*  'ನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಕ್ರಮ’ ಕುರಿತ ಸಂವಾದ ಕಾರ್ಯಕ್ರಮ*  ಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಮುಖ ಭಾಗ. ಅದು ಪ್ರಜಾಪ್ರಭುತ್ವದ ಹಬ್ಬ*  ಮತದಾನದ ನೈತಿಕತೆಯೂ ಜವಾಬ್ದಾರಿಯ ಭಾಗವಾಗಬೇಕು 

ಮಂಗಳೂರು(ಏ.02):  ‘ನನ್ನ ಮತ ಮಾರಾಟಕ್ಕಿಲ್ಲ’ (My Vote Is Not For Sale) ಎನ್ನುವುದು ಜನಾಂದೋಲನವಾಗಿ ರಾಷ್ಟ್ರಮಟ್ಟದಲ್ಲಿ ನಡೆಯಬೇಕು. ಈ ಮೂಲಕ ಮತದಾನದ ಜಾಗೃತಿ ಮೂಡಬೇಕು ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಹೇಳಿದ್ದಾರೆ. ಮಂಗಳೂರಿನ(Mangaluru) ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಎಸ್‌ಡಿಎಂ ಕಾಲೇಜು, ಜಿಲ್ಲಾ ವಾಣಿಜ್ಯೋದ್ಯಮ ಸಂಘ ಹಾಗೂ ವಿಶ್ವವಿದ್ಯಾಲಯಗಳ ಆಶ್ರಯದಲ್ಲಿ ನಡೆದ ‘ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಕ್ರಮ’ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ರಾಜಕಾರಣಿಗಳನ್ನು ದೂಷಿಸದೆ, ನೈತಿಕತೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಯುವಜನತೆ ಮತದಾನ ವ್ಯವಸ್ಥೆಯ ಕಾವಲುಗಾರ ಆಗಬೇಕು. ಕಡ್ಡಾಯ ಮತದಾನದ ಜಾಗೃತಿ(Voting Awareness) ಉಂಟಾಗಬೇಕು. ಯುವ ಸಮುದಾಯ ರಾಷ್ಟ್ರದ ಹಿತಾಸಕ್ತಿ ಬೆಳೆಸಿಕೊಳ್ಳಬೇಕು. ಸಮಾಜದ ಹಿರಿಯರು ಯುವ ಪೀಳಿಗೆಗೆ ಹಿತೋಪದೇಶ ಮಾಡಬೇಕು. ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ(Election Commission) ಸಮಗ್ರಗೊಳಿಸಬೇಕು. ನ್ಯಾಯಾಂಗ ವ್ಯವಸ್ಥೆ ತ್ವರಿತವಾಗಿ ತೀರ್ಪು ನೀಡುವಂತಾಗಬೇಕು. ಆಂತರಿಕ ಪ್ರಜಾಪ್ರಭುತ್ವ ಉಳಿಸಿಕೊಂಡು ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ವರ್ತಿಸಬೇಕು. ಪತ್ರಿಕಾ ರಂಗ ಕೂಡ ಪ್ರಜಾಪ್ರಭುತ್ವ(Democracy) ಮೌಲ್ಯಗಳನ್ನು ರಕ್ಷಿಸಬೇಕು ಎಂದು ಅವರು ಆಶಿಸಿದರು.

Karnataka Politics: ನಿಮ್ಮ ಸ್ಥಾನದ ಗೌರವ ಅರಿತು ಮಾತನಾಡಿ: ಸ್ಪೀಕರ್‌ ಕಾಗೇರಿಗೆ ಎಚ್‌ಡಿಕೆ ಸಲಹೆ

ಸಂವಿಧಾನ ಪೀಠಿಕೆಯ ಫೋಟೋ ಇರಿಸಿ:

