Asianet Suvarna News Asianet Suvarna News

Bengaluru: ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ ಮಳಿಗೆ ಹಂಚಿಕೆ ಹಗರಣ: BBMP ಅಧಿಕಾರಿಗಳಿಂದ ಕೋಟ್ಯಂತರ ಲೂಟಿ.!

ಬಿಜೆಪಿ ಮುಖಂಡ ಎನ್.ಆರ್. ರಮೇಶ್‌ ಲೋಕಾಯುಕ್ತಕ್ಕೆ ದೂರು
ಬೆಂಗಳೂರಿನ ಶಾಪಿಂಗ್‌ ಕಾಂಪ್ಲೆಕ್ಸ್‌ನಲ್ಲಿ ಮಳಿಗೆ ಹಂಚಿಕೆ ಹಗರಣ
ಬಿಬಿಎಂಪಿ ಅಧಿಕಾರಿಗಳಿಂದ ಕೋಟ್ಯಂತರ ರೂ. ಭ್ರಷ್ಟಾಚಾರ
ಅನಧಿಕೃತವಾಗಿ 312 ಮಳಿಗೆಗಳ ಹಂಚಿಕೆ  ಆರೋಪ

 

Bengaluru Jayanagar Shopping Complex Shop Allotment Scam BBMP Officials Extort Crores sat
Author
First Published Feb 27, 2023, 12:16 PM IST

ಬೆಂಗಳೂರು (ಫೆ.27): ರಾಜ್ಯ ರಾಜಧಾನಿ ಬೆಂಗಳೂರಿನ ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ 312 ಅಕ್ರಮ ಮಳಿಗೆಗಳನ್ನು ನಿರ್ಮಿಸಿ, ಕಾನೂನು ಬಾಹಿರವಾಗಿ ಹಂಚಿಕೆ ಮಾಡಿ ಕೋಟ್ಯಂತರ ರೂಪಾಯಿಗಳನ್ನು ಭ್ರಷ್ಟಾಚಾರ ನಡೆಸಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್‌ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಈ ಹಿಂದೆ ಇದ್ದಂತಹ ವಾಣಿಜ್ಯ ಮಳಿಗೆಗಳಿದ್ದ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮೊದಲು 'ಪುಟ್ಟಣ್ಣ ಚಿತ್ರಮಂದಿರ' ಇದ್ದ ಜಾಗದಲ್ಲಿ ಹೊಸ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲಾಗಿದೆ. ಇನ್ನು ತೆರವುಗೊಳಿಸಲಾದ ಹಳೆಯ ಕಟ್ಟಡದಲ್ಲಿ ಕಳೆದ 45 ವರ್ಷದಿಂದ ವ್ಯಾಪಾರ - ವಹಿವಾಟು ನಡೆಸುತ್ತಿದ್ದ 132 ಮಳಿಗೆಗಳ ಮಾಲೀಕರಿಗೆ ಮಾತ್ರವೇ ಹೊಸದಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಮಳಿಗೆಗಳನ್ನು ಹಂಚಿಕೆ ಮಾಡುವ ಪ್ರಸ್ತಾವನೆ ಬಿಬಿಎಂಪಿ ಮಾರುಕಟ್ಟೆ ವಿಭಾಗದಲ್ಲಿ ಅನುಮೋದನೆ ಮಾಡಲಾಗಿತ್ತು.

ಮೊಬೈಲ್‌ನಲ್ಲೇ ವೋಟರ್‌ ಲಿಸ್ಟ್‌ಗೆ ಅರ್ಜಿ ಹಾಕಿ: ಹೊಸ ಮತದಾರರ ನೋಂದಣಿಗೆ ಬಿಬಿಎಂಪಿ ಜಾಗೃತಿ

312 ಮಳಿಗೆಗಳ ಅನಧಿಕೃತ ಹಂಚಿಕೆ: ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾರುಕಟ್ಟೆ ವಿಭಾಗದ ಅಧಿಕಾರಿಗಳು ಮತ್ತು ದಕ್ಷಿಣ ವಲಯದ ಜಂಟಿ ಆಯುಕ್ತರು ಸ್ಥಳೀಯ ಜನಪ್ರತಿನಿಧಿಗಳ ಪ್ರಭಾವಕ್ಕೆ ಮಣಿದು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹಳೆಯ ಕಟ್ಟಡದಲ್ಲಿದ್ದ ಮೂಲ 132 ಮಳಿಗೆಗಳನ್ನು ಹೊರತುಪಡಿಸಿ, ಕಟ್ಟಡದ ಮೊದಲ ಮಹಡಿಯಲ್ಲಿ 245 ಮಳಿಗೆಗಳನ್ನು, ಒಂದನೇ ಮಹಡಿಯಲ್ಲಿ 55 ಮಳಿಗೆಗಳನ್ನು, ಎರಡನೇ ಮಹಡಿಯಲ್ಲಿ 20 ಮಳಿಗೆಗಳು, ಮೂರನೇ ಮಹಡಿಯಲ್ಲಿ 104 ಮಳಿಗೆಗಳನ್ನು ಹೆಚ್ಚುವರಿಯಾಗಿ ಸಿಕ್ಕ ಸಿಕ್ಕವರಿಗೆ ತಮ್ಮ ಸ್ವಾರ್ಥಕ್ಕಾಗಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

