ಗಂಗಾವತಿ: ಹನುಮದ್ ವೃತಾಚರಣೆಗೆ ಕ್ಷಣಗಣನೆ, ಅಂಜನಾದ್ರಿ ದೇಗುಲದಲ್ಲಿ ವಿಶೇಷ ಹೂವಿನ ಅಲಂಕಾರ
ಅಂಜನಾದ್ರಿ ಬೆಟ್ಟದ ಮೇಲೆ ಇರುವ ಆಂಜನೇಯ ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆದಿದೆ. ಬೆಂಗಳೂರು, ಗದಗ ಮತ್ತು ಗಂಗಾವತಿ ನಗರದಿಂದ ಬಂದಿದ್ದ ವಿವಿಧ ಮಾದರಿಯ ಹೂಗಳಿಂದ ಅಲಂಕೃತಗೊಂಡಿದೆ. ಬೆಟ್ಟದ ಕೆಳಗೆ ಆಂಜನೇಯಸ್ವಾಮಿ ಪಾದುಕೆಗಳಿದ್ದು, ಇಲ್ಲಿರುವ ಮಂಟಪವನ್ನು ಹೂವುಗಳಿಂದ ಸಿಂಗರಿಸಲಾಗಿದೆ.
ರಾಮಮೂರ್ತಿ ನವಲಿ
ಗಂಗಾವತಿ(ಡಿ.12): ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ದೇಗುಲದಲ್ಲಿ ನಾಳೆ(ಶುಕ್ರವಾರ) ಹನುಮದ್ ವೃತಾಚರಣೆ ನಡೆಯುತ್ತಿದ್ದು, ಜಿಲ್ಲಾಡಳಿತ ಎಲ್ಲಾ ಸಿದ್ಧತೆ ಕೈಗೊಂಡಿದೆ. ಕಳೆದ 15 ದಿನಗಳಿಂದ ಹನುಮದ್ ಆಚರಣೆಗಾಗಿ ಪೂರ್ವ ಸಿದ್ಧತೆ ಜೊತೆಗೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳ ಕಾರ್ಯ ನಡೆದಿದೆ. ಅಂಜನಾದ್ರಿ ಬೆಟ್ಟದ ಸುತ್ತಲು ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆದಿದೆ.
ಹೂವಿನ ಅಲಂಕಾರಃ
ಅಂಜನಾದ್ರಿ ಬೆಟ್ಟದ ಮೇಲೆ ಇರುವ ಆಂಜನೇಯ ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆದಿದೆ. ಬೆಂಗಳೂರು, ಗದಗ ಮತ್ತು ಗಂಗಾವತಿ ನಗರದಿಂದ ಬಂದಿದ್ದ ವಿವಿಧ ಮಾದರಿಯ ಹೂಗಳಿಂದ ಅಲಂಕೃತಗೊಂಡಿದೆ. ಬೆಟ್ಟದ ಕೆಳಗೆ ಆಂಜನೇಯಸ್ವಾಮಿ ಪಾದುಕೆಗಳಿದ್ದು, ಇಲ್ಲಿರುವ ಮಂಟಪವನ್ನು ಹೂವುಗಳಿಂದ ಸಿಂಗರಿಸಲಾಗಿದೆ. ದೇಗುಲದ ದ್ವಾರ ಬಾಗಿಲು ಮತ್ತು ಆವರಣ ಸುತ್ತಲು ಹೂಗಳ ಅಲಂಕಾರ ಜೊತೆಗೆ ಬಾಳೆ,ಕಂಬ ಮತ್ತು ಮಾವಿನ ತೋರಣಗಳಿಂದ ಸಿಂಗಾರಗೊಂಡಿದೆ. ಜತೆಗೆ ಭಗದ್ವಜ, ಬ್ಯಾನರುಗಳು ರಾರಾಜಿಸುತ್ತಿವೆ.
ಗಂಗಾವತಿ: ಅಂಜನಾದ್ರಿ ದೇಗುಲದ ಗೋಪುರಕ್ಕೆ ಚಿನ್ನದ ಲೇಪನ, ಜನಾರ್ದನ ರೆಡ್ಡಿ
ಮೆಟ್ಟಿಲುದ್ದಕ್ಕೂ ಜೈ ಶ್ರೀ ರಾಮ್, ಜೈ ಹನುಮಾನ್ ಘೋಷಣೆಃ
ಅಂಜನಾದ್ರಿ ಬೆಟ್ಟ ಹತ್ತುವ ಭಕ್ತರಿಂದ ಜೈ ಶ್ರೀರಾಮಮ್, ಜೈ ಹನುಮಾನ್ ಘೋಷಣೆ ಮೊಳಗಿವೆ. ಈಗಾಗಲೇ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಮಾಲಾಧಾರಿಗಳು ವಿವಿಧ ಸ್ಥಳಗಳಲ್ಲಿ ವಾಸ್ತ್ಯವ್ಯ ಮಾಡಿದ್ದು, ಬೆಳಿಗ್ಗೆ 4 ಗಂಟೆಯಿಂದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಮೆಟ್ಟಿಲುಗಳನ್ನು ಹತ್ತಿ ಮಾಲೆ ವಿಸರ್ಜನೆ ಮಾಡುತ್ತಾರೆ. ಕೆಲ ಭಕ್ತರು ಬೆಟ್ಟ ಏರಿ ಆಂಜನೇಯಸ್ವಾಮಿ ದರ್ಶನ ಪಡೆದು ಬರುತ್ತಿದ್ದಾರೆ. ಅಂಜನಾದ್ರಿಯಲ್ಲಿ ಹನುಮದ್ ವೃತಾಚರಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ವಿದ್ಯುತ್ ದೀಪಗಳು ಮತ್ತು ಹೂವಿನ ಅಲಂಕಾರದಿಂದ ಅಲಂಕೃತಗೊಂಡಿದೆ.
