Mysuru : ಮೃಗಾಲಯದ ಛಾಯಾಚಿತ್ರ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ
ನಗರದ ಶ್ರೀಚಾಮರಾಜೇಂದ್ರ ಮೃಗಾಲಯವು 69ನೇ ವನ್ಯಜೀವಿ ಸಪ್ತಾಹ ಆಚರಣೆ ಅಂಗವಾಗಿ ನಡೆಸಿದ ಛಾಯಾಗ್ರಹಣ ಸ್ಪರ್ಧೆ ಮತ್ತು ದೊಡ್ಡಬೆಕ್ಕು ಜಾತಿಯ ಪ್ರಾಣಿಗಳ ಅಭಿಯಾನ ಅಂಗವಾಗಿ ನಡೆದ ಚಿತ್ರಕಲೆ ಸ್ಪರ್ಧೆ ವಿಜೇತರ ಪಟ್ಟಿಯನ್ನು ಘೋಷಿಸಿದೆ.
ಮೈಸೂರು : ನಗರದ ಶ್ರೀಚಾಮರಾಜೇಂದ್ರ ಮೃಗಾಲಯವು 69ನೇ ವನ್ಯಜೀವಿ ಸಪ್ತಾಹ ಆಚರಣೆ ಅಂಗವಾಗಿ ನಡೆಸಿದ ಛಾಯಾಗ್ರಹಣ ಸ್ಪರ್ಧೆ ಮತ್ತು ದೊಡ್ಡಬೆಕ್ಕು ಜಾತಿಯ ಪ್ರಾಣಿಗಳ ಅಭಿಯಾನ ಅಂಗವಾಗಿ ನಡೆದ ಚಿತ್ರಕಲೆ ಸ್ಪರ್ಧೆ ವಿಜೇತರ ಪಟ್ಟಿಯನ್ನು ಘೋಷಿಸಿದೆ.
ಡಾ.ಎಚ್.ವಿ. ಸಂತೃಪ್ತ್ ಮತ್ತು ಯಶಸ್ ನಾರಾಯಣ ಅವರು ಛಾಯಚಿತ್ರ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಯ ಮೌಲ್ಯಮಾಪನ ಮಾಡುವ ಮೂಲಕ ವಿಜೇತರನ್ನು ಆಯ್ಕೆ ಮಾಡಲು ಮೈಸೂರು ಮೃಗಾಲಯಕ್ಕೆ ತಮ್ಮ ಸಹಕಾರ ನೀಡಿದ್ದಾರೆ.
69ನೇ ವನ್ಯಜೀವಿ ಸಪ್ತಾಹ ಅಂಗವಾಗಿ ನಡೆದ ಛಾಯಾಗ್ರಹಣ ಸ್ಪರ್ಧೆಯಲ ಇನ್ಸಿಟ್ಯು ಪ್ರವರ್ಗದಲ್ಲಿ ಟಿ.ಪಿ. ವರದನಾಯಕ ಪ್ರಥಮ, ಬಿ.ಎನ್. ಉಮಾಶಂಕರ್ದ್ವಿತೀಯ ಮತ್ತು ಬಿ. ಶಿವಕುಮಾರ್ತೃತೀಯ ಬಹುಮಾನ ಪಡೆದಿದ್ದಾರೆ. ಎಚ್.ಆರ್. ಶಶಾಂಕ್, ಎಸ್.ಆರ್. ಮಧುಸೂದನ್, ಚಿರಾಗ್ ರಾಜ್, ಸಾರ್ ಸುರೇಶ್ಅವರು ಸರ್ಟಿಫಿಕೇಟ್ ಪಡೆದಿದ್ದಾರೆ.
