Asianet Suvarna News Asianet Suvarna News

ನೆರೆ ಪರಿಶೀಲನೆ ವೇಳೆ ಒಂದಾದ ಮುನಿಸಿಕೊಂಡ ನಾಯಕರು

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ನಾಯಕರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಸಾಂತ್ವನ ಹೇಳಿದರು.

Sriramulu Karnataka Reddy Joint Survey in Flood Hit Areas
Author
Bengaluru, First Published Aug 12, 2019, 8:54 AM IST
  • Facebook
  • Twitter
  • Whatsapp

ಹೂವಿನಹಡಗಲಿ [ಆ.12]: ಕಾರಣಾಂತರಗಳಿಂದ ಕೆಲಸಮದಿಂದ ಪರಸ್ಪರ ಮುಖಕೊಟ್ಟು ಮಾತನಾಡದಿದ್ದ ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಹಾಗೂ ಶಾಸಕ ಕರುಣಾಕರ ರೆಡ್ಡಿ ಅವರು ಭಾನುವಾರ ಜತೆಯಾಗಿಯೇ ನೆರೆ ಪರಿಶೀಲನೆ ನಡೆಸಿದರು. 

ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಸಹೋದರ ಕರುಣಾಕರ ರೆಡ್ಡಿ ನಡುವೆ ಹಲವು ವರ್ಷಗಳಿಂದ ವೈಮನಸ್ಸು ಮುಂದುವರಿದುಕೊಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರು ಕರುಣಾಕರ ರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದರು. ಜತೆಗೆ, ಹಿಂದೊಮ್ಮೆ ಕರುಣಾಕರ ರೆಡ್ಡಿ ಅವರು ಶ್ರೀರಾಮುಲು ವಿರುದ್ಧ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. 

ರೇಣುಕಾಚಾರ್ಯ ತೆಪ್ಪದ ನಾಟಕ; ಶ್ರೀರಾಮುಲು ಕಬಡ್ಡಿ ಆಟ; ಸಾರ್ಥಕವಾಯ್ತು ಶಾಸಕರೇ!

ಆದರೆ, ಪ್ರವಾಹದ ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ವಿರೋಧ ಮರೆತು ಹರಪನಹಳ್ಳಿ, ಹೂವಿನಹಡಗಲಿ ಸೇರಿದಂತೆ ಉಳಿದೆಡೆ ಪರಿಶೀಲನೆ ನಡೆಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us:
Download App:
  • android
  • ios