ವಿಮೆ ತಿರಸ್ಕರಿಸಿದ ರಿಲೈನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಗೆ 5 ಲಕ್ಷ ದಂಡ ವಿಧಿಸಿದ ಗ್ರಾಹಕರ ಆಯೋಗ!
ಹುಬ್ಬಳ್ಳಿಯ ದತ್ತಾತ್ರೇಯ ಕಾಲನಿ, ನಿವಾಸಿ ಲಕ್ಷ್ಮೀಕಾಂತ ಖಟವಟೆ ಎಂಬುವವರು ಎದುರುದಾರ ರಿಲೈನ್ಸ್ ವಿಮಾ ಕಂಪನಿಯಿಂದ ತನ್ನ ಮಾಲೀಕತ್ವದ ಹುಂಡೈ ಕಾರ್ ನಂ K1 63 M 0959 ಗೆ ಒಟ್ಟು ರೂ.16,606/- ಮೊತ್ತದ ಪ್ರೀಮಿಯಮ್ ಕೊಟ್ಟು ಪ್ಯಾಕೇಜ್ ಪಾಲಸಿ ಖರೀದಿಸಿದ್ದರು.
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಆ.12): ಹುಬ್ಬಳ್ಳಿಯ ದತ್ತಾತ್ರೇಯ ಕಾಲನಿ, ನಿವಾಸಿ ಲಕ್ಷ್ಮೀಕಾಂತ ಖಟವಟೆ ಎಂಬುವವರು ಎದುರುದಾರ ರಿಲೈನ್ಸ್ ವಿಮಾ ಕಂಪನಿಯಿಂದ ತನ್ನ ಮಾಲೀಕತ್ವದ ಹುಂಡೈ ಕಾರ್ ನಂ K1 63 M 0959 ಗೆ ಒಟ್ಟು ರೂ.16,606/- ಮೊತ್ತದ ಪ್ರೀಮಿಯಮ್ ಕೊಟ್ಟು ಪ್ಯಾಕೇಜ್ ಪಾಲಸಿ ಖರೀದಿಸಿದ್ದರು. ಸದರಿ ಪಾಲಸಿ ಅವಧಿ 14/06/2021 ರಿಂದ 13/06/2022ರ ವರೆಗೆ ಚಾಲ್ತಿಯಲ್ಲಿತ್ತು. ದಿ.01/01/2022 ರಂದು ದೂರುದಾರನ ವಾಹನ ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿ ಅಪಘಾತಕ್ಕೆ ಈಡಾಗಿ ಕಾರು ಪೂರ್ತಿ ಜಖಂ ಆಗಿತ್ತು.
ದೂರುದಾರ ಎದುರುದಾರ ವಿಮಾ ಕಂಪನಿಗೆ ಅಗತ್ಯ ದಾಖಲೆ ಸಮೇತ ಕ್ಲೇಮ ಅರ್ಜಿ ಸಲ್ಲಿಸಿದ್ದರು. ಅಪಘಾತ ಸಮಯದಲ್ಲಿ ಕಾರಿನಲ್ಲಿ ಹೆಚ್ಚುವರಿ ಪ್ರಯಾಣಿಕರು ಇದ್ದುದರಿಂದ ದೂರುದಾರ ಪಾಲಸಿ ನಿಯಮಾವಳಿ ಉಲ್ಲಂಘಿಸಿದ್ದಾರೆ ಅಂತ ಅವರ ಕ್ಲೇಮ ಅರ್ಜಿಯನ್ನು ತಿರಸ್ಕರಿಸಿದ್ದರು. ವಿಮಾ ಕಂಪನಿಯ ಅಂತಹ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ರಿಲೈನ್ಸ್ ವಿಮೆ ಕಂಪನಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಮದುವೆ ನಿಶ್ಚಯವಾಗಿದ್ದ ಹುಡುಗಿ ತನಗಿಂತ ದೊಡ್ಡವಳು: ಮನನೊಂದ ಯುವಕ ಆತ್ಮಹತ್ಯೆ!
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ದೂರುದಾರ ಪಡೆದ ವಿಮೆ ಪಾಲಿಸಿ ಚಾಲ್ತಿಯಿದ್ದು ವಿಮಾ ಕಂಪನಿಯ ನಿಯಮಾವಳಿಯಂತೆ ವಿಮಾ ಹಣವನ್ನು ವಿಮಾದಾರರಿಗೆ ಕೊಡುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅಂತಹ ಕರ್ತವ್ಯ ನಿರ್ವಹಣೆಯಲ್ಲಿ ವಿಮಾ ಕಂಪನಿ ವಿಫಲವಾಗಿದೆ, ಅದರಿಂದ ಅವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.
Davanagere: ಏಷ್ಯಾದ 2ನೇ ಅತೀ ದೊಡ್ಡ ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ!
ದೂರುದಾರ ವಿಮಾ ಕರಾರಿನಲ್ಲಿ ನಮೂದಿಸಿದ 5ಕ್ಕಿಂತ ಹೆಚ್ಚು 6+ ಜನರು ಸದರಿ ಅಪಘಾತಕ್ಕೊಳಪಟ್ಟ ವಾಹನದಲ್ಲಿ ಇದ್ದರು ಎನ್ನುವ ಒಂದೇ ಕಾರಣದಿಂದ ಅಂತಹ ಅರ್ಜಿಯನ್ನು ತಿರಸ್ಕರಿಸುವುದು ಸೂಕ್ತ ಮತ್ತು ನ್ಯಾಯಸಮ್ಮತವಲ್ಲ ಎಂದು ಆಯೋಗ ತಿಳಿಸಿ ನಾನ್ ಸ್ಟ್ಯಾಂಡರ್ಡ್ ಆಧಾರದ ಮೇಲೆ ವಿಮಾ ಹಣ ರೂ.4,72,500/- ಶೇ.8 ಬಡ್ಡಿಯೊಂದಿಗೆ ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಆಯೋಗ ಆದೇಶ ನೀಡಿದೆ. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಎದುರುದಾರ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.