ಎಕ್ಸ್ಸಿಟ್ಯೂ ಪ್ರವರ್ಗದಲ್ಲಿ ಬಿ. ಉಮೇಶ್ ಪ್ರಥಮ, ಕನ್ನಡಪ್ರಭ ದಿನಪತ್ರಿಕೆಯ ಛಾಯಾಗ್ರಾಹಕ ಅನುರಾಗ್ಬಸವರಾಜ್[ಎಂ.ಎಸ್. ಬಸವಣ್ಣ] ದ್ವಿತೀಯ ಬಹುಮಾನ, ಎಂ.ಆರ್. ರೂಪೇಶ್ತೃತೀಯ ಬಹುಮಾನ ಪಡೆದಿದ್ದಾರೆ.
ವಿ. ಗಿರೀಧರ, ಜಿ.ಎಸ್. ರವಿಶಂಕರ್, ಎಸ್. ಆರ್. ಮಧುಸೂದನ್ ಮತ್ತು ಸಿ. ವಿಶ್ರುತ್ ಅವರು ಪ್ರಮಾಣ ಪತ್ರ ಪಡೆದಿದ್ದಾರೆ.
ದೊಡ್ಡಬೆಕ್ಕು ಜಾತಿಯ ಪ್ರಾಣಿಗಳ ಅಭಿಯಾನದ ಪ್ರಯುಕ್ತ ಚಿತ್ರಕಲೆ ಸ್ಪರ್ಧೆಯಲ್ಲಿ [10 ರಿಂದ 12ನೇ ತರಗತಿ] ಬಿ. ತೇಜಸ್ವಿ ಪ್ರಥಮ, ಜೆ. ರೇಣು ದ್ವಿತೀಯ ಮತ್ತು ಎಂ.ಆರ್. ಕುಮಾರ್ನಾಯಕ ತೃತೀಯ, 7 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೇಯಸ್ಅನಿಕೇತ್ಜೋಶಿ ಪ್ರಥಮ, ಕೆ. ದೀಕ್ಷ ದ್ವಿತೀಯ, ಸೃಷ್ಟಿ ಪೊನ್ನಪ್ಪ ಅಲೆಮೇಡ ತೃತೀಯ, 5 ರಿಂದ 6ನೇ ತರಗತಿ ವಿಭಾಗದಲ್ಲಿ ಪತ್ರಲಿಕಾ ಮಹಾತ ಪ್ರಥಮ, ಕ್ಷಿತಿ ಎಸ್. ಪಾಟೀಲ್ ದ್ವಿತೀಯ ಮತ್ತು ಮೊಹಮ್ಮದ್ ಫಯಾಜ್ ಅನ್ಸಾರಿ ತೃತೀಯ ಬಹುಮಾನ ಪಡೆದಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಈ ಎಲ್ಲಾ ಛಾಯಾಚಿತ್ರಗಳನ್ನು ವೀಕ್ಷಿಸಿ, ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.
ಕೋಟೆನಾಡಲ್ಲಿರುವ ಕಿರು ಮೃಗಾಲಯ
ಚಿತ್ರದುರ್ಗ (ಸೆ.22) : ಚಿತ್ರದುರ್ಗ ಅಂದ್ರೆ ಥಟ್ ಅಂತ ನೆನಪಾಗೋದು ಏಳು ಸುತ್ತಿನ ಕೋಟೆ. ಆದ್ರೆ ಕೋಟೆನಾಡಲ್ಲಿರುವ ಕಿರು ಮೃಗಾಲಯದಲ್ಲಿ ಕರಡಿಗಳ ಚಿನ್ನಾಟ ಹಾಗೂ ಹುಲಿಗಳ ಗಂಭೀರ ನಡಿಗೆ ಪ್ರವಾಸಿಗರ ಜನಮನ ಸೆಳೆಯುತ್ತಿವೆ. ಹೀಗಾಗಿ ಬಯಲುಸೀಮೆಯ ಝೂಗೆ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಈ ಕುರಿತು ವರದಿ ಇಲ್ಲಿದೆ ನೋಡಿ.
