ಒಬ್ಬ ರೈತನ ಸಾಲ ಮನ್ನಾ ಆಗಿದ್ದರೆ ಇವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ : ಬಿ. ಶ್ರೀರಾಮುಲು ಹೇಳಿಕೆ

ಕೊಪ್ಪಳದಲ್ಲಿ ಶ್ರೀರಾಮುಲು ಸಿ.ಎಂ ಹಾಗು ಸಿದ್ದರಾಮಯ್ಯ ವಿರುದ್ಧ ಹೇಳಿಕೆ, ಸಾಲ ಮನ್ನಾ ಮಾಡದಿದ್ದರೆ ರಾಜೀನಾಮೆ ಕೋಡುವುದಾಗಿ ತಿರ್ಮಾನ  

Sriramulu to resign post if CM fails to fullfil farmers need

ಕೊಪ್ಪಳ : ಚುನಾವಣಾ ಪ್ರಚಾರ ನಿಮಿತ್ತ ಪ್ರಣಾಳಿಕೆ ಬಿಡುಗಡೆಗೆ ಆಗಮಿಸಿದ್ದ ಶಾಸಕ ರಾಮುಲು, ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳಾದರು ಸಾಲ ಮನ್ನಾ ಹೆಸರಿನಲ್ಲಿ ಮಣ್ಣೆರಚುವ ಕೆಲಸ ಮಾಡುತ್ತಿರುವುದಾಗಿ ಹೇಳಿಕೆ. ಸಾಲ ಮನ್ನಾ ಘೋಷಿಸಿ ಇಷ್ಟು ದಿನ ಕಳೆದರೂ ಬ್ಯಾಂಕ್ ಗಳಿಗೆ ಯಾವುದೆ  ಸರ್ಕಾರದ ಆದೇಶ ತಲುಪಿಲ್ಲ.  ಸಿಎಂ ಕುಮಾರಸ್ವಾಮಿ ಎಲ್ಲದಕ್ಕೂ ಕುಂಟು ನೆಪ ಮಾಡುತ್ತಿದ್ದಾರೆ, ಸಿಎಂ ಕುಮಾರ ಸ್ವಾಮಿಗೆ ಜನಪರ ಕಾಳಜಿ ಇಲ್ಲ ಕೊಡಗಿನ ಪರಿಸ್ಥಿತಿ ಅರಿವಿಲ್ಲ. ತಡವಾಗಿ ಬಂದವರು ಲೇಟ್ ಕಮರ್ ಮಾಧ್ಯಮಗಳು ಕಣ್ತೆರೆಸಿದ್ದರಿಂದ ಕೊಡಗಿನಲ್ಲಿ ಒಂದು ದಿನ ಕಳೆದರು ಸಿಎಂ, ಇಲ್ಲದಿದ್ದರೆ ಒಂದೇ ಗಂಟೆಗೆ ವಾಪಾಸ್ ಆಗ್ತಿದ್ರು. ಮಾಜಿ ಪ್ರಧಾನಿ ಮಕ್ಕಳಿಗೆ ಸಂಸ್ಕಾರ ಇಲ್ಲ ಸರಕಾರ ಇದೆ ಎಂಬುದು ಜನರಿಗಿರಲಿ ಶಾಸಕರ ಅರಿವಿಗೆ ಇಲ್ಲ. ಹಾಗಾಗಿ ಸರಕಾರ ಬಿದ್ದು ಹೋಗುತ್ತೆ ಅಂತ ಜನಪ್ರತಿನಿಧಿಗಳು ಮಾರಾಡೋದಿರಲಿ, ಜನರೇ ಮಾತಾಡ್ತಾರೆ. ರಾಜ್ಯದ ಜನರು ಸಿದ್ದರಾಮಯ್ಯ ಆಡಳಿತ ನೋಡಿ ತಕ್ಕ ಶಾಸ್ತಿ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಿನಿ ಅನ್ನೋದಾದ್ರೆ ಆಗ್ಲಿ ಆದರೆ ಭಾರತದ ನಿರುದ್ಯೋಗ ಸಮಸ್ಯೆಯನ್ನು ಯಾವುದೋ ದೇಶದಲ್ಲಿ ಕುಳಿತು ಮಾತನಾಡುವ ರಾಹುಲ್ ಗಾಂಧಿಯನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಹಾಸ್ಯ ಮಾಡಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ನಾಲಿಗೆ ಹರಿಬಿಡಬೇಡಿ ಹರಿಪ್ರಸಾದ್. ನಮಗೂ ಮಾತಾಡೋಕೆ ಬರುತ್ತೆ ಎಂದು ಮಾತನಾಡಿದ ಶ್ರೀರಾಮುಲು.

Latest Videos
Follow Us:
Download App:
  • android
  • ios