ಹು​ಬ್ಬ​ಳ್ಳಿ(ಮಾ.14): ಮ​ಹಾ​ರಾ​ಷ್ಟ್ರದಲ್ಲಿ ಪ್ರತಿವರ್ಷ ನಾಗಪುರದಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಅದೇ ಮಾ​ದ​ರಿ​ಯಲ್ಲೇ ಬೆ​ಳ​ಗಾ​ವಿ​ಯಲ್ಲಿ ಪ್ರತಿ ವರ್ಷವು ಅಧಿ​ವೇ​ಶನ ನ​ಡೆ​ಸ​ಬೇಕು ಎಂದು ವಿ​ಧಾನ ಪ​ರಿ​ಷತ್‌ ಸ​ಭಾ​ಪತಿ ಬ​ಸ​ವ​ರಾಜ್‌ ಹೊ​ರಟ್ಟಿ ಒತ್ತಾಯಿಸಿದ್ದಾರೆ. 

ನಗರದಲ್ಲಿ ಶ​ನಿ​ವಾ​ರ ಸುದ್ದಿಗಾರರೊಂದಿಗೆ ಮಾ​ತ​ನಾ​ಡಿದ ಅ​ವರು, ಸ​ಭಾ​ಪತಿ ಮತ್ತು ಸ​ಭಾ​ಧ್ಯಕ್ಷ ಇ​ಬ್ಬರೂ ಉ​ತ್ತರ ಕ​ರ್ನಾ​ಟ​ಕ​ದ​ವರೇ ಇ​ದ್ದೇವೆ. ಹೀ​ಗಾಗಿ ಈ ವರ್ಷ ಬೆ​ಳ​ಗಾ​ವಿ​ಯಲ್ಲಿ ಅ​ಧಿ​ವೇ​ಶನ ನ​ಡೆ​ಸು​ವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒ​ತ್ತಾ​ಯಿ​ಸ​ಲಾ​ಗು​ವುದು. ಮ​ಹಾ​ರಾ​ಷ್ಟ್ರ​ದಲ್ಲಿ ಪ್ರತಿ ವರ್ಷ ಹೇಗೆ ನಾ​ಗ​ಪು​ರ​ದಲ್ಲೂ ಅಧಿ​ವೇ​ಶನ ನ​ಡೆ​ಸ​ಲಾ​ಗು​ತ್ತಿದೆ ಎ​ನ್ನು​ವು​ದನ್ನು ನೋ​ಡಿ​ಕೊಂಡು ಬ​ರುವ ವಿ​ಚಾ​ರವೂ ಇದೆ ಎಂದರು. 

ಶಾಸಕ ಸಂಗ​ಮೇ​ಶ್‌ ನಡವಳಿಕೆಗೆ ಸಭಾಪತಿ ಹೊರಟ್ಟಿ ಬೇಸರ

ಸರ್ಕಾರ ಈ​ಗಾ​ಗಲೇ ಅನೇಕ ಸ​ಮಿ​ತಿ​ಗ​ಳನ್ನು ರ​ಚನೆ ಮಾಡಿದೆ. ಆ ಸ​ಮಿ​ತಿ​ಗಳು ಸರ್ಕಾರಕ್ಕೆ ವರದಿ ನೀಡಿವೆಯಾ? ಅವು ಅ​ನು​ಷ್ಠಾ​ನಕ್ಕೆ ಬಂದಿ​ದೆಯೇ? ಎಂಬುದರ ಬಗ್ಗೆ ಮಾ​ಹಿತಿ ಪ​ಡೆ​ಯ​ಲಾ​ಗು​ವುದು ಎಂದು ಸುದ್ದಿಗಾರರ ಪ್ರಶ್ನೆಗೆ ಹೊರಟ್ಟಿ ಪ್ರತಿಕ್ರಿಯಿಸಿದರು.