ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈರುತ್ಯ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಬೆಂಗಳೂರು-ಮೈಸೂರು-ಚಾಮರಾಜನಗರ ಮಾರ್ಗದಲ್ಲಿ ಅಕ್ಟೋಬರ್ 16 ರಿಂದ 21ರವರೆಗೆ ಈ ಕಾಯ್ದಿರಿಸದ ವಿಶೇಷ ರೈಲುಗಳು ಸಂಚರಿಸಲಿವೆ.
ಮೈಸೂರು: ನಾಡ ಹಬ್ಬ ದಸರಾ ಇನ್ನೇನು ಶುರುವಾಗಲಿದೆ. ಈಗಾಲೇ ಸಾಂಸ್ಕೃತಿಕ ನಗರಿ ಜಗಮಗಿಸುತ್ತಿದ್ದು ನಿಧಾನಕ್ಕೆ ಜನದಟ್ಟಣೆ ಹೆಚ್ಚಾಗುತ್ತಿದೆ. ಲಕ್ಷಾಂತರ ಜನರು ಒಟ್ಟಿಗೆ ಸೇರುತ್ತಾರೆ. ಹೀಗಾಗಿ ಮೈಸೂರು ದಸರಾಗೆ ಹೋಗಬೇಕು ಅಂದುಕೊಂಡವರಿಗೆ ರೈಲ್ವೇ ಇಲಾಖೆ ಗುಡ್‌ನ್ಯೂಸ್ ನೀಡಿದೆ.
ಕೆಎಸ್‌ಆರ್ ಬೆಂಗಳೂರು–ಅಶೋಕಪುರಂ
ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈರುತ್ಯ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆಯನ್ನ ಮಾಡಿದೆ. ಬೆಂಗಳೂರು–ಮೈಸೂರು–ಚಾಮರಾಜನಗರ ಮಾರ್ಗದಲ್ಲಿ ವಿಶೇಷ ರೈಲುಗಳು ಸಂಚಾರ ಮಾಡಲಿವೆ. ಕೆಎಸ್‌ಆರ್ ಬೆಂಗಳೂರು–ಅಶೋಕಪುರಂ ನಡುವೆ 3 ಟ್ರಿಪ್ ವಿಶೇಷ ರೈಲು ಪ್ರಯಾಣಿಸಲಿದೆ. ಅಕ್ಟೋಬರ್ 19 ರಿಂದ 21ರವರೆಗೆ ವಿಶೇಷ ರೈಲು ಸಂಚಾರ ನಡೆಯಲಿದೆ.
- ಟ್ರೈನ್ ನಂಬರ್ 06285: ಕೆಎಸ್‌ಆರ್ ಬೆಂಗಳೂರಿನಿಂದ 12:15ಕ್ಕೆ ಹೊರಟು, ಅದೇ ದಿನ ಅಶೋಕಪುರಂಗೆ 15:40ಕ್ ಆಗಮನ
- ಟ್ರೈನ್ ನಂಬರ್ 06286: ಅಶೋಕಪುರಂನಿಂದ 16:10ಕ್ಕೆ ಹೊರಟು ಅದೇ ದಿನ ಕೆಎಸ್‌ಆರ್ ಬೆಂಗಳೂರಿಗೆ 20:00ಕ್ಕೆ ತಲುಪಲಿದೆ
ಪ್ರತಿ ದಿಕ್ಕಿನಲ್ಲಿ ಮೂರು ಸಂಚಾರಗಳು ಇರಲಿವೆ, 8 ಮೆಮು ಬೋಗಿಗಳು ಇರಲಿವೆ. ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಯಲಿಯೂರು, ಬ್ಯಾಡರಹಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ, ಮೈಸೂರು ಮತ್ತು ಚಾಮರಾಜಪುರಂದಲ್ಲಿ ನಿಲುಗಡೆ ಮಾಡಲಿವೆ.
