ಬೆಳಗಾವಿ (ಅ.28): ಸುರೇಶ್‌ ಅಂಗಡಿ ಕುಟುಂಬಸ್ಥರಿಗೆ ಲೋಕಸಭಾ ಚುನಾವಣೆ ಟಿಕೆಟ್‌ ಕೊಟ್ಟಲ್ಲಿ ಅವರ ಪರವಾಗಿ ಪ್ರಚಾರ ನಡೆಸುವುದಾಗಿ ಘೋಷಿಸಿರುವ ಕಾಂಗ್ರೆಸ್‌ನ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವುದು ಇಲ್ಲವೇ ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

 ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ಪ್ರಕಾಶ ಹುಕ್ಕೇರಿ ನನ್ನ ಗೆಳೆಯ. ಆದರೆ ಹೈಕಮಾಂಡ್‌ ನಿರ್ಧಾರಕ್ಕೆ ನಾನು ಬದ್ಧ ಎಂದರು.

RR ನಗರ ಉಪಕದನ: ಸಿದ್ದರಾಮಯ್ಯ ಪ್ರಚಾರದ ವೇಳೆ ಪ್ರಧಾನಿ ಮೋದಿ ಪರ ಜೈಕಾರ .

ಇದೇವೇಳೆ ಸುರೇಶ ಅಂಗಡಿ ಅವರು ಸಿಎಂ ಆಗುತ್ತಿದ್ದರು ಎಂಬ ಅವರ ಮಾವ ಲಿಂಗರಾಜ ಪಾಟೀಲ್‌ ಅವರ ಹೇಳಿಕೆಗೆ ಸಂಬಂಧಿಸಿದಂತೆ, ಸುರೇಶ ಅಂಗಡಿ ಅವರ ಮಾವ ಏನು ಹೇಳಿದ್ದಾರೋ ಎಂದು ನನಗೆ ಗೊತ್ತಿಲ್ಲ.

ಆದರೆ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದರು. ನನ್ನ ಹಾಗೇ ತಡವಾಗಿ ಮಂತ್ರಿಯಾದರು. ದುರ್ದೈವದಿಂದ ಅಕಾಲಿಕ ನಿಧನರಾದರು ಎಂದರು.