ಕಳೆದ ನಾಲ್ಕು ವರ್ಷಗಳ ಹಿಂದೆ, ಮೃಗಾಲಯ ಅಭಿವೃದ್ಧಿಗಾಗಿ ಜಿಲ್ಲೆಯ DMF ನಿಧಿಯಿಂದ 3 ಕೋಟಿ ರೂಪಾಯಿ ಅನುಧಾನವನ್ನು ಮಂಜೂರು ಮಾಡಲಾಗಿತ್ತು. ಆ ಹಣದಿಂದ ಮೃಗಾಲಯಕ್ಕೆ ಮೈಸೂರು ಹಾಗು ಬನ್ನೇರುಘಟ್ಟ ಮೃಗಾಲಯದಿಂದ ಎರಡು ಹುಲಿಗಳನ್ನು ತರಲಾಗಿದೆ. ಆ ಹುಲಿಗಳ ಗಂಭೀರ ನಡಿಗೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಅಲ್ಲದೇ ಮೃಗಾಲಯದಲ್ಲೇ ಜನ್ಮ ಪಡೆದು ಜನಾಕರ್ಷಣೀಯವಾಗಿ, ತಾಯಿ ಕರಡಿಯೊಂದಿಗೆ ತುಂಟಾಟವಾಡುವ ಕರಡಿ ಮರಿಗಳ ಚಿನ್ನಾಟ ಝೂ ಗೆ ಬರುವ ಜನರ ಜನಮನ ಸೆಳೆಯುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಆಡುಮಲ್ಲೇಶ್ವರ ಝೂಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ದರಿಂದಾಗಿ ಸರ್ಕಾರಕ್ಕೆ ಆದಾಯ ಕೂಡ ದ್ವಿಗುಣವಾಗಿದೆ. ಹೀಗಾಗಿ ಇನ್ನಷ್ಟು ಅಪರೂಪದ ಆಕರ್ಷಕ ಪ್ರಾಣಿಗಳನ್ನು ಝೂಗೆ ತರಲು ಮೃಗಾಲಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಪ್ರಾಣಿಗಳ ವಾಸಕ್ಕೆ ಅಗತ್ಯ ಗೃಹ ನಿರ್ಮಾಣ ಭರದಿಂದ ಸಾಗಿದೆ.
'ಕಾವೇರಿ'ದ ಪ್ರತಿಭಟನೆ: ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಒಳನುಗ್ಗಲು ಯತ್ನಿಸಿದ ಕರವೇ ಕಾರ್ಯಕರ್ತರು!
ಇನ್ನೂ ಈ ಮೃಗಾಲಯ ಚಿತ್ರದುರ್ಗ ನಗರದಿಂದ 7 ಕಿಲೋಮೀಟರ್ ಅಂತರದಲ್ಲಿದೆ. ಹಚ್ಚ ಹಸುರಿನ ಸೊಬಗಿನ ವಾತಾವರಣದ ಮಧ್ಯೆ ಕಲ್ಲು ಬಂಡೆಗಳ ನಡುವೆ ಹಾದು ಹೋಗಿರುವ ಅಂಕುಡೊಂಕಾದ ರಸ್ತೆಯಲ್ಲಿರುವ ಆಡುಮಲ್ಲೇಶ್ವರ ಝೂ(Adumalleshwar zoo)ನಲ್ಲಿ ಪ್ರಾಣಿಗಳ ವಾಸಕ್ಕಾಗಿ ಮನೆಗಳನ್ನು ವಿಸ್ತಾರವಾಗಿ ನಿರ್ಮಿಸಿರೋದು ಜನಾಕರ್ಷಣೆಯ ಕೇಂದ್ರವಾಗಿದೆ. ಹೀಗಾಗಿ ಪ್ರಾಣಿ ಪಕ್ಷಿಗಳ ಕಲರವ ವೀಕ್ಷಿಸುತ್ತಾ ಝೂಗೆ ಬರುವ ಪ್ರವಾಸಿಗರು ಫುಲ್ ಎಂಜಾಯ್ ಮಾಡ್ತಿದ್ದಾರೆ.