Asianet Suvarna News Asianet Suvarna News

ಶ್ರೀರಾಮುಲು ಗುಡ್ ನ್ಯೂಸ್ : ಉಚಿತ ಆಫರ್..?

ರಾಜ್ಯದಲ್ಲಿಯೂ ಸಿಎಂ ಬಿ ಎಸ್ ಯಡಿಯೂರಪ್ಪ ಉಚಿತ ಆಫರ್ ಘೋಷಣೆ ಮಾಡಲಿದ್ದಾರೆ ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ. 

Karnataka Govt Will Give Free Vaccine For corona says Minister Sriramulu snr
Author
Bengaluru, First Published Oct 25, 2020, 7:17 AM IST

ಬೆಂಗಳೂರು (ಅ.25):  ‘ಜನರ ಜೀವದ ಪ್ರಶ್ನೆಯಾಗಿರುವ ಕಾರಣ ಉಚಿತ ಕೊರೋನಾ ಲಸಿಕೆ ಸಿಗಲಿದೆ. ನಮ್ಮ ಸರ್ಕಾರಕ್ಕೆ ಜನರಿಗಿಂತ ದೊಡ್ಡದು ಯಾವುದೂ ಇಲ್ಲ. ಸಂದರ್ಭ ಬಂದಾಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಉಚಿತ ಲಸಿಕೆ ನೀಡುವ ಬಗ್ಗೆ ಘೋಷಣೆ ಮಾಡಲಿದ್ದಾರೆ’ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಕೊರೋನಾ ಲಸಿಕೆ ಬಗ್ಗೆ ರಾಜಕಾರಣ ಮಾಡುವುದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ತಾಕತ್‌ ಇದ್ದರೆ, ರಾಜ್ಯದಲ್ಲಿ ಉಚಿತ ಲಸಿಕೆ ಕೊಡಲಿ’ ಎಂದು ಸವಾಲು ಹಾಕಿದ್ದಾರೆ. ಲಸಿಕೆ ವಿಚಾರ ತಾಕತ್ತಿನ ವಿಷಯ ಅಲ್ಲ. ಜನರ ಉಳಿವು-ಅಳಿವಿನ ವಿಷಯ.

ರಾಜ್ಯದ ಜನತೆಗೆ ಗುಡ್ ನ್ಯೂಸ್: ಕಡಿಮೆಯಾಗ್ತಿದೆ ಕೊರೋನಾ ಸೋಂಕು ...

ಕೊರೋನಾ ನಿರ್ವಹಣೆಯನ್ನು ನಮ್ಮ ಸರ್ಕಾರ ಉತ್ತಮವಾಗಿ ನಿರ್ವಹಿಸಿದೆ. ರಾಜ್ಯದಲ್ಲೂ ಉಚಿತ ಕೊರೋನಾ ಲಸಿಕೆ ಕೊಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಒತ್ತಾಯ ಮಾಡಲಾಗುವುದು’ ಎಂದರು.

ಬಿಹಾರ ಬಿಜೆಪಿ ಪ್ರಣಾಳಿಕೆಯಲ್ಲಿ ಉಚಿತ ಕೊರೋನಾ ಲಸಿಕೆ ಭರವಸೆ ವಿಚಾರದ ಮಾಧ್ಯಮಗಳ ಪ್ರಶ್ನೆಗೆ ಬಿಹಾರ ಪ್ರಣಾಳಿಕೆ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟಪಡುವುದಿಲ್ಲ ಎಂದರು.

Follow Us:
Download App:
  • android
  • ios