ಗಂಗಾವತಿ: ಅಂಜನಾದ್ರಿ ದೇಗುಲದ ಗೋಪುರಕ್ಕೆ ಚಿನ್ನದ ಲೇಪನ, ಜನಾರ್ದನ ರೆಡ್ಡಿ
ಹಿಂದಿನ ಬಿಜೆಪಿ ಸರ್ಕಾರ ಈ 100 ಕೋಟಿ, ಇಂದಿನ ಕಾಂಗ್ರೆಸ್ ಸರ್ಕಾರ ₹100 ಕೋಟಿ ಸೇರಿದಂತೆ ಅಂಜನಾದ್ರಿ ಅಭಿವೃದ್ಧಿಗೆ ಒಟ್ಟು ₹240 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕೊಠಡಿಗಳು, ರಸ್ತೆ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದ ಶಾಸಕ ಗಾಲಿ ಜನಾರ್ದನ ರೆಡ್ಡಿ
ಗಂಗಾವತಿ(ಡಿ.10): ತಾಲೂಕಿನ ಐತಿಹಾಸಿಕ ಪ್ರಸಿದ್ದ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ದೇಗುಲದ ಗೋಪುರಕ್ಕೆ ಚಿನ್ನದ ಲೇಪನ ಮಾಡುವುದಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಸೋಮವಾರ ಪಂಪಾ ಸರೋವರದಲ್ಲಿ ಹನುಮಮಾಲೆ ಧರಿಸಿ ಅಂಜನಾದ್ರಿ ಬೆಟ್ಟದ ಕೆಳಗೆ ಆಂಜನೇಯಸ್ವಾಮಿ ಪಾದುಕೆಗಳಿಗೆ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಕ್ತರ ಸಹಕಾರ ಪಡೆದು ಗೋಪುರಕ್ಕೆ ಚಿನ್ನದ ಲೇಪ ಮಾಡುವುದಾಗಿ ತಿಳಿಸಿದರು.
ಕೊಪ್ಪಳ: ಕನಕಗಿರಿಯಲ್ಲಿ ಪಾಂಚಜನ್ಯ ಮೊಳಗಿಸಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದ ಎಸ್.ಎಂ.ಕೃಷ್ಣ!
ಹಿಂದಿನ ಬಿಜೆಪಿ ಸರ್ಕಾರ ಈ 100 ಕೋಟಿ, ಇಂದಿನ ಕಾಂಗ್ರೆಸ್ ಸರ್ಕಾರ ₹100 ಕೋಟಿ ಸೇರಿದಂತೆ ಅಂಜನಾದ್ರಿ ಅಭಿವೃದ್ಧಿಗೆ ಒಟ್ಟು ₹240 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕೊಠಡಿಗಳು, ರಸ್ತೆ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದರು.
ಡಿ.13ರಂದು ಹನುಮದ್ ವೃತ ಆಚರಣೆ ನಿಮಿತ್ತ ಮೂರು ದಿನಗಳ ಕಾಲ ಅನ್ನ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆಕೈ ಗೊಳ್ಳಲಾಗುತ್ತಿದೆ. ಅಂಜನಾದ್ರಿ ಬೆಟ್ಟದ ಸುತ್ತಲು ದೀಪಗಳ ಅಲಂಕಾರ ಮಾಡಲಾಗುತ್ತಿದ್ದು, ಬೆಟ್ಟದ ನಾಲ್ಕು ಕಿಮೀ ದೂರ ಜೈ ಶ್ರೀರಾಮ, ಜೈ ಆಂಜನೇಯ ಶ್ಲೋಕ ಧ್ವನಿವರ್ಧಕ ಮೂಲಕ ಕೇಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ನನಗೆ ರಾಜಕೀಯ ಪುನರ್‌ಜನ್ಮ ನೀಡಿದ್ದು, ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿಯಾಗುತ್ತಿದೆ ಎಂದರು. ಗಂಗಾವತಿ ರಾಣಾ ಪ್ರತಾಪ್ ವೃತ್ತದಿಂದ ಆನೆಗೊಂದಿಯವರೆಗೂ ರಸ್ತೆ ನಿರ್ಮಾಣವಾಗಲಿದೆ. ಜೊತೆಗೆ ವಿದ್ಯುತ್ ಕಂಬ ಅಳವಡಿಸಲಾಗುತ್ತಿದೆ ಎಂದರು.
ಉಪಚುನಾವಣೆ ಗೆಲ್ಲಲು ಅಂಜನಾದ್ರಿ ಹನುಮಂತನೇ ನನ್ನನ್ನು ಸಂಡೂರಿಗೆ ಕಳುಹಿಸಿದ್ದಾನೆ: ಜನಾರ್ದನರೆಡ್ಡಿ
ಬಳ್ಳಾರಿ: ಹದಿನಾಲ್ಕು ವರ್ಷಗಳ ಹಿಂದೆ 2008ರ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಹತ್ತು ಕ್ಷೇತ್ರಗಳ ಪೈಕಿ ಒಂಭತ್ತರಲ್ಲಿ ಗೆದ್ದು ಸಂಡೂರು ಸೋತಿದ್ದೆವು. ಈ ಬಾರಿ ಸಂಡೂರು ಗೆಲ್ಲಲು ಅಂಜನಾದ್ರಿ ಹನುಮಂತ ನನ್ನನ್ನು ಬಳ್ಳಾರಿಗೆ ಕಳುಹಿಸಿದ್ದಾರೆ ಎಂದು ಬಿಜೆಪಿ ಸಮಾವೇಶದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅಬ್ಬರಿಸಿದ್ದರು.
