ಬೆಂಗಳೂರು(ಜ.28): ನಗರದ ಕೆ.ಆರ್‌.ಪುರ ವಲಯದ ಬೇಗೂರು ಬಳಿಯ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ಬಳಿಯ ಜ.24ರಂದು ಕಾಣಿಸಿಕೊಂಡು ಸಾರ್ವಜನಿರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್‌ ಹಿಂಭಾಗದಲ್ಲಿ 200 ಮೀಟರ್‌ ದೂರದಲ್ಲಿ ಚಿರತೆ ಸೆರೆಗಾಗಿ ಬೋನು ಅಳವಡಿಸಿದ್ದೇವೆ. ಸುಮಾರು 10ಕ್ಕೂ ಹೆಚ್ಚು ಸಿಬ್ಬಂದಿ ಭಾನುವಾರ ಬೆಳಗ್ಗೆಯಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆಯ ಎಂಟು ಟ್ರ್ಯಾಪ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಒಂದು ಡ್ರೋನ್‌ ಕ್ಯಾಮೆರಾದಿಂದ ಅಪಾರ್ಟ್‌ಮೆಂಟ್‌ನ ಸುತ್ತ ಎಂಟು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಶೋಧ ನಡೆಸಿದ್ದೇವೆ. ಆದರೆ, ಈವರೆಗೂ ಪತ್ತೆಯಾಗಿಲ್ಲ. 

ಅಪಾರ್ಟ್‌ಮೆಂಟಲ್ಲಿ ಚಿರತೆಗಾಗಿ ತೀವ್ರ ಶೋಧ: ಜನರಲ್ಲಿ ಹೆಚ್ಚಿದ ಆತಂಕ

ಮುಂದಿನ ಒಂದು ವಾರ ಕಾಲ ಶೋಧ ಕಾರ್ಯ ನಡೆಯಲಿದೆ ಎಂದು ಕೆ.ಆರ್‌.ಪುರ ವಲಯದ ವಲಯ ಅರಣ್ಯ ಅಧಿಕಾರಿ ಶಿವರಾತ್ರೇಶ್ವರ ಮಾಹಿತಿ ನೀಡಿದ್ದಾರೆ.