ಮಂಗಳೂರು(ಜು.25): ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಲಿದ್ದಾರೆ. ಇತ್ತೀಚೆಗೆ ಶ್ರೀಲಂಕದಲ್ಲಿ ಬಾಂಬ್ ಸ್ಪೋಟ ನಡೆದಿರುವ ಹಿನ್ನೆಲೆಯಲ್ಲಿ, ರನಿಲ್ ಅವರಿಗೆ ಬಿಗಿ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ದೇವಾಲಯಕ್ಕೆ ಭೇಟಿಗೆ ಅವಕಾಶ ನಿರ್ಬಂಧಿಸಲಾಗಿದೆ. ಹಾಗೆಯೇ ಮಾಧ್ಯಮದವರ ಭೇಟಿಗೂ ಶ್ರೀಲಂಕದ ಭದ್ರತಾ ಸಿಬ್ಬಂದಿ ನಿರ್ಬಂಧ ಹೇರಿದ್ದಾರೆ.

ಶ್ರೀಲಂಕಾ ಪ್ರಧಾನಿ ಕೊಲ್ಲೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ಬಂದ್ ಮಾಡಲಾಗಿದೆ. ಬೆಳಗ್ಗೆ ಒಂಭತ್ತರಿಂದ ಸಂಜೆ ಆರರ ತನಕ ದೇವಿ ದರ್ಶನ ಬಂದ್ ಮಾಡಲಾಗಿದೆ.

ಕರಾವಳಿಯಲ್ಲಿ ಇನ್ನೂ 4 ದಿನ ಭಾರೀ ಮಳೆ, 2 ದಿನ ರೆಡ್ ಅಲರ್ಟ್

ನವಚಂಡಿಯಾಗಕ್ಕೆ ತಯಾರಿ:

ನಾಳೆ ಕೊಲ್ಲೂರಿನಲ್ಲಿ ನವಚಂಡಿಯಾಗ ನಡೆಯಲಿದ್ದು, ಈ ಸಂಬಂಧ ದೇವಸ್ಥಾನದಲ್ಲಿ ತಯಾರಿ ನಡೆಸಲಾಗಿದೆ. ನವಚಂಡಿಯಾಗದ ಪೂರ್ಣಾಹುತಿಯಲ್ಲಿಶ್ರೀಲಂಕಾ ಪ್ರಧಾನಿ ಭಾಗವಹಿಸಲಿದ್ದಾರೆ. ಕೊಲ್ಲೂರಿನ ಎಲ್ಲ ಅಂಗಡಿ ಮುಂಗಟ್ಟುಗಳು, ವಸತಿ ಸಮುಚ್ಚಯ ಸಂಪೂರ್ಣ ಬಂದ್‌ ಇರಲಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗಿ ಭದ್ರತೆ:

ನಾಳೆ ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ತನಕ ಸಾರ್ವಜನಿಕರಿಗೆ ದರ್ಶನ ಬಂದ್ ಮಾಡಲಾಗಿದ್ದು, ವಾಹನಸಂಚಾರ ಸಹಿತ ಪಾದಚಾರಿಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಕೊಲ್ಲೂರು ದೇವಳದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.