ಯತ್ನಾಳ್ ಸ್ವಿಚ್ ಬೇರೆ ಕಡೆ ಇದೆ, ಇನ್ನೆಲ್ಲೋ ಲೈಟ್ ಉರಿಯುತ್ತಿದೆ: ಪಿ. ರಾಜೀವ್
ಸಂಡೂರು ಉಪಚುನಾವಣೆ ಹಿನ್ನೆಲೆ ಚೋರನೂರಿನಲ್ಲಿ ನಡೆದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ್ದ ಶಾಸಕ ಜನಾರ್ದನರೆಡ್ಡಿ ಅವರು, ಬಳ್ಳಾರಿ ಅಭಿವೃದ್ಧಿಗೆ ಕನಸು ಕಂಡವನು ನಾನು. ಬಳ್ಳಾರಿ ಖನಿಜ ಸಂಪತ್ತು ರಾಜ್ಯದಲ್ಲಿ ಉಪಯೋಗ ಮಾಡುವ ಬಗ್ಗೆ ನನ್ನಲ್ಲಿ ಚಿಂತನೆ ಇತ್ತು. ಬಳ್ಳಾರಿ ಅಭಿವೃದ್ಧಿಗೆ ಯಡಿಯೂರಪ್ಪ ಸಹಕಾರ ನೀಡಿದ್ರು. ಸಂಡೂರಿನಲ್ಲಿ ಆಸ್ಪತ್ರೆ, ರಸ್ತೆ, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ, ಹೀಗೆ ಹತ್ತು ಹಲವು ಕನಸು ಕಂಡಿದ್ದೆ. ಆದರೆ ಕುತಂತ್ರದಿಂದ ನನ್ನನ್ನು ಬಳ್ಳಾರಿಯಿಂದ ದೂರ ಇಡೋ ಕೆಲಸ ಮಾಡಿದ್ರು. ನನ್ನ ಹಿಂದಿನ ಜನ್ಮದ ಕರ್ಮದಿಂದ ನಾನು ಬಳ್ಳಾರಿಯಿಂದ ದೂರ ಇಡುವಂತೆ ಆಯ್ತು. ಆದರೆ ಕರ್ಮ ರಿಟರ್ಸ್ ಅಂತಾರಲ್ಲ ಹಾಗೆ ನನಗೆ ವಿನಾಕಾರಣ ತೊಂದರೆ ಕೊಟ್ಟವರು ಈಗ ಸಂಕಷ್ಟದಲ್ಲಿದ್ದಾರೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು.
ನಾನು ಹದಿನಾಲ್ಕು ವರ್ಷಗಳ ಹಿಂದೆ ಬಿಜೆಪಿ ಪಕ್ಷವನ್ನು ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಂಡು ಬಂದಿದ್ದೆ. ಆದರೆ ಸಂಡೂರು ಮಾತ್ರ ಗೆಲುವು ಪಡೆಯಲಾಗಿರಲಿಲ್ಲ. ಸೋತಿರೋ ಸಂಡೂರಿನಿಂದಲೇ ಗೆಲುವು ಪ್ರಾರಂಭ ಮಾಡುತ್ತೇವೆ. 2028ರಲ್ಲಿ 150 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಸಂಡೂರಿನ ಸಿಪಿಐ ಮಹೇಶ್ ಗೌಡ ವಿರುದ್ಧ ಹರಿಹಾಯ್ದ ಶಾಸಕರು, ನಾನು ಸಿಬಿಐ ಅಧಿಕಾರಿಗಳನ್ನು ನೋಡಿದ್ದೇನೆ, ಇಲ್ಲಿಯ ಸಿಪಿಐ ಯಾವ ಲೆಕ್ಕಾ? ಸಂಡೂರಿನ ಸಿಪಿಐ ಮಹೇಶ್ ಗೌಡ ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಒಬ್ಬ ಪೊಲೀಸ್ ಆಫೀಸರ್ ಆಗಿ ಥೇಟ್ ಕಾಂಗ್ರೆಸ್ ಕಾರ್ಯಕರ್ತರಂತೆ ಬಿಜೆಪಿ ಕಾರ್ಯಕರ್ತರಿಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಬೆದರಿಸುವ ಆಡಿಯೋ ಕೇಳಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾರಿಗೂ ಹೆದರಬೇಕಿಲ್ಲ, ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಜೊತೆಗೆ ನಾವಿದ್ದೇನೆ ಎಂದು ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದರು.