ಚಿಗಟೇರಿ ಜಿಲ್ಲಾಸ್ಪತ್ರೆ ಖಾಸಗಿಕರಣಕ್ಕೆ ವಿರೋಧ: ಕೆಆರ್ ಎಸ್ ಪ್ರತಿಭಟನೆ
ದಾವಣಗೆರೆ ಜಿಲ್ಲಾ ಆಸ್ಪತ್ರೆ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವ ಮಾದರಿಯಲ್ಲಿ ಖಾಸಗಿಯವರಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸದಸ್ಯರು ಜಿಲ್ಲಾಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು.
ದಾವಣಗೆರೆ (ನ.19): ದಾವಣಗೆರೆ ಜಿಲ್ಲಾ ಆಸ್ಪತ್ರೆ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವ ಮಾದರಿಯಲ್ಲಿ ಖಾಸಗಿಯವರಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸದಸ್ಯರು ಜಿಲ್ಲಾಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಸಾಂಗಹಳ್ಳಿ ಮಾತನಾಡಿ ದಾವಣಗೆರೆಯ ಚಿಗಟೇರಿ (Chigateri) ಜಿಲ್ಲಾ ಆಸ್ಪತ್ರೆ (District Hospital) ಯನ್ನು ಪಿಪಿಪಿ ಹೆಸರಿನಲ್ಲಿ ಖಾಸಗೀಕರಣ (Privatization) ಮಾಡುತ್ತಿರುವುದು ಜಿಲ್ಲೆಯ ಬಡ ಜನರಿಗೆ ಮಾಡುತ್ತಿರುವ ಮಹಾಮೋಸ. ಜನಪರವಾಗಿ ಕೆಲಸ ಮಾಡಬೇಕಿದ್ದ ಸರ್ಕಾರ, ಜಿಲ್ಲೆಯ ರಾಜಕಾರಣಿಗಳು (Politicians) ಹಣವಂತರ ಪರವಾಗಿರುವುದು ದಾವಣಗೆರೆ ಜಿಲ್ಲೆಯ ದುರಂತ. ಆರೋಗ್ಯ ಸೇವೆ ಹಾಗೂ ಚಿಕಿತ್ಸಾ ವೆಚ್ಚಗಳು ದಿನೇ ದಿನೆ ದುಬಾರಿ (Expensive)ಯಾಗುತ್ತಿವೆ ಅಂತಹ ಸ್ಥಿತಿಯಲ್ಲಿ ಜನರಿಗೆ ಉಚಿತವಾಗಿ ಸಿಗಬೇಕಿದ್ದ ಆರೋಗ್ಯ ಸೇವೆಯ (Health service) ಉಸ್ತುವಾರಿಯನ್ನು ಖಾಸಗಿಗೆ ನೀಡಲು ಮುಂದಾಗಿರುವುದು ಮಹಾ ಅಪರಾಧ ಎಂದರು.
ಮಕ್ಕಳಿಗೆ ಮನೆಯಲ್ಲಿರೋ ಔಷಧಿ ನೀಡುವ ಮುನ್ನ ಇರಲಿ ಎಚ್ಚರ
ಈಗಾಗಲೇ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಹಾವಳಿ (Plague) ಹೆಚ್ಚಾಗಿದ್ದು ಬಡವರು ತಮ್ಮ ಆರೋಗ್ಯವನ್ನು ಸುಧಾರಿಸಲು ಮತ್ತು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಖಾಸಗಿ ಆಸ್ಪತ್ರೆಯನ್ನು ಅವಲಂಭಿಸಲು ಆಗುತ್ತಿಲ್ಲ. ಜೊತೆಗೆ ಖಾಸಗಿ ಆಸ್ಪತ್ರೆಗಳು ಕೇಳುವ ಚಿಕಿತ್ಸಾ (Treatment) ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ರಾಜಕಾರಣಿಗಳು ಕೇವಲ ಭ್ರಷ್ಟಾಚಾರದಲ್ಲಿ ತೊಡಗಿದ್ದು ಈಗಿರುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ (Quality) ಸೇವೆ ದೊರಕುತ್ತಿಲ್ಲ. ಅಲ್ಲಿರುವ ವೈದ್ಯರು (Doctors) ಹಣ ಮಾಡುವಲ್ಲಿ ತೊಡಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರವಿಕುಮಾರ್, ಮಾಲತೇಶ್, ದೋಣಿಹಳ್ಳಿ ಮಂಜುನಾಥ್ ಗೌಡ, ಎನ್.ಎಸ್. ಅಭಿಷೇಕ್, ಸೋಮಶೇಖರಪ್ಪ ಇದ್ದರು.