Chikkamagaluru: ಎರಡು ವರ್ಷ ಕಳೆದರೂ ಮಂಜೂರಾಗಲಿಲ್ಲ ಆಸ್ಪತ್ರೆ ಜಾಗ, ನಿಲ್ಲದ ಹೋರಾಟ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನೂರು ಬೆಡ್ ಆಸ್ಪತ್ರೆಗೆ ಅವಶ್ಯಕವಿರುವ ಜಾಗ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹೋರಾಟದ ಮುಂದುವರೆದ ಭಾಗವಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಾಗೂ ಕೊಪ್ಪ ಚಲೋ ನಡೆಸುವುದಾಗಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ತಿಳಿಸಿದೆ.

sringeri 100 bed hospital place not approved past two years gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ನ.19): ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನೂರು ಬೆಡ್ ಆಸ್ಪತ್ರೆಗೆ ಅವಶ್ಯಕವಿರುವ ಜಾಗ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹೋರಾಟದ ಮುಂದುವರೆದ ಭಾಗವಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಾಗೂ ಕೊಪ್ಪ ಚಲೋ ನಡೆಸುವುದಾಗಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ತಿಳಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನೂರು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಜಾಗ ಮಂಜೂರಾತಿ ಕುರಿತಾಗಿ, 2020ರ ಜೂನ್ ತಿಂಗಳಿನಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು ನೂರಕ್ಕೂ ಅಧಿಕ ಬಾರಿ ಅಭಿಯಾನ, ಮನವಿ, ಪ್ರತಿಭಟನೆ ನಡೆಸಲಾಗಿದ್ದು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸ್ವಯಂಪ್ರೇರಿತ ಶೃಂಗೇರಿ ಬಂದ್ ನಡೆಸಿ ಬೃಹತ್ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಆಗಮಿಸಿದ್ದ ಅಧಿಕಾರಿಗಳು ಒಂದು ತಿಂಗಳ ಒಳಗೆ ಜಾಗ ಮಂಜೂರಾತಿ ಮಾಡುವುದಾಗಿ ಮಾಹಿತಿ ನೀಡಿದ್ದು ಅದನ್ನು ನಂಬಿ ಹೋರಾಟವನ್ನು ಕೈಬಿಡಲಾಗಿತ್ತು. ಆದರೆ ಒಂದು ವರ್ಷ ಪೂರ್ಣವಾದರೂ ಈ ಬೇಡಿಕೆ ಈಡೇರಿರುವುದಿಲ್ಲ ಎಂದು ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ.

Davanagere: ವೈದ್ಯರ ನಿರ್ಲಕ್ಷ್ಯದಿಂದ ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆ ಸೇರಿದ್ದ ಮಹಿಳೆ ಸಾವು

ಈ ನಂತರದಲ್ಲಿ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ನೀಡಿದ ಭರವಸೆ ಈಡೇರಿಲ್ಲ, ಶಾಸಕರು ಹಳೆಯ ಆಸ್ಪತ್ರೆ ಜಾಗವನ್ನು ತೆರವು ಮಾಡಿಸುವುದಾಗಿ ತಿಳಿಸಿದ್ದರೇ ಹೊರತು ಅದನ್ನೂ ಕಾರ್ಯರೂಪಕ್ಕೆ ತಂದಿಲ್ಲ, ಒಟ್ಟಾರೆ ಸರ್ಕಾರ, ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ತಾಲೂಕಿನ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯೇ ಈ ವೈಫಲ್ಯಕ್ಕೆ ಕಾರಣ ಎಂದಿರುವ ಸಮಿತಿಯು, ತಕ್ಷಣವೇ ಆಸ್ಪತ್ರೆಗೆ ಜಾಗ ಮಂಜೂರಾತಿ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿ ಶೃಂಗೇರಿ ಪಟ್ಟಣದ ಮುಖ್ಯ ರಸ್ತೆಯಲ್ಲಿ  ನವೆಂಬರ್ 25 ರಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದೆ. ನವೆಂಬರ್ 27ರ ಬೆಳಗ್ಗೆಯೊಳಗೆ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯ ಬೇಡಿಕೆ ಈಡೇರಿದೆ ಇದ್ದಲ್ಲಿ ಮುಖ್ಯಮಂತ್ರಿಗಳ ಕೊಪ್ಪ ಭೇಟಿ ಸಂದರ್ಭದಲ್ಲಿ ಕೊಪ್ಪ ಚಲೋ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದೆ.

ಚಿಗಟೇರಿ ಜಿಲ್ಲಾಸ್ಪತ್ರೆ ಖಾಸಗಿಕರಣಕ್ಕೆ ವಿರೋಧ: ಕೆಆರ್ ಎಸ್ ಪ್ರತಿಭಟನೆ

ಹೋರಾಟ ಸಮಿತಿಯ ಬೇಡಿಕೆಗಳು ಇಂತಿವೆ: ಕೂಡಲೇ ಯಾವುದೇ ಕಾರಣಗಳನ್ನು ನೀಡದೆ ಜಾಗ ಮಂಜೂರಾತಿ ಮಾಡಬೇಕು.ತಕ್ಷಣವೇ ಟೆಂಡರ್ ಪ್ರಕ್ರಿಯೆ ಮುಗಿಸಬೇಕು.ಈಗಿರುವ ಆಸ್ಪತ್ರೆಗೆ ವೈದ್ಯಾಧಿಕಾರಿಗಳ ನೇಮಕ ಮಾಡಬೇಕು. ಈ ವೇಳೆ ಅನಿರುದ್ಧ, ಪ್ರವೀಣ, ಅಂಜನ್, ಚೇತನ್ ಅಶ್ವಿನ್, ಆದರ್ಶ, ರಂಜಿತ್ ಹಾಗೂ ಆಸ್ಪತ್ರೆ ಹೋರಾಟ ಸಮಿತಿಯ ಇತರೆ ಸದಸ್ಯರು ಇದ್ದರು.

Latest Videos
Follow Us:
Download App:
  • android
  • ios