25 ಲಕ್ಷ ರೂ.ಗಳಿಗೆ ಮಳಿಗೆಗಳ ಹಂಚಿಕೆ: ಇದಲ್ಲದೇ, ಕಟ್ಟಡದ ತಳ ಮಹಡಿ (Basement) ಯಲ್ಲಿ 14 ಮಳಿಗೆಗಳನ್ನು ಅಕ್ರಮವಾಗಿ ನಿರ್ಮಿಸಿ ಹಂಚಿಕೆ ಮಾಡಿದ್ದಾರಲ್ಲದೇ, ಅದೇ ಕಟ್ಟಡದ ನೆಲ ಮಹಡಿಯ ಹಿಂಭಾಗದ Passage (ಓಣಿ) ನಲ್ಲಿ 02 ಮಳಿಗೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿದ್ದಾರೆ. ಇದೇ ಕಟ್ಟಡಕ್ಕೆ ಹೊಂದಿಕೊಂಡಂತಿದ್ದ - Syndicate Bank ಕಾರ್ಯ ನಿರ್ವಹಿಸುತ್ತಿದ್ದ ಕಟ್ಟಡದಲ್ಲಿ 04 ಮಳಿಗೆಗಳನ್ನು ನಿರ್ಮಿಸಿ ನಿಯಮಬಾಹಿರವಾಗಿ ಹಂಚಿಕೆ ಮಾಡಿದ್ದಾರೆ. ಒಟ್ಟಾರೆಯಾಗಿ, ನಿಯಮಾನುಸಾರ ಹಂಚಿಕೆ ಮಾಡಬೇಕಿದ್ದ 132 ಮಳಿಗೆಗಳ ಜೊತೆಗೆ 312 ಮಳಿಗೆಗಳನ್ನು ಹೆಚ್ಚುವರಿಯಾಗಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸಿ ತಮಗಿಷ್ಟ ಬಂದವರಿಂದ ಹಂಚಿಕೆ ಮಾಡಿದ್ದಾರೆ. ಪ್ರತಿಯೊಂದು ಮಳಿಗೆಗೆ ತಲಾ ಕನಿಷ್ಠ 25 ರಿಂದ 30 ಲಕ್ಷ ರೂ. ಹಣವನ್ನು ಪಡೆದು ಹಂಚಿಕೆ ಮಾಡಲಾಗಿದೆ ಎಂದು ದೂರಿದ್ದಾರೆ.

ಸಿಐಡಿ ತನಿಖೆಗೆ ವಹಿಸುವಂತೆ ಆಗ್ರಹ: ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು 312 ಅಧಿಕ ವಾಣಿಜ್ಯ ಮಳಿಗೆಗಳನ್ನು ಹಂಚಿಕೆ ಮಾಡಿ ಹತ್ತಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಸಿರುವ ಈ ಬೃಹತ್ ಹಗರಣವನ್ನು CID ತನಿಖೆಗೆ ವಹಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಗಿದೆ. ಹಾಗೆಯೇ ಈ ಬೃಹತ್ ಭ್ರಷ್ಟಾಚಾರದ ಹಗರಣದಲ್ಲಿ ಭಾಗಿಯಾಗಿರುವ ಎಲ್ಲ ಭ್ರಷ್ಟ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ವಹಿಸಬೇಕೆಂದು ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳನ್ನು ಆಗ್ರಹಿಸಲಾಗಿದೆ.

Bengaluru: ಮಾ.1ರಿಂದ ಬಿಬಿಎಂಪಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ: 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹ

ಬಿಬಿಎಂಪಿ ಅಧಿಕಾರಿಗಳು ಭಾಗಿ ಆರೋಪ: ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿರುವ ಈ ಹಗರಣಕ್ಕೆ ಸಂಬಂಧಿಸಿದಂತೆ, ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು 312 ಅಧಿಕ ವಾಣಿಜ್ಯ ಮಳಿಗೆಗಳನ್ನು ಹಂಚಿಕೆ ಮಾಡಿರುವ ಬಿಬಿಎಂಪಿ ದಕ್ಷಿಣ ವಲಯ ಜಂಟಿ ಆಯುಕ್ತರಾಗಿದ್ದ ವೀರಭದ್ರಸ್ವಾಮಿ, ಪಾಲಿಕೆಯ ಮಾರುಕಟ್ಟೆ ವಿಭಾಗದ ಉಪ ಆಯುಕ್ತ ಹೇಮಂತ್ ಶರಣ್, ನಾಗೇಂದ್ರ ನಾಯಕ್ ಮತ್ತು ಮುರಳೀಧರ್, ಪಾಲಿಕೆಯ ಮಾರುಕಟ್ಟೆ ವಿಭಾಗದ ಕಂದಾಯ ಅಧಿಕಾರಿಗಳಾದ ವರಲಕ್ಷ್ಮಿ, ಮಂಜುಳಾ, ಹಾಗೂ ಸಹಾಯಕ ಕಂದಾಯ ಅಧಿಕಾರಿಗಳಾದ ಕಾಂಚನಾ, ಶಿವಕುಮಾರ್ ವಿರುದ್ಧ ವಂಚನೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕೆಂದು ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ.

Follow Us:
Download App:
  • android
  • ios