ಬೈಂದೂರಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಿಗೆ ಸೋಂಕಿರುವ ಇದು 3ನೇ ಪ್ರಕರಣವಾಗಿದೆ.

ಉಡುಪಿ(ಜು.02): ಬೈಂದೂರಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಿಗೆ ಸೋಂಕಿರುವ ಇದು 3ನೇ ಪ್ರಕರಣವಾಗಿದೆ.

ಬೈಂದೂರು ಜ್ಯೂನಿಯರ್‌ ಕಾಲೇಜಿನಲ್ಲಿ ಪರೀಕ್ಷೆ ಬರೆಯುತಿದ್ದ ಆಕೆ ಈಗಾಗಲೇ 3 ಪರೀಕ್ಷೆಗಳನ್ನು ಬರೆದಿದ್ದಾಳೆ. ಬುಧವಾರ 4ನೇ ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸುತಿದ್ದಳು. ಆದರೆ ಸೋಮವಾರ ಆಕೆ ತೀವ್ರ ಅಸ್ವಸ್ಥಳಾಗಿದ್ದರಿಂದ ಆಕೆಯನ್ನು ಪರೀಕ್ಷೆಗೊಳಪಡಿಸಲಾಗಿತ್ತು.

ಜು.4ರಂದು ಕುವೈಟ್‌ ಕನ್ನ​ಡಿ​ಗ​ರಿಗೆ ಮಂಗಳೂರಿಗೆ ಚಾರ್ಟರ್ಡ್ ವಿಮಾನ

ಮಂಗಳವಾರ ರಾತ್ರಿ ಆಕೆಗೆ ಸೋಂಕಿರುವುದು ಖಚಿತವಾಗಿದೆ. ಆಕೆಯನ್ನು ತಕ್ಷಣವೇ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದರಿಂದ ಮುಂದಿನ ಪರೀಕ್ಷೆಗಳನ್ನು ಬರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಆಕೆಯ ಮನೆಯಲ್ಲಿ ಯಾರೂ ಸೋಂಕಿತರಿಲ್ಲ, ಆದರೆ ಆಕೆಯ ನೆರೆ ಮನೆಗೆ ಮುಂಬೈಯಿಂದ ಬಂದವರಿಗೆ ಸೋಂಕಿದ್ದುದರಿಂದ ಅವರಿಂದ ಸೋಂಕು ಹರಡಿರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಕಾಪುವಿನ ಓರ್ವ ಮತ್ತು ಕುಂದಾಪುರ ತಾಲೂಕಿನ ಇಬ್ಬರು ಎಸ್‌ಎಸ್‌ಎಲ್‌ ಸಿ ವಿದ್ಯಾರ್ಥಿನಿಯರು ಕೊರೋನಾ ಸೋಂಕಿತರಾಗಿದ್ದಾರೆ.