ಹುಬ್ಬಳ್ಳಿ(ಮೇ.29): ಕಿಮ್ಸ್‌ನದ್ದು ಎನ್ನಲಾದ ಕೊರೋನಾ ಐಸಿಯು ವಾರ್ಡ್‌ನ ನೆಲದಲ್ಲಿ ಡಿ ಗ್ರೂಪ್‌ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರು ಮಲಗಿ ನಿದ್ರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವಿಡಿಯೋದಲ್ಲಿ ಕಿಮ್ಸ್‌ ಐಸಿಯು ವಾರ್ಡ್‌ನಲ್ಲಿ ಒಂದೆಡೆ ಕೋರೋನಾ ಸೋಂಕಿತರು ಬೆಡ್‌ ಮೇಲೆ ಮಲಗಿರುವ ಹಾಗೂ ಅಲ್ಲಿಯೆ ಕೆಳಗೆ ಸಂಬಂಧಿಕರು, ಡಿ ಗ್ರೂಪ್‌ ಸಿಬ್ಬಂದಿ ಮಲಗಿರುವ ವಿಡಿಯೋ ಹರಿದಾಡುತ್ತಿದೆ. ಐಸಿಯು ವಾರ್ಡ್‌ಗೆ ರೋಗಿಗಳ ಸಂಬಂಧಿಕರನ್ನು ಬಿಡಬಾರದು ಎಂದಿದ್ದರೂ ರೋಗಿಗಳ ಸಂಬಂಧಿಕರು ಅಲ್ಲಿ ನಿದ್ರಿಸುತ್ತಿರುವುದು ವಿಡಿಯೋದಲ್ಲಿದೆ.

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಹೊರಜಿಲ್ಲೆ ಬ್ಲ್ಯಾಕ್‌ ಫಂಗಸ್‌ ರೋಗಿಗಳು ತ್ರಿಶಂಕು

ಈಚೆಗಷ್ಟೇ ಆರೋಗ್ಯ ಸಚಿವ ಸುಧಾಕರ್‌ ಅವರು ಕೊರೋನಾ ರೋಗಿಗಳು ಇರುವ ಪ್ರತಿ ವಾರ್ಡ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಿದ್ದರೂ ಈವರೆಗೂ ಅದು ಕಾರ್ಯಗತವಾಗಿಲ್ಲ. ಇದರ ನಡುವೆ ಇಂತದ್ದೊಂದು ವಿಡಿಯೂ ವೈರಲ್‌ ಆಗಿದ್ದು, ಕೊರೋನಾ ಸಂಜೀವಿನಿ ಎನ್ನಿಸಿಕೊಂಡ ಕಿಮ್ಸ್‌ಗೆ ಮುಜುಗರ ಉಂಟುಮಾಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona