Asianet Suvarna News Asianet Suvarna News

ಬಾಲಕಿಯ ತೊಡೆಯನ್ನೇ ಸುಟ್ಟ ತಾಯಿ, ಪುಟ್ಟ ಕಂದಮ್ಮನ ಮೇಲೆ ರಾಕ್ಷಸಿ ಕೃತ್ಯ

ಸಾಕು ತಾಯಿ ಬಾಲಕಿಯ ತೊಡೆಯನ್ನು ಸುಟ್ಟುಹಾಕಿದ ರಾಕ್ಷಸಿ ಕೃತ್ಯ ತುಮಕೂರಿನಲ್ಲಿ ನಡೆದಿದೆ. ಸಾಕು ತಾಯಿ ಬಾಲಕಿಯ ತೊಡೆಯನ್ನೇ ಸುಟ್ಟ ಘಟನೆ ಕುಣಿಗಲ್ ಪಟ್ಟಣದ ಮಹಾವೀರ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

Stepmother burns daughters leg in tumakur
Author
Bangalore, First Published Jan 31, 2020, 12:59 PM IST
  • Facebook
  • Twitter
  • Whatsapp

ತುಮಕೂರು(ಜ.31): ಸಾಕು ತಾಯಿ ಬಾಲಕಿಯ ತೊಡೆಯನ್ನು ಸುಟ್ಟುಹಾಕಿದ ರಾಕ್ಷಸಿ ಕೃತ್ಯ ತುಮಕೂರಿನಲ್ಲಿ ನಡೆದಿದೆ. ಸಾಕು ತಾಯಿ ಬಾಲಕಿಯ ತೊಡೆಯನ್ನೇ ಸುಟ್ಟ ಘಟನೆ ಕುಣಿಗಲ್ ಪಟ್ಟಣದ ಮಹಾವೀರ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಜನವರಿಂದ 17 ರಂದು ಘಟನೆ ನಡೆದಿದ್ದು, ಸಾಕು ತಾಯಿ ರತ್ನಮ್ಮಳಿಂದ 11 ವರ್ಷದ ಸಾಕು ಮಗಳು ನಂದಿನಿ ಮೇಲೆ ದೌರ್ಜನ್ಯ ನಡೆದಿದೆ. ಮನೆ ಕೆಲಸ ಮಾಡದಿದ್ದಕ್ಕೆ ಕಬ್ಬಿಣದ ಜಾಲರಿಯಿಂದ ಬಾಲಕಿ ಸುಟ್ಟ ನಿರ್ದಯಿ.

ಕತ್ತಲಲ್ಲಿ ಕಪ್ಪು ಕರಡಿ: ಗ್ರಾಮದೊಳಗೆ ಇವುಗಳ ಸಂಚಾರ ನೋಡಿ

ಎಣ್ಣೆ ಪದಾರ್ಥ ಕರಿಯುತಿದ್ದ ಕಾದ ಜಾಲರಿ ಎರಡೂ ತೊಡೆ ಮೇಲೆ ಇಟ್ಟು ವಿಕೃತಿ ಮೆರೆಯಲಾಗಿದೆ. ಕುಣಿಗಲ್ ಪಟ್ಟದ ಜಿಕೆಎಮ್ ಎಸ್ ಶಾಲೆಯಲ್ಲಿ 9 ನೇ ತರಗತಿ ಓದುತಿದ್ದ ನಂದಿನಿ ಸಹಪಾಠಿಗಳಿಂದ ಪ್ರಕರಣ ಶಿಕ್ಷಕರ ಗಮನಕ್ಕೆ ಬಂದಿದೆ. ಕೂಡಲೇ ಶಿಕ್ಷಕ ರಾಜಣ್ಣ ಚುಂಚನಗಿರಿ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ವಿಚಾರ ತಿಳಿದ ಮಕ್ಕಳ ರಕ್ಷಣಾ ಅಧಿಕಾರಿಗಳಿಂದ ಬಾಲಕಿಯ ರಕ್ಷಣೆ ಮಾಡಲಾಗಿದೆ. ತಾಯಿಯನ್ನು ಕುಣಿಗಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಗೆ ಎರಡು ವರ್ಷ ಇರುವಾಗ ಪೋಷಕರು ಮಗುವನ್ನು ಕುಣಿಗಲ್ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಅನಾಥ ಬಾಲಕಿಯನ್ನು ತಂದು ರತ್ನಮ್ಮ ಸಾಕಿಕೊಂಡಿದ್ದರು.

Follow Us:
Download App:
  • android
  • ios