ಶರೀರದಲ್ಲಿ ಆತ್ಮವಿರುವಂತೆ, ಪೀಠಿಕೆಯೇ ಸಂವಿಧಾನದ ಆತ್ಮವಾಗಿದೆ. ಆ ಪೀಠಿಕೆಯ ಫೋಟೋವನ್ನು ತಮ್ಮ ಮನೆ, ಮನೆಯ ಕೊಠಡಿಗಳಲ್ಲಿ ತಮ್ಮ ಆಸಕ್ತಿಯ ಫೋಟೋಗಳ ಜತೆ ಹಾಕಬೇಕು. ಇದರಿಂದ ದೇಶದ ಮೇಲಿನ ನಮ್ಮ ಜವಾಬ್ಧಾರಿ ಹೆಚ್ಚಿ, ದೇಶವನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಲು ಸಾಧ್ಯವಾಗುತ್ತದೆ ಎಂದರು.

ಸಂವಿಧಾನದಲ್ಲಿ(Constitution) ಹೇಳಿದಂತೆ ಭಾರತದ ಪ್ರಜೆಗಳಾದ ನಾವು ನಮ್ಮ ದೇಶವನ್ನು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ, ಸಮಭಾವ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರಚಿಸಲು ಮತ್ತು ಸಮಸ್ತ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ, ಭಾತೃತ್ವವನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕವಾಗಿ ಸಂಕಲ್ಪ ಮಾಡಿ. ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿಸಿ, ನಮಗೆ ನಾವೇ ಅದನ್ನು ಅರ್ಪಿಸಿಕೊಳ್ಳುತ್ತಿದ್ದೇವೆ. ಇದು ಸಂವಿಧಾನದ ಪೀಠಿಕೆ. ಇದನ್ನು ಇನ್ನಷ್ಟುಹೆಚ್ಚು ಚಿಂತನೆ, ಮನನ ಮಾಡಿಕೊಂಡು, ಅದರ ಭಾವನೆ, ಸ್ಫೂರ್ತಿಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಸಂವಿಧಾನದ ಪೀಠಿಕೆಯನ್ನು ಓದಿ ಮನನ ಮಾಡಿಕೊಳ್ಳಿ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಮುಖ ಭಾಗ. ಅದು ಪ್ರಜಾಪ್ರಭುತ್ವದ ಹಬ್ಬ, ಸಂಭ್ರಮ. ಆದರೆ ಚುನಾವಣೆಗಳು ಎಲ್ಲ ವ್ಯವಸ್ಥೆ, ಮೌಲ್ಯ ಆದರ್ಶಗಳ ಅಧಃಪತನಕ್ಕೆ ಕಾರಣವಾಗುತ್ತಿದೆ. ಜನಸಮೂಹದ ಭಾವನೆಗಳನ್ನು ಅರಿತು ಆಡಳಿತಗಾರರು ತಮ್ಮ ನೀತಿ ನಿರೂಪಣೆ ಮಾಡುತ್ತಾರೆ. ಜಾಗೃತ ಸಮಾಜವಾಗಿ ನಾವು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಸಶಕ್ತ ಸಮಾಜ ಆಗಬೇಕು. ಸಮಾಜ ತನ್ನ ಶಕ್ತಿ ಕಳೆದುಕೊಳ್ಳದೆ, ಜಾಗೃತ ಸ್ಥಿತಿಯಲ್ಲಿ ಆಗುಹೋಗುಗಳಿಗೆ ಪ್ರತಿಕ್ರಿಯಿಸಲು ಸಂವಿಧಾನಬದ್ಧ ವ್ಯವಸ್ಥೆ ಇದೆ. ಆ ಜವಾಬ್ಧಾರಿಯನ್ನು ನಿರ್ವಹಿಲು ಸಮಾಜ ಕಾರಣವಾಗಬೇಕು. ಆ ನಿಟ್ಟಿನಲ್ಲಿ ಚುನಾವಣೆಯ ವ್ಯವಸ್ಥೆಯ ಸುಧಾರಣೆಯ ಕ್ರಮವಾಗಿ ಈ ಸಂವಾದವನ್ನು ನಡೆಸಲಾಗುತ್ತಿದೆ. ಶಾಲಾ ಎಸ್‌ಡಿಎಂಸಿಯಿಂದ ಹಿಡಿದು ಲೋಕಸಭೆಯವರೆಗಿನ ಚುನಾವಣೆಯವರೆಗೂ ಸುಧಾರಣೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳಾದ ವಿದ್ವತ್‌ ಶೆಟ್ಟಿ, ಶಿವಶಂಕರ್‌, ಗುರನಾಥ ಚೌಹಾಣ್‌, ಶ್ರೀವರ, ನೇಹಾ ಎನ್‌. ಪೂಜಾರಿ, ಸಹನಾ ಜಯಪ್ರಕಾಶ್‌, ಆಯಾಝ್‌, ಪಿಎ ಕಾಲೇಜಿನ ಝೈಬುನ್ನಿಸಾ ಮೊದಲಾದವರು ಕಡ್ಡಾಯ ಮತದಾನ, ನೋಟಾದ ಮಹತ್ವ, ಅಪರಾಧ ಪ್ರಕರಣಗಳನ್ನು ಹೊಂದಿರುವವರು ಚುನಾವಣೆಯಲ್ಲಿ ಸ್ಪರ್ಧೆಗೆ ತಡೆ, ಜನಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆ, ಪಕ್ಷಾಂತರ ಕಾಯಿದೆ ಕಟ್ಟುನಿಟ್ಟಿನ ಪಾಲನೆ, ಏಕ ಮತದಾನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಗರ್ಭಿಣಿಯರ ಮನೆಗೇ ಊಟ ಕೊಡಿ: ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