ಅಂಜನಾದ್ರಿ ಬೆಟ್ಟದಲ್ಲಿ ನಡೆಯುವ ಹನುಮಾಲೆ ವಿಸರ್ಜನೆಗೆ ಬರುವ ಭಕ್ತರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ವಿಶೇಷವಾಗಿ ಆಂಜನೇಯಸ್ವಾಮಿ ದೇಗುಲಕ್ಕೆ ಹೂವಿನ ಅಲಂಕಾರ ಮಾಡಲಾಗಿದ್ದು, ಸುಗಮವಾಗಿ ಭಕ್ತರು ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ತಾವು ಸಹ ಹನುಮದ್ ವೃತದಿನದಂದು ಮಾಲೆ ವಿಸರ್ಜನೆ ಮಾಡುವದಾಗಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆಗೆ ಲಕ್ಷಕ್ಕೂ ಅಧಿಕ ಭಕ್ತರ ಆಗಮನ
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ದೇಗುಲದಲ್ಲಿ ಭಕ್ತರು ಹನುಮಮಾಲೆ ವಿಸರ್ಜನೆಗೆ ದಿನಗಣನೆ ಪ್ರಾರಂಭವಾಗಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಡಿ.13 ರಂದು ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿದ್ದು ಅಂದು ಬೆಳಿಗ್ಗೆ ಗಂಗಾವತಿ ನಗರದಲ್ಲಿ ಹನುಮಮಾಲಾಧಾರಿಗಳ ಮೆರವಣಿಗೆ ಜರುಗಲಿದೆ.
ಪ್ರಸಾದ ವ್ಯವಸ್ಥೆಃ
ಅಂಜನಾದ್ರಿಗೆ ಬರುವ ಭಕ್ತರಿಗೆ ಪ್ರಸಾದ ವಿತರಿಸುವದಕ್ಕಾಗಿ ಸಿದ್ಧತೆ ನಡೆದಿದೆ. ಅಂಜನಾದ್ರಿ ಬೆಟ್ಟದ ಹಿಂಭಾಗದ ಚಿಕ್ಕರಾಂಪುರ ಬಳಿ ಇವರು ವೇಧ ಪಾಠ ಶಾಲೆಯ ಆವರಣದಲ್ಲಿ ಕೌಂಟರ್‌ಗಳನ್ನ ಪ್ರಾರಂಭಿಸಲಾಗಿದೆ. ಇದಕ್ಕಾಗಿ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದ್ದು, ವಿವಿಧ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಬಿಗಿ ಭದ್ರತೆಃ
ಅಂಜನಾದ್ರಿ ಬಳಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ 1500 ಪೊಲೀಸರನ್ನು ನಿಯೋಜಿಸಲಾಗಿದೆ. ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಗಳನ್ನು ಕರೆಯಿಸಲಾಗಿದೆ.
ಅಂಜನಾದ್ರಿಗೆ ಕೇಂದ್ರದಿಂದಲೇ ರೋಪ್ ವೇ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಪ್ರಮುಖರ ಆಗಮನಃ
ಡಿ.13 ರಂದು ಹನುಮದ್ ವೃತ ಹಿನ್ನಲೆ ಮತ್ತು ಹನುಮಮಮಾಲೆ ವಿಸರ್ಜನೆ ಹಿನ್ನೆಯಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಆರ್ ಎಸ್ ಎಸ್ ಸಂಘದ ಪ್ರಮುಖರು ಆಗಮಿಸಲಿದ್ದಾರೆ. ನಗರದಲ್ಲಿ ಹನುಮಮಾಲಾ ಧಾರಿಗಳ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪ್ರಮುಖರು ನಂತರ ಅಂಜನಾದ್ರಿಗೆ ತೆರಳಲಿದ್ದಾರೆ.
ಗಂಗಾವತಿ ನಗರ ಮತ್ತು ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವ ಹಿಂದು ಪರಿಷತ್ ಮತ್ತು ಆರ್ ಎಸ್ ಎಸ್ ಸಂಘದ ಪ್ರಮುಖರು ಆಗಮಿಸಲಿದ್ದಾರೆ. ಅಂಜನಾದ್ರಿಗೆ ಬರುವ ಭಕ್ತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ.