ಕೊರೋನಾ ರೋಗಿಗಳಿಗೆ ಸರ್ಕಾರ ನಿಗದಿತ ಪಡಿಸಿರುವುದಕ್ಕಿಂತ ಹೆಚ್ಚು ಮೊತ್ತವನ್ನು ರಾಜರಾಜೇಶ್ವರಿನಗರದ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆ ಪಡೆದಿರುವ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು(ಜು.25): ಕೊರೋನಾ ರೋಗಿಗಳಿಗೆ ಸರ್ಕಾರ ನಿಗದಿತ ಪಡಿಸಿರುವುದಕ್ಕಿಂತ ಹೆಚ್ಚು ಮೊತ್ತವನ್ನು ರಾಜರಾಜೇಶ್ವರಿನಗರದ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆ ಪಡೆದಿರುವ ಅಂಶ ಬೆಳಕಿಗೆ ಬಂದಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ ಮಾಡುವುದಕ್ಕಾಗಿ ಸರ್ಕಾರ ರಚನೆ ಮಾಡಿರುವ ಟಾಸ್ಕ್‌ ಫೋರ್ಸ್‌ ದಾಳಿ ನಡೆಸಿದ ಸಂದರ್ಭದಲ್ಲಿ ಈ ಅಂಶ ಗೊತ್ತಾಗಿದೆ. ರೋಗಿಗಳಿಂದ ಶೇ.50ಕ್ಕಿಂತ ಹಣ ಪಡೆದಿರುವು ಕುರಿತು ದಾಖಲೆಗಳಲ್ಲಿ ಉಲ್ಲೇಖಿವಾಗಿದೆ.

ಫೀಲ್ಡ್‌ಗಿಳಿದ ಸಚಿವ ಸುರೇಶ್‌ ಕುಮಾರ್‌: ಕಂಟೈನ್ಮೆಂಟ್‌ ಝೋನ್‌, ಆಸ್ಪತ್ರೆಗಳಿಗೆ ಭೇಟಿ

ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಯಲ್ಲಿ 22 ರೋಗಿಗಳಿಂದ 24 ಲಕ್ಷ ರು.ಗಳನ್ನು ಹೆಚ್ಚುವರಿಯಾಗಿ ಪಡೆಯಲಾಗಿದೆ. ಈ ಎಲ್ಲ 22 ರೋಗಿಗಳನ್ನು ಪತ್ತೆ ಹಚ್ಚಬೇಕು. ಹೆಚ್ಚುವರಿಯಾಗಿ ಪಾವತಿಸಿರುವ ಮೊತ್ತವನ್ನು ಅವರ ಖಾತೆಗಳಿಗೆ ಹಿಂದಿರುಗಿಸಬೇಕು ಎಂದು ಆಸ್ಪತ್ರೆಯ ನೋಡಲ್‌ ಅಧಿಕಾರಿಗೆ ಸೂಚನೆ ನೀಡಿರುವುದಾಗಿ ಟಾಸ್ಕ್‌ಪೋಸ್‌ನ ತಂಡದ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಪಿಯುಸಿ ಉಪನ್ಯಾಸಕರ‌ ನೇಮಕಾತಿ ಕೌನ್ಸಿಲಿಂಗ್‌ಗೆ ಹೊಸ ದಿನಾಂಕ ಪ್ರಕಟ

ಅಲ್ಲದೆ, ಇದೇ ರೀತಿಯಲ್ಲಿ ನಿಗದಿಗಿಂತ ಹೆಚ್ಚು ಶುಲ್ಕ ಪಡೆದರೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಸರ್ಕಾರ ನಿಗದಿ ಮಾಡಿರುವ ಮೊತ್ತ

ವಾರ್ಡ್‌ ಆಯುಷ್ಮಾನ್‌ ಫಲಾನುಭವಿ ನಗದು ಪಾವತಿ, ವಿಮಾ ಪಾಲಿಸಿದಾರರು

ಸಾಮಾನ್ಯ ವಾರ್ಡ್‌ 5,200 10,000

ಆಕ್ಸಿಜನ್‌ ವ್ಯವಸ್ಥೆವಾರ್ಡ್‌ 7,000 12,000

ಐಸಿಯು ವಾರ್ಡ್‌ 85,00 15,000

ಐಸಿಯು ಜೊತೆ ವೆಂಟಿಲೇಟರ್‌ 10,000 25,000.