ಶಾಸಕ ವೇದವ್ಯಾಸ ಕಾಮತ್‌ , ಮೇಯರ್‌ ಪ್ರೇಮಾನಂದ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಬಾರ್‌ ಅಸೋಸಿಯೇಶನ್‌ ಉಪಾಧ್ಯಕ್ಷ ಜಿನೇಂದ್ರ, ಎಸ್‌ಡಿಎಂ ಲಾ ಕಾಲೇಜು ಉಪನ್ಯಾಸಕಿ ಡಾ.ಶಾಹಿಮಾ ಇದ್ದರು.
ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್‌ ಸ್ವಾಗತಿಸಿದರು. ಲೀಡ್‌ ಕಾಲೇಜಿನ ಮುಖ್ಯಸ್ಥ ಡಾ.ರಾಜಶೇಖರ ಹೆಬ್ಬಾರ್‌ ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

ಚುನಾವಣೆಗಳು ಇಂದು ಎಲ್ಲ ನಿಟ್ಟಿನಲ್ಲಿಯೂ ಗಂಭೀರವಾದ ಸ್ಥಿತಿಗೆ ತಲುಪಿದ್ದು, ಹಣಬಲ, ಜಾತಿಬಲ, ತೋಳ್ಬಲ, ಪಕ್ಷಾಂತರ ಬಲದಿಂದಲೇ ಮುಳುಗಿದೆ. ನ್ಯಾಯಸಮ್ಮತ, ಪರಿಶುದ್ಧ ಚುನಾವಣೆ ಮಾಡುವ ವಾತಾವರಣವೇ ಇಲ್ಲದಂತಾಗಿದೆ. ಪಾಕಿಸ್ತಾನ(Pakistan) ಪರ ನಮ್ಮಲ್ಲಿ ಘೋಷಣೆ ಕೂಗುವುದು ಕೇಳಿದ್ದೇವೆ. ಇದು ವಾಕ್‌ ಸ್ವಾತಂತ್ರ್ಯದ ದುರುಪಯೋಗ. ನಮ್ಮಲ್ಲಿ ಹಕ್ಕು ಮಾತ್ರ ಕೇಳುತ್ತಾರೆ, ಆದರೆ ಕರ್ತವ್ಯ ಏನು ಎಂಬುದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಹಕ್ಕಿನ ಜತೆ ಜವಾಬ್ದಾರಿಯೂ ಗೊತ್ತಿರಬೇಕು. ಮತದಾನದ ನೈತಿಕತೆಯೂ ಜವಾಬ್ದಾರಿಯ ಭಾಗವಾಗಬೇಕು ಅಂತ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.