ಪ್ರೆಸ್ಟೇಜ್‌ ಅಪಾರ್ಟ್‌ಮೆಂಟ್‌ ಕಾಂಪೋಡ್‌ ಹಾರಿ ಚಿರತೆ ಹೊರಗೆ ಹೋಗಿರುವ ದೃಶ್ಯಗಳು ಸೆರೆ| ಅಪಾರ್ಟ್‌ಮೆಂಟ್‌ಗೆ 200 ಮೀಟರ್‌ ದೂರದಲ್ಲಿರುವ ಕಲ್ಲು ಕ್ವಾರಿಯಲ್ಲಿ ಚಿರತೆ ಸೆರೆಯಿಡಿಯಲು ಬೋನ್‌ ಅಳವಡಿಕೆ| ಡ್ರೋನ್‌ ಕ್ಯಾಮೆರಾದಲ್ಲಿ ಹುಡುಕಲು ಸಿದ್ಧತೆ| 

ಬೆಂಗಳೂರು(ಜ.25): ನಗರದ ಕೆ.ಆರ್‌.ಪುರ ವಲಯದ ಬೇಗೂರು ಬಳಿಯ ಪ್ರೆಸ್ಟೇಜ್‌ ಅಪಾರ್ಟ್‌ಮೆಂಟ್‌ ಬಳಿಯ ಸಿಸಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಶೋಧಕಾರ್ಯ ನಡೆಸಿದ್ದಾರೆ.

ಶನಿವಾರ ರಾತ್ರಿ 8.45ರ ಸಮಯಕ್ಕೆ ಪ್ರೆಸ್ಟೇಜ್‌ ಅಪಾಟ್‌ಮೆಂಟ್‌ ಕಾಂಪೋಡ್‌ ಹಾರಿ ಹೊರಗೆ ಹೋಗಿರುವ ದೃಶ್ಯಗಳು ಸೆರೆಯಾಗಿವೆ. ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂದಿ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆಯಿಂದ ಶೋಧ ನಡೆಸುತ್ತಿದ್ದಾರೆ. ಆದರೆ, ಈವರೆಗೂ ಪತ್ತೆಯಾಗಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.

ನಾಯಿ ಹಿಡಿಯಲು ಬಂದ ಚಿರತೆ, ಕೋಳಿ ಹಿಡ್ಕೊಂಡು ಹೋಯ್ತು..!

ಅಪಾರ್ಟ್‌ಮೆಂಟ್‌ಗೆ 200 ಮೀಟರ್‌ ದೂರದಲ್ಲಿರುವ ಕಲ್ಲು ಕ್ವಾರಿಯಲ್ಲಿ ಚಿರತೆ ಸೆರೆಯಿಡಿಯಲು ಬೋನ್‌ ಅನ್ನು ಇಡಲಾಗಿದೆ. ಜೊತೆಗೆ, ಸೋಮವಾರ ಬೆಳಗ್ಗೆ ಡ್ರೋನ್‌ ಕ್ಯಾಮೆರಾದಲ್ಲಿ ಹುಡುಕಲು ಸಿದ್ಧತೆ ನಡೆಸಿದ್ದೇವೆ ಎಂದು ಕೆ.ಆರ್‌.ಪುರ ವಲಯದ ವಲಯ ಅರಣ್ಯ ಅಧಿಕಾರಿ ಶಿವರಾತ್ರೇಶ್ವರ ಮಾಹಿತಿ ನೀಡಿದ್ದಾರೆ.