ಮೈಸೂರು(ಸೆ.26): ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಅವರ ಅಭಿಮಾನಿಗಳು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಈಡುಗಾಯಿ ಒಡೆದ ಅಭಿಮಾನಿಗಳು ಡಿ.ಕೆ. ಶಿವಕುಮಾರ್‌ ಮತ್ತು ಅವರ ಕುಟುಂಬದವರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು. ಡಿ.ಕೆ. ಶಿವಕುಮಾರ್‌ ಅವರಿಗೆ ಎದುರಾಗಿರುವ ಆಪತ್ತನ್ನು ನಿವಾರಿಸಬೇಕು ಮತ್ತು ರಾಜಕೀಯ ಜೀವನದಲ್ಲಿ ಏಳಿಗೆ ಸಿಗಬೇಕು ಎಂದು ಪ್ರಾರ್ಥಿಸುವುದಾಗಿ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ಮೈಸೂರು: ಮಾವುತರಿಗೆ ಫ್ರೀ ಹೇರ್ ಸ್ಟೈಲ್..!

ಡಿ.ಕೆ. ಶಿವಕುಮಾರ್‌ ಸ್ವಾಭಿಮಾನಿ ಬಳಗದ ಜಿ. ಶ್ರೀನಾಥ್‌ ಬಾಬು ಮಾತನಾಡಿ, ಬಿಜೆಪಿ ನರೇಂದ್ರಮೋದಿ ಮತ್ತು ಅಮಿತ್‌ ಶಾ ಅವರ ರಾಜಕೀಯ ಕುತಂತ್ರಕ್ಕೆ ಡಿ.ಕೆ. ಶಿವಕುಮಾರ್‌ ಬಲಿಯಾಗಿದ್ದಾರೆ. ಅವರು ಒಬ್ಬ ಬಲಿಷ್ಠ ಹಾಗೂ ದಕ್ಷ ನಾಯಕರಾಗಿದ್ದು, ರಾಜ್ಯದಲ್ಲಿ ಬಿಜೆಪಿಯ ವೇಗಕ್ಕೆ ಬ್ರೇಕ್‌ ಹಾಕುತ್ತಿದ್ದ ಕಾರಣ ಏನಾದರೂ ಮಾಡಿ ಅವರನ್ನು ನಿಯಂತ್ರಿಸಬೇಕು ಎಂದು ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐನಿಂದ ತೊಂದರೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

ಜಿಟಿ ದೇವೇಗೌಡರಿಗೆ ಜೆಡಿಎಸ್‌ನಿಂದಲೇ ಇದೆಂಥಾ ಶಾಕ್..!

ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದಾರೆ. ಅವರನ್ನು ರಾಜಕೀಯವಾಗಿ ಎದುರಿಸಲು ಆಗದೆ ಮೋದಿ ಮತ್ತು ಅಮಿತ್‌ ಶಾ ತಂತ್ರಗಾರಿಕೆಯಿಂದ ಹುನ್ನಾರ ನಡೆಸಿ ಬಂಧಿಸಿದ್ದಾರೆ. ಇದನ್ನು ವಿರೋಧಿಸಿ ಹಾಗೂ ಅವರನ್ನು ಬೆಂಬಲಿಸಿ ನಮ್ಮ ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ವಿನೂತನವಾಗಿ ಪ್ರತಿಭಟಿಸುವುದಾಗಿ ತಿಳಿಸಿದರು.

ವಿಶ್ವನಾಥ್‌ಗೆ ಶಾಸ್ತಿ ; ಹುಣಸೂರಿನಲ್ಲಿ ಜೆಡಿಎಸ್‌ನಿಂದ ಅಚ್ಚರಿಯ ಅಭ್ಯರ್ಥಿ!