Asianet Suvarna News Asianet Suvarna News

ಜು.4ರಂದು ಕುವೈಟ್‌ ಕನ್ನ​ಡಿ​ಗ​ರಿಗೆ ಮಂಗಳೂರಿಗೆ ಚಾರ್ಟರ್ಡ್ ವಿಮಾನ

ಕೇಂದ್ರದ ವಂದೇ ಭಾರತ್‌ ಮಿಷನ್‌ ಸೇರಿದಂತೆ ಖಾಸಗಿ ಚಾರ್ಟರ್ಡ್‌ ವಿಮಾನಗಳು ಸರದಿಯಂತೆ ವಿದೇಶದಿಂದ ಅನಿವಾಸಿ ಭಾರತೀಯರನ್ನು ಕರೆತರುತ್ತಿದ್ದರೂ ಕುವೈಟ್‌ನಲ್ಲಿರುವ ಕರಾವಳಿ ಕನ್ನಡಿಗರಿಗೆ ಮಾತ್ರ ನೇರ ಮಂಗಳೂರು ತಲುಪಲು ಸಾಧ್ಯವಾಗುತ್ತಿಲ್ಲ. ಇದುವರೆಗೆ ಮಂಗಳೂರು ಮತ್ತು ಬೆಂಗಳೂರಿಗೆ ಒಂದು ಬಾರಿ ಮಾತ್ರ ನೇರ ವಿಮಾನ ಸಂಚಾರ ಏರ್ಪಟ್ಟಿದ್ದು ಬಿಟ್ಟರೆ, ಉಳಿದಂತೆ ಪ್ರತಿ ಬಾರಿಯೂ ವಿಮಾನ ಸಂಚಾರ ರದ್ದಾಗುತ್ತಿತ್ತು.

Flight to reach mangalore from Kuwait
Author
Bangalore, First Published Jul 2, 2020, 8:56 AM IST

ಮಂಗಳೂರು(ಜು.02): ಕೇಂದ್ರದ ವಂದೇ ಭಾರತ್‌ ಮಿಷನ್‌ ಸೇರಿದಂತೆ ಖಾಸಗಿ ಚಾರ್ಟರ್ಡ್‌ ವಿಮಾನಗಳು ಸರದಿಯಂತೆ ವಿದೇಶದಿಂದ ಅನಿವಾಸಿ ಭಾರತೀಯರನ್ನು ಕರೆತರುತ್ತಿದ್ದರೂ ಕುವೈಟ್‌ನಲ್ಲಿರುವ ಕರಾವಳಿ ಕನ್ನಡಿಗರಿಗೆ ಮಾತ್ರ ನೇರ ಮಂಗಳೂರು ತಲುಪಲು ಸಾಧ್ಯವಾಗುತ್ತಿಲ್ಲ. ಇದುವರೆಗೆ ಮಂಗಳೂರು ಮತ್ತು ಬೆಂಗಳೂರಿಗೆ ಒಂದು ಬಾರಿ ಮಾತ್ರ ನೇರ ವಿಮಾನ ಸಂಚಾರ ಏರ್ಪಟ್ಟಿದ್ದು ಬಿಟ್ಟರೆ, ಉಳಿದಂತೆ ಪ್ರತಿ ಬಾರಿಯೂ ವಿಮಾನ ಸಂಚಾರ ರದ್ದಾಗುತ್ತಿತ್ತು.

ಇದೀಗ ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್‌ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಪ್ರಯತ್ನದಲ್ಲಿ ಕೊನೆಗೂ ಜು.4ಕ್ಕೆ ಕುವೈಟ್‌ನಿಂದ ನೇರ ಮಂಗಳೂರಿಗೆ ಇಂಡಿಗೋ ಚಾರ್ಟರ್‌್ಡ ವಿಮಾನ ಸಂಚಾರಕ್ಕೆ ರಾಜ್ಯ ಸರ್ಕಾರ ಸಮಯ ನಿಗದಿಪಡಿಸಿದೆ.

ಕ್ವಾರೆಂಟೈನ್ ಸೆಂಟರ್ ಆಗಿದ್ದ ರೆಸಾರ್ಟ್‌ನಲ್ಲಿ ಪ್ರವಾಸಿಗರ ಮೋಜು ಮಸ್ತಿ..!

ನಾಲ್ಕು ದಿನಗಳ ಹಿಂದೆ ಕುವೈಟ್‌ನಿಂದ 164 ಮಂದಿ ಕನ್ನಡಿಗರನ್ನು ಹೊತ್ತ ಚಾರ್ಟರ್ಡ್‌ ವಿಮಾನ ಮಂಗಳೂರಿಗೆ ಬರಬೇಕಾಗಿತ್ತು. ಕುವೈಟ್‌- ಕೇರಳ ಮುಸ್ಲಿಂ ಸಂಘಟನೆಯ ಪ್ರಯತ್ನಕ್ಕೆ ದ.ಕ. ಜಿಲ್ಲಾಡಳಿತ ಹಾಗೂ ಇಂಡಿಯೋ ವಿಮಾನ ಸಂಸ್ಥೆಯಿಂದಲೂ ಕ್ಲಿಯರೆನ್ಸ್‌ ಸಿಕ್ಕಿತ್ತು. ಆದರೆ ಕೊನೆಗಳಿಗೆಯಲ್ಲಿ ರಾಜ್ಯ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅಂತಿಮ ಕ್ಷಣದಲ್ಲಿ ವಿಮಾನ ಸಂಚಾರ ರದ್ದುಗೊಂಡಿತ್ತು. ಇದರಿಂದ ಕುವೈಟ್‌ನಲ್ಲಿ ಊರಿಗೆ ಮರಳುವ ಹಿನ್ನೆಲೆಯಲ್ಲಿ ಬಾಡಿಗೆ ಮನೆ ಬಿಟ್ಟುಕೊಟ್ಟವರು ಪರಿತಪಿಸುವಂತಾಗಿತ್ತು. ಇದೀಗ ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ.ಗಣೇಶ್‌ ಕಾರ್ಣಿಕ್‌ ಅವರ ಮುತುವರ್ಜಿಯಲ್ಲಿ ಕುವೈಟ್‌ ಕನ್ನಡಿಗರು ನೇರವಾಗಿ ಮಂಗಳೂರಿಗೆ ಬರುವಂತಾಗಿದೆ. ಕುವೈಟ್‌ನಿಂದ ಈ ಹಿಂದೆ ಮಂಗಳೂರಿಗೆ ಜೂ.17ರಂದು ಹಾಗೂ ಜೂ.26ರಂದು ಬೆಂಗಳೂರಿಗೆ ಚಾರ್ಟರ್‌್ಡ ವಿಮಾನ ಆಗಮಿಸಿತ್ತು.

Follow Us:
Download App:
  • android
  • ios