ಮೈಸೂರು (ಅ.28) :  ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಹೀರೋ, ವಿಲನ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸುವ ವೇಳೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಮಾತಿನ ಭರದಲ್ಲಿ ನಮ್ಮ ಯಡಿಯೂರಪ್ಪನವರೇ ವಿಲನ್‌ ಎಂದ ಪ್ರಸಂಗ ನಡೆಯಿತು.

ಸಿದ್ದರಾಮಯ್ಯನೂ ಅಲ್ಲ, ಕುಮಾರಸ್ವಾಮಿಯವರೂ ಅಲ್ಲ. ನಮ್ಮ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪರೇ ವಿಲನ್‌ ಎಂದು ಸೋಮಶೇಖರ್‌ ಹೇಳಿದರು. ತಕ್ಷಣ ಪಕ್ಕದಲ್ಲಿದ್ದ ಶಾಸಕ ಎಸ್‌.ಎ. ರಾಮದಾಸ್‌ ಅವರು, ಅದು ವಿಲನ್‌ ಅಲ್ಲ ಹೀರೋ ಎಂದೇಳಿ ಎಂದರು.

ರಮೇಶ್ ಜಾರಕಿಹೊಳಿ ಆಪ್ತ ಕೈ ಮುಖಂಡ ಸೇರ್ತಾರ ಬಿಜೆಪಿ..? ...

ತಕ್ಷಣ ಎಚ್ಚೆತ್ತ ಸಚಿವ ಸೋಮಶೇಖರ್‌ ಅವರು, ಈ ಕೋವಿಡ್‌ ಸಮಯದಲ್ಲಿ ಹೀರೋ, ವಿಲನ್‌ ಎಲ್ಲರನ್ನು ಸಿಎಂ ನಿಭಾಯಿಸಿದ್ದಾರೆ. ಕಳೆದ 7 ತಿಂಗಳಿನಿಂದ ಯಡಿಯೂರಪ್ಪ ಕೆಲಸ ಮಾಡಿದ್ದಾರೆ. ಹೀಗಾಗಿ, ಈ ಕೊರೋನಾ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬರೆ ಹೀರೋ ಎಂದು ಸ್ಪಷ್ಟಪಡಿಸಿದರು.