ಬೆಂಗಳೂರು(ಏ.23): ವಿಶ್ವಾದ್ಯಂತ ಮಹಾಮಾರಿ ಕೊರೋನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಜಗತ್ತಿನೆಲ್ಲೆಡೆ ಪ್ರಜೆಗಳನ್ನ ರಕ್ಷಿಸಿಕೊಳ್ಳಲು ಸರ್ಕಾರಗಳು ಹರಸಾಹಸ ಪಡುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ವಿಧಾನಸೌಧದಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಿದೆ.  

ವಿಧಾನಸೌಧದಲ್ಲಿರುವ ಶೌಚಾಲಯಗಳ ನಿರ್ವಹಣೆಗೆ ಉಸ್ತುವಾರಿಗೆ ರಾಜ್ಯ ಸರ್ಕಾರ 66 ಅಧಿಕಾರಿಗಳನ್ನ ನಿಯೋಜನೆ ಮಾಡಿದೆ. ವಿಧಾನಸೌಧದ ಪ್ರತಿ ಮಹಡಿಯಲ್ಲಿರುವ ಶೌಚಾಲಯಗಳ ನಿರ್ವಹಣೆಗೆ ಮೇಲುಸ್ತುವಾರಿಗೆ ಒಬ್ಬೊಬ್ಬ ಅಧಿಕಾರಿಯನ್ನ ನಿಯೋಜನೆ ಮಾಡಿದೆ. 

ಕೊರೋನಾ ಆತಂಕದ ಮಧ್ಯೆಯೇ ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲ

ಮೇ. 15 ರವರೆಗೂ ಪ್ರತಿನಿತ್ಯ ಒಬ್ಬೊಬ್ಬರಿಗೆ ಮೇಲುಸ್ತುವಾರಿ ಹೊಣೆಯನ್ನ ಹೊರಿಸಲಾಗಿದೆ. ಮಹಾಮಾರಿ ಕೊರೋನಾ‌ ವೈರಸ್‌ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳಿಗೆ ಜವಾಬ್ದಾರಿಯನ್ನ ನೀಡಲಾಗಿದೆ. ಪ್ರತಿ ಇಲಾಖೆಯ ಶಾಖಾಧಿಕಾರಿಗಳು, ಅಧೀನ ಕಾರ್ಯದರ್ಶಿಗಳಿಗೆ ಮೇಲುಸ್ತುವಾರಿ ಹೊಣೆಯನ್ನ ಹೊರಿಸಲಾಗಿದೆ.ಈ ಎಲ್ಲ ಅಧಿಕಾರಿಗಳು ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕಾಗಿದೆ.