ರಾಮ ಮಂದಿರ ಉದ್ಘಾಟನೆಗೆ ಶಂಕರ ಮಠಗಳ ವಾದಕ್ಕೆ ಶೃಂಗೇರಿ ಕಿರಿಯ ಜಗದ್ಗುರು ಸ್ಪಷ್ಟನೆ

ಅಯೋಧ್ಯೆಯಲ್ಲಿ ರಾಮ ಮಂದಿರ ಪುನರ್ ಪ್ರತಿಷ್ಠಾಪನೆ ಹಿನ್ನೆಲೆ ರಾಮ ಮಂದಿರ ಉದ್ಘಾಟನೆಗೆ ಶಂಕರ ಮಠಗಳು ದೂರ ವಾದಕ್ಕೆ ಜಗದ್ಗುರುಗಳು ಸ್ಪಷ್ಟನೆ ನೀಡಿದ್ದಾರೆ.

Sringeri Junior Jagadguru Clarifies Shankara Mutts Argument about Ram Mandir inauguration gow

ಚಿಕ್ಕಮಗಳೂರು (ಜ.16): ಅಯೋಧ್ಯೆಯಲ್ಲಿ ರಾಮ ಮಂದಿರ ಪುನರ್ ಪ್ರತಿಷ್ಠಾಪನೆ ಹಿನ್ನೆಲೆ ರಾಮ ಮಂದಿರ ಉದ್ಘಾಟನೆಗೆ ಶಂಕರ ಮಠಗಳು ದೂರ ವಾದಕ್ಕೆ ಜಗದ್ಗುರುಗಳು ಸ್ಪಷ್ಟನೆ ನೀಡಿದ್ದಾರೆ. ಶೃಂಗೇರಿ ಕಿರಿಯ ಜಗದ್ಗುರು ವಿಧುಶೇಖರ ಶ್ರೀಗಳ ಸ್ಪಷ್ಟನೆ ಕೊಟ್ಟಿದ್ದು, ಮಕರ ಸಂಕ್ರಮಣದಿಂದ ಸೂರ್ಯ ತನ್ನ ಪಥ ಬದಲಿಸುತ್ತಾನೆ. ದಕ್ಷಿಣದಿಂದ ಉತ್ತರಾಯಣದ ಕಡೆಗೆ ಪಥ ಬದಲಾವಣೆ ಆಗಿದೆ. ದೇಶದ ನಾಸ್ತಿಕರ‌ ಎಲ್ಲರ ಚಿತ್ತ ಉತ್ತರದತ್ತ ನೆಟ್ಟಿದೆ. ಈ ಉತ್ತರಾಯಣದಲ್ಲಿ ಉತ್ತರದಲ್ಲಿ ವಿಶೇಷವಾದ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಗಮನ ದಕ್ಷಿಣದಿಂದ ಉತ್ತರದತ್ತ ಹೋಗಿದೆ. ನಾಸ್ತಿಕರ ಮನದಲ್ಲಿ ಎರಡು ವಿಚಾರಗಳು ಕೇಂದ್ರಿಕೃತವಾಗಿದೆ. ಒಂದು ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿರೋದು. ಮತ್ತೊಂದು ಉತ್ತರದ ಅಯೋಧ್ಯೆಯಲ್ಲಿ ನಡೆಯುತ್ತಿರೋ ಧರ್ಮಕಾರ್ಯ.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ, ಹಿರೇಮಗಳೂರಿನ ಕೋದಂಡ ರಾಮ ಸ್ವಾಮಿ ದೇಗುಲ ಶುಚಿ ಕಾರ್ಯ

ಜನವರಿ 22ರಂದು ಪರಮ ಪವಿತ್ರವಾದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ ಸಂಪನ್ನವಾಗಲಿದೆ. ಅಯೋಧ್ಯೆಯಲ್ಲಿ ಭವ್ಯ ಮತ್ತು ನವ್ಯ ಮಂದಿರ ಲೋಕಾರ್ಪಣಗೊಳ್ಳಲಿದೆ. ಕೆಲವರು ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ. ಮತ್ತೆ ಕೆಲವರು ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಮನಸ್ಸಲ್ಲೇ ಖುಷಿ ಪಡುತ್ತಿದ್ದಾರೆ. 5 ಶತಮಾನಗಳ ಬಳಿಕ ಈ ಶುಭಕಾರ್ಯ ನಡೆಯುತ್ತಿದೆ. ಪ್ರತಿಯೊಬ್ಬ ನಾಸ್ತಿಕನಿಗೂ ಇದು ಸಂತೋಷದ ಸಂಗತಿಯಾಗಿದೆ.

ಪ್ರತಿಯೊಬ್ಬರು ಅಯೋಧ್ಯೆಗೆ ಹೋಗಿ  ಶ್ರೀರಾಮನ ದರ್ಶನ ಪಡೆಯಬೇಕು. ಅಯೋಧ್ಯೆ ಮತ್ತು ಶೃಂಗೇರಿಯಲ್ಲೂ ಕೂಡ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯುತ್ತದೆ. ಸೂರ್ಯವಂಶದಲ್ಲಿ ಶ್ರೀರಾಮನ ಅವತಾರವಾಗಿದೆ, ಇದು ಸೂರ್ಯವಂಶದ ಬಹದೊಡ್ಡ ಸೌಭಾಗ್ಯ. ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿದ್ದಾನೆ. ಇಂತಹಾ ಪವಿತ್ರ ಕಾರ್ಯವನ್ನ ಸೂರ್ಯದೇವ ಕೂಡ ದಕ್ಷಿಣದಿಂದ ಉತ್ತರದ ಕಡೆ ಹೋಗಿ ನೋಡುತ್ತಿದ್ದಾನೆ ಎಂದಿದ್ದಾರೆ.

ಅಯೋಧ್ಯೆಯಲ್ಲಿ ವಿರಾಜಮಾನನಾಗಲಿದ್ದಾನೆ ಕರುನಾಡ ರಾಮ! ರಾಮದಾಸರ ನೆಲದಲ್ಲಿ ಸಿಕ್ಕಿದ ಶಿಲೆ ಅಯೋಧ್ಯೆ ತಲುಪಿದ್ದು ಹೀಗೆ..

ಮಾತ್ರವಲ್ಲ ಭಗವಾನ್ ಶ್ರೀರಾಮನ ರಾಮಭುಜಂಗ ಸ್ತೋತ್ರ ಪಠಣ ಮಾಡುವಂತೆ ಶ್ರೀಗಳು ಕರೆ ಕೊಟ್ಟಿದ್ದಾರೆ. ಶಂಕರಾಚಾರ್ಯರು ಪಠಣ ಮಾಡಿರುವ ರಾಮನ ಶ್ಲೋಕದಲ್ಲಿ ಅದ್ಭುತ ಅರ್ಥವಿದೆ. ಕಳೆದ ದೀಪಾವಳಿಯಲ್ಲೇ ರಾಮ ಜಪ ಮಾಡಲು ಹೇಳಿದ್ದೇವೆ. ನಾಸ್ತಿಕರು ಕೂಡ ರಾಮಜಪ ಮಾಡುತ್ತಿದ್ದಾರೆ. ಅಯೋಧ್ಯೆಗೂ ಶೃಂಗೇರಿಗೂ ಅವಿನಾಭಾವ ಸಂಬಂಧವಿದೆ.  ಸುಳ್ಳು, ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ.  ಎಲ್ಲರೂ ರಾಮ ಜಪ ಮಾಡಿ ಎಂದು ಶೃಂಗೇರಿಯ ಕಿರಿಯ ಜಗದ್ಗುರು ವಿಧುಶೇಖರ ಶ್ರೀಗಳು ಕರೆ ನೀಡಿದ್ದಾರೆ.

Latest Videos
Follow Us:
Download App:
  • android
  • ios