್ವಜದ ಹೆಸರಲ್ಲಿ. 

ಹೌದು! ಕಾಫಿನಾಡಲ್ಲಿ ಡಿಸೆಂಬರ್‌ನಿಂದ ದೇವಸ್ಥಾನಗಳಲ್ಲಿ ಜಾತ್ರೆ-ಉತ್ಸವ-ರಥೋತ್ಸವಗಳು ನಡೆಯಲಿವೆ. ದಕ್ಷಿಣ ಕಾಶಿ ಎಂದೇ ಕರೆಸಿಕೊಳ್ಳೋ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪದ ಸೋಂಪುರದಲ್ಲಿ ಸೋಮೇಶ್ವರ ಸ್ವಾಮಿ ದೇವಸ್ಥಾನಲ್ಲಿ ಜಾತ್ರೆ ಆರಂಭವಾಗುವ ಮೊದಲೇ ಧರ್ಮದಂಗಲ್‍ಗೆ ವೇದಿಕೆಯಾಗಿದೆ. ರಥೋತ್ಸವದಲ್ಲಿ ಕೇಸರಿ ಧ್ವಜವಿದ್ದೆಡೆ ಮಾತ್ರ ವ್ಯಾಪಾರ-ವಹಿವಾಟು ಮಾಡಿ ಎಂಬ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. 

Chikkamagaluru: ಸಿ.ಟಿ.ರವಿ ಫ್ಲೆಕ್ಸ್‌ಗೆ ಬ್ಲೇಡ್ ಹಾಕಿದ ಕಿಡಿಗೇಡಿಗಳು

ಹಿಂದೂಗಳ ಬಳಿಯೇ ವ್ಯಾಪಾರ ಮಾಡಿ ಭಕ್ತರಿಗೆ ಸಂದೇಶ: ಇನ್ನೂ ಇದೇ ತಿಂಗಳು 21 ರಿಂದ 24ರವರೆಗೆ ಸೋಂಪುರದ ಸೋಮೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಆದರೆ, ಪ್ರಾರಂಭಕ್ಕೂ ಮುನ್ನವೇ ಧರ್ಮ ದಂಗಲ್‍ನ ಪೋಸ್ಟ್ ವೈರಲ್ ಆಗಿದ್ದು, ಹಿಂದೂಗಳ ಬಳಿ ವ್ಯಾಪಾರ ಮಾಡಿ ಎಂದು ಹಿಂದೂ ಸಂಘಟನೆಗಳು ಮನವಿ ಮಾಡಿದ್ದಾರೆ. ನಮ್ಮ ದೇವರ ಹೆಸರಲ್ಲೇ ವ್ಯಾಪಾರ ಮಾಡುತ್ತಾರೆ. 

ನಮ್ಮ ದೇವರನ್ನೇ ಬೈಯುತ್ತಾರೆ. ಅವರ ಬಳಿ ವ್ಯಾಪಾರ ಏಕೆ ಎಂದು ಪ್ರಶ್ನಿಸಿದ್ದಾರೆ. ಹಿಂದೂಗಳ ಬಳಿಯೇ ವ್ಯಾಪಾರ ಮಾಡುವುದರಿಂದ ಉಗ್ರ ಚಟುವಟಿಕೆಗೆ ಹೋಗೋ ಹಣವನ್ನ ತಡೆಯಿರಿ ಎಂದು ಮನವಿ ಮಾಡಿದ್ದಾರೆ. ಜಾತ್ರೆಗೆ ನಾಲ್ಕೈದು ದಿನ ಇರೋವಾಗ್ಲೇ ಈ ಅಭಿಯಾನ ಆರಂಭವಾಗಿದ್ದು ಮುಂದೆ ಇದೇ ರೀತಿಯ ಪೋಸ್ಟ್‌ಗಳು ಕಾಫಿನಾಡಲಿ ಶುರುವಾಗೋದಕ್ಕೆ ಇದು ಮುನ್ನುಡಿ ಎಂಬ ಮಾತುಗಳು ಕೇಳಿ ಬರ್ತಿದೆ. 

Chikkamagaluru: ದತ್ತಜಯಂತಿ ವೇಳೆ ದತ್ತಪೀಠದ ರಸ್ತೆಯಲ್ಲಿ ಮೊಳೆ ಹಾಕಿದ್ದವರ ಬಂಧನ

ಒಟ್ಟಾರೆ, ಕಾಫಿನಾಡಲ್ಲಿ ಮೊದಲ ಸುತ್ತಿನ ಧರ್ಮ ದಂಗಲ್‍ನಲ್ಲೂ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿಯಲ್ಲಿ ಅನ್ಯಕೋಮಿನ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಲಾಗಿತ್ತು. ಈಗ ಮತ್ತೇ ಕಾಫಿನಾಡಿನಿಂದಲೇ ಎರಡನೇ ಸುತ್ತಿನ ಧರ್ಮ ದಂಗಲ್ ಆರಂಭವಾಗುತ್ತಾ ಎಂಬ ಪ್ರಶ್ನೆ ಕೂಡ ಮೂಡಿದೆ. ಆದ್ರೆ, ಸೋಂಪುರದಲ್ಲಿ ಅನ್ಯಕೋಮಿನಿವರಿಗೆ ನಿರ್ಬಂಧ ಹೇರಿಲ್ಲ. ಹಿಂದೂಗಳಿಗೆ ಅವರ ಬಳಿ ಹೋಗಬೇಡಿ, ಕೇಸರಿ ಧ್ವಜ ಇರುವ ಕಡೆ ವ್ಯಾಪಾರ ಮಾಡಿ ಅಂತಿದ್ದಾರೆ. ವ್ಯಾಪಾರಸ್ಥರು ಇನ್ಮುಂದೆ ಕೇಸರಿ ಧ್ವಜವನ್ನ ಹಾಕಿಕೊಳ್ಳಬೇಕು. ವ್ಯಾಪಾರಸ್ಥರು ಏನ್ ಮಾಡ್ತಾರೋ ಕಾದುನೋಡ್ಬೇಕು.

Follow Us:
Download App:
  • android
  • ios