ಇನ್ನು.. ಕೆಎಸ್‌ಆರ್ ಬೆಂಗಳೂರು–ಮೈಸೂರು ನಡುವೆ 6 ಟ್ರಿಪ್ ವಿಶೇಷ ರೈಲು ನಿಯೋಜನೆಗೊಂಡಿದೆ. ಅಕ್ಟೋಬರ್ 16ರಿಂದ 21ರವರೆಗೆ ರಾತ್ರಿ ವಿಶೇಷ ರೈಲು ಸೇವೆ ಇರಲಿದೆ. ಮೈಸೂರು–ಕೆಎಸ್‌ಆರ್ ಬೆಂಗಳೂರು ನಡುವೆ 6 ಟ್ರಿಪ್ ಇರಲಿದೆ.
- ಟ್ರೈನ್ ನಂಬರ್ 06297: ಮೈಸೂರಿನಿಂದ 23:15ಕ್ಕೆ ಹೊರಟು, ಕೆಎಸ್‌ಆರ್ ಬೆಂಗಳೂರಿಗೆ ಮರುದಿನ 02:50ಕ್ಕೆ ತಲುಪಲಿದೆ.
- ಟ್ರೈನ್ ನಂಬರ್ 06298: ಕೆಎಸ್‌ಆರ್ ಬೆಂಗಳೂರಿನಿಂದ 03:15ಕ್ಕೆ ಹೊರಟು, ಅದೇ ದಿನ ಮೈಸೂರಿಗೆ 06:30ಕ್ಕೆ ತಲುಪಲಿದೆ.
ಪ್ರತಿ ದಿಕ್ಕಿನಲ್ಲಿ ಆರು ಸಂಚಾರಗಳು ಇರುತ್ತವೆ. 19 ಬೋಗಿಗಳು ಇರಲಿವೆ. ಶ್ರೀರಂಗಪಟ್ಟಣ, ಪಾಂಡವಪುರ, ಬ್ಯಾಡರಹಳ್ಳಿ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಮತ್ತು ಕೆಂಗೇರಿಯಲ್ಲಿ ನಿಲುಗಡೆ ಆಗಿದೆ.
ಅದೇ ರೀತಿ.. ಮೈಸೂರು–ಚಾಮರಾಜನಗರ ನಡುವೆ 2 ವಿಶೇಷ ರೈಲು ಸೇವೆ ಇರಲಿದೆ. ದಸರಾ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ರೈಲ್ವೆ ಇಲಾಖೆ ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಿಕೊಂಡಿದೆ. ಎಲ್ಲಾ ವಿಶೇಷ ರೈಲುಗಳು ಕಾಯ್ದಿರಿಸದ ರೈಲುಗಳಾಗಿ ಸಂಚಾರ ಮಾಡಲಿವೆ.
- ಟ್ರೈನ್ ನಂಬರ್ 06289: ಅಕ್ಟೋಬರ್ 21ರಂದು ಮೈಸೂರಿನಿಂದ 00:10ಕ್ಕೆ ಹೊರಟು ಅದೇ ದಿನ ಚಾಮರಾಜನಗರಕ್ಕೆ 02:00ಕ್ಕೆ ಬರಲಿದೆ.
- ಟ್ರೈನ್ ನಂಬರ್ 06290: ಅಕ್ಟೋಬರ್ 21ರಂದು ಚಾಮರಾಜನಗರದಿಂದ 02:30ಕ್ಕೆ ಹೊರಟು ಅದೇ ದಿನ ಮೈಸೂರಿಗೆ 04:15ಕ್ಕೆ ತಲುಪಲಿದೆ.
- ಟ್ರೈನ್ ನಂಬರ್ 06293: ಅಕ್ಟೋಬರ್ 21ರಂದು ಮೈಸೂರಿನಿಂದ 21:30ಕ್ಕೆ ಹೊರಟು, ಅದೇ ದಿನ ಚಾಮರಾಜನಗರಕ್ಕೆ 23:20ಕ್ಕೆ ತಲುಪಲಿದೆ.
- ಟ್ರೈನ್ ನಂಬರ್ 06294: ಅಕ್ಟೋಬರ್ 21ರಂದು ಚಾಮರಾಜನಗರದಿಂದ 23:50ಕ್ಕೆ ಹೊರಟು, ಅಕ್ಟೋಬರ್ 22ರಂದು 01:50ಕ್ಕೆ ಮೈಸೂರಿಗೆ ತಲುಪಲಿದೆ.


