ಬಾಗಲಕೋಟೆಯಲ್ಲಿ ರಾಜ್ಯಮಟ್ಟದ ಮನೋವೈದ್ಯರ ಸಮ್ಮೇಳನ: 300ಕ್ಕೂ ಅಧಿಕ ಮನೋವೈದ್ಯರು ಭಾಗಿ!
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮನೋರೋಗ ಅತ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಲೇ ಇವೆ. ಇವುಗಳ ಮಧ್ಯೆ ಮನೋರೋಗ ಹೋಗಲಾಡಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಮನೋವೈದ್ಯರ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಆ.12): ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮನೋರೋಗ ಅತ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಲೇ ಇವೆ. ಇವುಗಳ ಮಧ್ಯೆ ಮನೋರೋಗ ಹೋಗಲಾಡಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಮನೋವೈದ್ಯರ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಬರೋಬ್ಬರಿ 300ಕ್ಕೂ ಅಧಿಕ ಮನೋವೈದ್ಯರು ಭಾಗಿಯಾಗಿದ್ದರು. ಹಾಗಾದ್ರೆ ಈ ಸಮ್ಮೇಳನ ನಡೆದಿದ್ದು, ಎಲ್ಲಿ? ಹೇಗೆ? ಅಂತೀರಾ. ಈ ಕುರಿತ ವರದಿ ಇಲ್ಲಿದೆ.
ಹೌದು, ಒಂದೆಡೆ ವೇದಿಕೆಯಲ್ಲಿ ಖ್ಯಾತ ಮನೋವೈದ್ಯರಿಂದ ಉದ್ಘಾಟನೆಯಾದ ಕಾರ್ಯಕ್ರಮ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 300ಕ್ಕೂ ಅಧಿಕ ಮನೋವೈದ್ಯರು, ನಿರಂತರ ಮೂರು ದಿನಗಳ ಕಾಲವೂ ಹೊಸದಾದ ಚರ್ಚೆ, ಸಂವಾದದಲ್ಲಿ ತೊಡಗಿದ ಮನೋವೈದ್ಯರು, ಅಂದಹಾಗೆ ಇಂತಹವೊಂದು ಸಮಾರಂಭಕ್ಕೆ ಸಾಕ್ಷಿಯಾಗಿದ್ದು ಮುಳುಗಡೆ ನಗರಿ ಬಾಗಲಕೋಟೆ. ಹೌದು. ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹಾನಗಲ್ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾರತೀಯ ಮನೋವೈದ್ಯರ ಸಂಘದ ರಾಜ್ಯ ಶಾಖೆಯ 33ನೇ ವಾರ್ಷಿಕೋತ್ಸವ ನಿಮಿತ್ಯ ರಾಜ್ಯ ಮಟ್ಟದ ಮನೋವೈದ್ಯರ ಸಮ್ಮೇಳನವನ್ನ ಆಯೋಜಿಸಲಾಗಿತ್ತು.
ಮದುವೆ ನಿಶ್ಚಯವಾಗಿದ್ದ ಹುಡುಗಿ ತನಗಿಂತ ದೊಡ್ಡವಳು: ಮನನೊಂದ ಯುವಕ ಆತ್ಮಹತ್ಯೆ!
ನಿರಂತರ ಮೂರು ದಿನಗಳ ಕಾಲ ನಡೆದ ಸಮ್ಮೇಳನಕ್ಕೆ ಖ್ಯಾತ ಮನೋವೈದ್ಯೆ, ಬೆಂಗಳೂರಿನ ನಿಮಾನ್ಸ್ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ, ಡಾ. ಪ್ರತಿಮಾ ಮೂರ್ತಿ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮನೋರೋಗಿಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿರೋದು ನಿಜಕ್ಕೂ ಆತಂಕದ ವಿಷಯವಾಗಿದ್ದು, ಈ ಸಂಭಂದ ಮನೋರೋಗವನ್ನ ಹತ್ತಿಕ್ಕುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳನ್ನ ಮಾಡುವ ಮೂಲಕ ಸಮಾಜದಲ್ಲಿ ಜನರನ್ನ ಸ್ವಾಸ್ಥ್ಯರನ್ನಾಗಿರಿಸಬೇಕಿದೆ ಎಂದರು.
