Asianet Suvarna News Asianet Suvarna News

ರಾಮುಲು ಖಾತೆ ಬದಲು ಹಿಂದಿದೆಯಾ ಮಾಸ್ಟರ್ ಪ್ಲಾನ್ : ಶೀಘ್ರ ಟಾಪ್ ಪೋಸ್ಟ್

ಇತ್ತೀಚೆಗಷ್ಟೇ ಶ್ರೀ ರಾಮುಲು ಅವರ ಖಾತೆಯಲ್ಲಿ ಬದಲಾವಣೆ ಮಾಡಲಾಗಿದ್ದು ಇದರ ಹಿಂದೆ ಇದೆಯಾ ಮಾಸ್ಟರ್ ಪ್ಲಾನ್ 

Sriramulu Get DCM Post Soon Says Somashekar Reddy snr
Author
Bengaluru, First Published Nov 1, 2020, 8:39 AM IST
  • Facebook
  • Twitter
  • Whatsapp

ಬಳ್ಳಾರಿ (ನ.01): ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಉಪಮುಖ್ಯಮಂತ್ರಿ ಆಗಬೇಕೆಂಬುದು ಎಲ್ಲರ ಕನಸು. ಈ ಕನಸು ಆದಷ್ಟುಬೇಗ ಈಡೇರಲಿದೆ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಶ್ರೀರಾಮುಲು ಅವರು ಉಪ ಮುಖ್ಯಮಂತ್ರಿ ಆಗಬೇಕೆಂಬುದು ಬಹುದಿನಗಳ ಬೇಡಿಕೆ. 
ಆದಷ್ಟುಬೇಗ ಈ ಬೇಡಿಕೆ ಈಡೇರಲಿದೆ. ಈ ಕುರಿತು ಪಕ್ಷದ ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು. 

ಶ್ರೀರಾಮುಲು ಗುಡ್ ನ್ಯೂಸ್ : ಉಚಿತ ಆಫರ್..?

ಸಿಎಂ ಬದಲಾವಣೆ ಇಲ್ಲ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಆ ರೀತಿಯ ಯಾವುದೇ ಎಂದು ಸೋಮಶೇಖರ ರೆಡ್ಡಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದರು.

Follow Us:
Download App:
  • android
  • ios