SSLC ಪರೀಕ್ಷೆ ಬರೆದು ಬಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
- ಕಡಿಮೆ ಅಂಕ ಬರುವುದೆಂದು ಹೆದರಿ ಪರೀಕ್ಷೆ ಬರೆದ ನಂತರ ಮಾತ್ರೆ ಸೇವಿಸಿ SSLC ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ
- ರಿಪ್ಪನ್ ಪೇಟೆಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ
- ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ಪಬ್ಲಿಕ್ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗುತ್ತೇನೆಂದು ಭಯ
ಶಿವಮೊಗ್ಗ (ಜು.20): ಕಡಿಮೆ ಅಂಕ ಬರುವುದೆಂದು ಹೆದರಿ ಪರೀಕ್ಷೆ ಬರೆದ ನಂತರ ಮಾತ್ರೆ ಸೇವಿಸಿ SSLC ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ರಿಪ್ಪನ್ ಪೇಟೆಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಇಲ್ಲಿನ ಕೆಂಚನಾಲ ಗ್ರಾಮದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ಪಬ್ಲಿಕ್ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗುತ್ತೇನೆಂದು ಭಯಗೊಂಡು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಪತ್ನಿ ಅಂತ್ಯಸಂಸ್ಕಾರ ವೇಳೆ ಶಾಮಿಯಾನಕ್ಕೆ ನೇಣು ಬಿಗಿದು ಪತಿಯೂ ಆತ್ಮಹತ್ಯೆ
ಪರೀಕ್ಷೆ ನಂತರ ಮನೆಗೆ ತೆರಳಿ ತಾಯಿಗೆ ತಂದಿಟ್ಟಿದ್ದ ಥೈರಾಯಿಡ್ ಮಾತ್ರೆಗಳನ್ನು ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಾತ್ರೆಗಳನ್ನು ಸೇವಿಸಿ ಅಶ್ವಸ್ಥಳಾಗಿದ್ದನ್ನು ಗಮಸಿದ ಪೋಷಕರು
ತಕ್ಷಣ ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸದ್ಯ ವಿದ್ಯಾರ್ಥಿನಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.