ಮನೋವೈದ್ಯರೊಂದಿಗೆ ವಿದ್ಯಾರ್ಥಿಗಳ ಸಂವಾದ: ಮೊದಲ ದಿನ ಮನೋವೈದ್ಯರೊಂದಿಗೆ ವಿದ್ಯಾರ್ಥಿಗಳು ಸಹ ಸಂವಾದ ನಡೆಸಿದ್ರು, ನಿತ್ಯದ ಓಡಾಟ ಮತ್ತು ವಿದ್ಯಾರ್ಥಿ ದೆಸೆಯಲ್ಲಿ ಉಂಟಾಗಬಹುದಾದ ಮನೋರೋಗ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಇನ್ನು ಎರಡನೇ ದಿನವಾದ ಇಂದು ಸಾಧಕರಿಗೆ ಪ್ರಶಸ್ತಿ ಘೋಷಣೆಗಳನ್ನ ಮಾಡಿ ವಿತರಣೆ ಮಾಡಲಾಯಿತು. ಇಸ್ರೋದ ಮಾಜಿ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಪ್ರೊ.ಎ.ಎಸ್.ಕಿರಣಕುಮಾರ್ ಅವರಿಗೆ ಡಾ.ಆರ್.ಎಲ್.ಕಪೂರ್ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು. ಅಲ್ಲದೆ ವಿವಿಧ ವಿಭಾಗದ ಪ್ರಶಸ್ತಿಗಳನ್ನೂ ಸಹ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ ಪ್ರೊ.ಎ.ಎಸ್.ಕಿರಣಕುಮಾರ್ ಅವರು ಇಂದು ಭಾರತ ಖಗೋಳಶಾಸ್ತ್ರದಲ್ಲಿ ಅನೇಕ ಸಾಧನೆಗಳನ್ನ ಮಾಡಿದೆ,ಇಸ್ರೋದ ಚಂದ್ರಯಾನ 3.ಉಡಾವಣೆಯಿಂದ ರಷ್ಯಾ,ಅಮೇರಿಕಾ ಸೇರಿದಂತೆ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು.ಮನುಷ್ಯನಿಗೆ ಜ್ಞಾನ ಬಹಳ ಅವಶ್ಯಕವಾದದ್ದು,ಮನುಷ್ಯ ಸಾಧಿಸುವ ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಸಾಧಿಸಬಹುದು ಹಾಗಾಗಿ ಸಾಧನೆಗೆ ಪರಿಶ್ರಮ ಅಗತ್ಯ ಎಂದ್ರು.ಇನ್ನೂ ಇಂತಹ ಸಮ್ಮೇಳನಗಳನ್ನ ಆಯೋಜಿಸುವುದರ ಮೂಲಕ ಪರಸ್ಪರ ವಿಷಯ ವಿನಿಮಯಕ್ಕೆ ಅತ್ಯಂತ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು.
ಮನೋವೈದ್ಯರ ಕಾರ್ಯ ಸ್ಮರಣೀಯ: ಇನ್ನು ರಾಜ್ಯ ಮಟ್ಟದ ಮನೋವೈದ್ಯರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನೋರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರ ನಿವಾರಣೆಗಾಗಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ, ಇವುಗಳ ಮಧ್ಯೆ ಒಂದೇ ಸಮ್ಮೇಳನದಲ್ಲಿ 300ಕ್ಕೂ ಅಧಿಕ ಮನೋವೈದ್ಯರು ಭಾಗಿಯಾಗುವ ಮೂಲಕ ಹೊಸ ಹೊಸ ಚಿಂತನೆಗೆ ಸಾಕ್ಷಿಯಾಗುತ್ತಿರೋದು ಒಳ್ಳೆಯ ಬೆಳವಣಿಗೆ. ಮನೋರೋಗಿಗಳ ಸಮಸ್ಯೆ ಅರಿತು ಅವರನ್ನ ಗುಣಮುಖರನ್ನಾಗಿಸುವತ್ತ ಮುನ್ನಡೆಯುವ ಮನೋವೈದ್ಯರು ಕಾರ್ಯ ಸದಾ ಸ್ಮರಣೀಯ ಎಂದರು.
ವಿಮೆ ತಿರಸ್ಕರಿಸಿದ ರಿಲೈನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಗೆ 5 ಲಕ್ಷ ದಂಡ ವಿಧಿಸಿದ ಗ್ರಾಹಕರ ಆಯೋಗ!
ಈ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ್, ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮನೋವೈದ್ಯರು,ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಒಟ್ಟಿನಲ್ಲಿ ನಿರಂತರ ಮೂರು ದಿನಗಳ ಕಾಲ ಆಯೋಜಿಸಿರೋ ಭಾರತೀಯ ಮನೋವೈದ್ಯರ ಸಂಘದ ರಾಜ್ಯ ಮಟ್ಟದ 33 ನೇ ಸಮ್ಮೇಳನ ಅತ್ಯಂತ ಯಶಸ್ವಿಯಾಗುವುದರೊಂದಿಗೆ, ಹಲವು ಮಹತ್ವದ ವಿಷಯಗಳ ಚರ್ಚೆಗೂ ಸಾಕ್ಷಿಯಾಯಿತು.