ಬೆಂಗಳೂರಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಧೂಳಿನ ಪ್ರಮಾಣ ಹೆಚ್ಚಾಗಿ ಜನರಲ್ಲಿ ಶ್ವಾಸಕೋಶದ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಧೂಳು ಉಂಟಾಗುವುದನ್ನು ತಡೆಯಲು ಬಿಬಿಎಂಪಿ 5 ಸ್ಟ್ರಿಂಕ್ಲರ್‌ ವಾಹನಗಳನ್ನು ಖರೀದಿಸಲು ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. 

ಬೆಂಗಳೂರು(ಫೆ.28): ನಗರದ ರಸ್ತೆಗಳಲ್ಲಿನ ಧೂಳಿನ ಸಮಸ್ಯೆ ನಿವಾರಣೆಗಾಗಿ .3.32 ಕೋಟಿ ವೆಚ್ಚದಲ್ಲಿ ನೀರು ಸಿಂಪಡಿಸಲು 5 ಸ್ಟ್ರಿಂಕ್ಲರ್‌ ವಾಹನಗಳನ್ನು ಖರೀದಿಸಲು ಬಿಬಿಎಂಪಿ ಮುಂದಾಗಿದೆ. ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಧೂಳಿನ ಪ್ರಮಾಣ ಹೆಚ್ಚಾಗಿ ಜನರಲ್ಲಿ ಶ್ವಾಸಕೋಶದ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಧೂಳು ಉಂಟಾಗುವುದನ್ನು ತಡೆಯಲು ಬಿಬಿಎಂಪಿ 5 ಸ್ಟ್ರಿಂಕ್ಲರ್‌ ವಾಹನಗಳನ್ನು ಖರೀದಿಸಲು ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಪ್ರತಿ ವಾಹನವು 9 ಸಾವಿರ ಲೀಟರ್‌ ನೀರು ಶೇಖರಣೆ ಸಾಮರ್ಥ್ಯದ ಟ್ಯಾಂಕ್‌ ಹೊಂದಿರಲಿದ್ದು, ಪ್ರತಿದಿನ 45 ಸಾವಿರ ಲೀ. ನೀರನ್ನು ರಸ್ತೆ ಮೇಲೆ ಸಿಂಪಡಿಸಿ ಧೂಳು ನಿಯಂತ್ರಿಸಲು ನಿರ್ಧರಿಸಲಾಗಿದೆ.

5 ಸ್ಟ್ರಿಂಕ್ಲರ್‌ ವಾಹನಗಳ ಖರೀದಿಗಾಗಿ .2 ಕೋಟಿ ವ್ಯಯಿಸಲಾಗುತ್ತಿದೆ. ವಾಹನಗಳನ್ನು ಪೂರೈಸುವ ಸಂಸ್ಥೆ 2 ವರ್ಷ ನಿರ್ವಹಣೆ ಮಾಡಬೇಕಿದೆ. ಅದಕ್ಕಾಗಿ ವಾಹನ ಪೂರೈಕೆ ಸಂಸ್ಥೆಗೆ ಹೆಚ್ಚುವರಿಯಾಗಿ .1.32 ಕೋಟಿ ನೀಡಲಿದೆ. ಒಟ್ಟಾರೆ ಸ್ಟ್ರಿಂಕ್ಲರ್‌ ವಾಹನಗಳಿಗಾಗಿ .3.32 ಕೋಟಿ ವೆಚ್ಚ ಮಾಡಲಿದೆ.

Bengaluru: ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ ಮಳಿಗೆ ಹಂಚಿಕೆ ಹಗರಣ: BBMP ಅಧಿಕಾರಿಗಳಿಂದ ಕೋಟ್ಯಂತರ ಲೂಟಿ.!

ವಾಹನವು ಡೀಸೆಲ್‌, ಸಿಎನ್‌ಜಿ ಅಥವಾ ಬ್ಯಾಟರಿ ಆಧಾರದಲ್ಲಿ ಸಂಚರಿಸಲಿದೆ. ಪ್ರತಿ ವಾಹನವು 30ರಿಂದ 35 ಮೀಟರ್‌ ದೂರದವರೆಗೆ ನೀರು ಸಿಂಪಡಣೆ ಮಾಡುವ ಸಾಮರ್ಥ್ಯ ಹೊಂದಿರಲಿದ್ದು, ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗೆ ನೀರು ಸಿಂಪಡಿಸಲಾಗುತ್ತದೆ. ಪ್ರತಿ ವಾಹನ ನಿತ್ಯ 60 ಕಿ.ಮೀ. ಉದ್ದದ ರಸ್ತೆಗೆ ನೀರು ಸಿಂಪಡಿಸಲಿದೆ.